ಬೆಂಗಳೂರು-ಸೇಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಹುಚ್ಚಾಟ; ಬೈಕ್​ ಡಿವೈಡರ್ ಗೆ ಡಿಕ್ಕಿ

ಬೆಂಗಳೂರು-ಸೇಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಹುಚ್ಚಾಟ; ಬೈಕ್​ ಡಿವೈಡರ್ ಗೆ ಡಿಕ್ಕಿ

ರಾಮು, ಆನೇಕಲ್​
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 15, 2024 | 5:27 PM

ಮೂವರು ಯುವಕರು ಬೈಕ್​​ನಲ್ಲಿ ಕುಳಿತುಕೊಂಡು ಪುಂಡಾಟ ಮೆರೆದಿದ್ದಾರೆ. ಬೆಂಗಳೂರು-ಸೇಲಂ ರಾಷ್ಟ್ರೀಯ ಹೆದ್ದಾರಿ(Bangalore-Salem National Highway)ಯಲ್ಲಿ ಬೈಕ್​ನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ಬೈಕ್​ನಿಂದ ಯುವಕರು ಹಾರಿ ಕೆಳಗೆ ಬಿದ್ದಿದ್ದಾರೆ.

ಬೆಂಗಳೂರು, ಫೆ.15: ಬೆಂಗಳೂರು-ಸೇಲಂ ರಾಷ್ಟ್ರೀಯ ಹೆದ್ದಾರಿ(Bangalore-Salem National Highway)ಯಲ್ಲಿ ಯುವಕರ ಹುಚ್ಚಾಟ ಮೀತಿಮೀರಿದ್ದು, ಅಡ್ಡಾದಿಡ್ಡಿಯಾಗಿ ಬೈಕ್ ಚಾಲನೆ ಮಾಡಿದ ಪರಿಣಾಮ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಒಂದೇ ಬೈಕ್​ನಲ್ಲಿ ಮೂರು ಜನ ಯುವಕರು ಸವಾರಿ ಮಾಡುತ್ತಿದ್ದರು. ಅಷ್ಟೇ ಅಲ್ಲ, ಬೈಕ್​ನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ಬೈಕ್​ನಿಂದ ಯುವಕರು ಹಾರಿ ಕೆಳಗೆ ಬಿದ್ದಿದ್ದಾರೆ. ಹೆದ್ದಾರಿಯಲ್ಲಿನ ಯುವಕರ ಪುಂಡಾಟ ಮೊಬೈಲ್​ನಲ್ಲಿ ಸೆರೆಯಾಗಿದೆ. ಇತ್ತೀಚಿಗೆ ಹೆದ್ದಾರಿಯಲ್ಲಿ ಯುವಕರ ಪುಂಡಾಟ ಹೆಚ್ಚಾಗುತ್ತಿದ್ದು, ಇದಕ್ಕೆ ಪೊಲೀಸರು ಬ್ರೇಕ್​ ಹಾಕಬೇಕಿದೆ. ಇಲ್ಲದಿದ್ದರೆ ಇತರ ವಾಹನ ಸವಾರರಿಗೂ ತೊಂದರೆ ಆಗಲಿದೆ. ಇನ್ನು ಗಾಯಗೊಂಡ ಯುವಕರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Feb 15, 2024 05:27 PM