ಹಾರ್ಮುಜ್ ಜಲಸಂಧಿಯಲ್ಲಿ ಕಂಟೇನರ್ ಹಡಗು ಮುಳುಗಡೆ: ದುಬಾರಿ ಐಫೋನ್​ಗಳು ನೀರುಪಾಲು

Updated on: Oct 16, 2026 | 7:34 AM

ಹಾರ್ಮುಜ್ ಜಲಸಂಧಿಯಲ್ಲಿ ಕಂಟೇನರ್ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಸಿಂಗಾಪುರ್ ಧ್ವಜದ ಜಿಎಫ್​ಎಸ್ ಪ್ರೈಡ್ ಹಡಗು ಬೆಂಕಿ ಹತ್ತಿಕೊಂಡು ಮುಳುಗಿದೆ. ಎರಡು ಸಾವಿರದ ಐನೂರು ಕಂಟೇನರ್‌ಗಳು ಸಮುದ್ರ ಪಾಲಾಗಿದ್ದು, ದುಬಾರಿ ಬೆಲೆಯ ಐಫೋನ್​ಗಳು ಮತ್ತು ಇತರೆ ವಸ್ತುಗಳು ನಾಶವಾಗಿವೆ. 21 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

ಇರಾನ್, ಅಕ್ಟೋಬರ್ 16: ಹಾರ್ಮುಜ್ ಜಲಸಂಧಿಯಲ್ಲಿ ಕಂಟೇನರ್ ಹಡಗಿನ ಮೇಲೆ ಕ್ಷಿಪಣಿ ದಾಳಿಯ ಪರಿಣಾಮವಾಗಿ ಹಡಗು ಬೆಂಕಿಗಾಹುತಿಯಾಗಿ ಮುಳುಗಿದೆ. ಈ ಘಟನೆ ಮಧ್ಯಪ್ರಾಚ್ಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಸಿಂಗಾಪುರ ಧ್ವಜವನ್ನು ಹೊಂದಿದ್ದ ಜಿಎಫ್​ಎಸ್ ಪ್ರೈಡ್ ಹೆಸರಿನ ಈ ಹಡಗು ಸುಮಾರು ಎರಡೂವರೆ ಸಾವಿರ ಕಂಟೇನರ್​ಗಳನ್ನು ಸಾಗಿಸುತ್ತಿತ್ತು. ಕ್ಷಿಪಣಿಯ ದಾಳಿಯಿಂದಾಗಿ ಹಡಗು ಸಂಪೂರ್ಣವಾಗಿ ಹೊತ್ತಿ ಉರಿದಿದೆ.

ದಾಳಿಯ ಪರಿಣಾಮವಾಗಿ, ಹಡಗಿನಲ್ಲಿದ್ದ ಸಾವಿರಾರು ಸರಕು ಕಂಟೇನರ್​ಗಳು ಸಮುದ್ರ ಪಾಲಾಗಿವೆ. ವಿಶೇಷವಾಗಿ, ನೀರಿನಲ್ಲಿ ದುಬಾರಿ ಬೆಲೆಯ ಐಫೋನ್​ಗಳು ತೇಲುತ್ತಿರುವುದು ಕಂಡುಬಂದಿದೆ. ಐಫೋನ್​ಗಳ ಜೊತೆಗೆ, ಹಲವಾರು ದುಬಾರಿ ವಸ್ತುಗಳು ಮತ್ತು ಸುಗಂಧ ದ್ರವ್ಯಗಳು ಕೂಡ ನಾಶವಾಗಿವೆ. ಹಡಗಿನಲ್ಲಿದ್ದ ಎಲ್ಲಾ ಬೆಲೆಬಾಳುವ ಸರಕುಗಳು ನೀರು ಪಾಲಾಗಿವೆ ಎಂದು ತಿಳಿದುಬಂದಿದೆ.

ದಾಳಿಗೊಳಗಾದ ಹಡಗಿನಲ್ಲಿದ್ದ 21 ಮಂದಿ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಹಾರ್ಮುಜ್ ಜಲಸಂಧಿಯಂತಹ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ದಾಳಿಗಳು ಸಾಗಾಟ ಮತ್ತು ವ್ಯಾಪಾರ ಮಾರ್ಗಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಈ ಘಟನೆಯು ಅಪಾರ ಆರ್ಥಿಕ ನಷ್ಟವನ್ನು ಉಂಟುಮಾಡಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More