ಸ್ಕೂಟರ್ ಮತ್ತು ಆಟೋರಿಕ್ಷಾದ ಮಿಶ್ರಣದಂತೆ ಕಾಣುವ ಸ್ಟ್ರಾಮ್ ಆರ್3 ಇ-ಕಾರಿನ ಬೆಲೆ ರೂ 4.5 ಲಕ್ಷ
ನಿಮಗೆ ಸ್ಟ್ರಾಮ್ ಆರ್3 ಕಾರು ಬೇಕಿದ್ದರೆ ರೂ. 10,000 ನೀಡಿ ಬುಕ್ ಮಾಡಬಹುದು. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಇದುವರೆಗೆ 7,500 ಜನ ಈ ಕಾರನ್ನು ಬುಕ್ ಮಾಡಿದ್ದಾರೆ.
ಇಲ್ಲಿರುವ ವಾಹನವನ್ನು ನೋಡಿ. ಇದು ಕಾರಿನ ಹಾಗೆಯೂ ಕಾಣುತ್ತದೆ, ಮೂರೇ ಚಕ್ರಗಳಿರುವುದರಿಂದ ಆಟೋರಿಕ್ಷಾ ಥರವೂ ಕಾಣುತ್ತದೆ. ಹಾಗೆಯೇ ಸ್ಕೂಟರ್ ಮತ್ತು ಅಟೋರಿಕ್ಷಾದ ಮಿಕ್ಸ್ ಅಂಡ್ ಮ್ಯಾಚ್ ರೀತಿಯೂ ಕಾಣುತ್ತದೆ. ಅಂದಹಾಗೆ ಏನಿದು, ಹೀಗೆ ಯಾಕಿದೆ ಅಂದ್ರಾ? ಓಕೆ, ಇದು ಮುಂಬೈನ ಸ್ಟಾರ್ಟ್ ಅಪ್ ಕಂಪನಿಯೊಂದು ತಯಾರಿಸಿ ಮಾರುಕಟ್ಟೆ ಪ್ರವೇಶಿಸುವ ಹಂತದಲ್ಲಿರುವ ಇಲೆಕ್ಟ್ರಿಕ್ ಕಾರು. ಅದಕ್ಕೆ ಕಂಪನಿ ಇಟ್ಟಿರುವ ಹೆಸರು ಸ್ಟ್ರಾಮ್ ಆರ್3. ನಾವು ಪದೇಪದೆ ಈ ಮಾತನ್ನು ಹೇಳುತ್ತಿದ್ದೇವೆ. ಇನ್ನೇನಿದ್ದರೂ ವಿದ್ಯುಚ್ಛಾಲಿತ ವಾಹನಗಳ ಜಮಾನಾ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಜನರ ಮುಂದಿರುವ ಏಕೈಕ ಆಪ್ಷನ್ ಅಂದರೆ, ಇಲೆಕ್ಟ್ರಿಕ್ ವಾಹನಗಳು.
ಕೆಲ ಇ-ಸ್ಕೂಟರ್ಗಳು ಈಗಾಗಲೇ ಮಾರ್ಕೆಟ್ ಪ್ರವೇಶಿಸಿವೆ. ಒಂದೆರಡು ಕಂಪನಿಗಳ ಕಾರುಗಳು ಸಹ ಬಂದಿವೆ. ರೇವಾ ಮತ್ತು ಮಹಿಂದ್ರ ಕಂಪನಿಯ e2ಒ ಪ್ಲಸ್ ಕಾರುಗಳನ್ನು ನಾವು ನೋಡಿದ್ದೇವೆ.
ನಿಮಗೆ ಸ್ಟ್ರಾಮ್ ಆರ್3 ಕಾರು ಬೇಕಿದ್ದರೆ ರೂ. 10,000 ನೀಡಿ ಬುಕ್ ಮಾಡಬಹುದು. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಇದುವರೆಗೆ 7,500 ಜನ ಈ ಕಾರನ್ನು ಬುಕ್ ಮಾಡಿದ್ದಾರೆ.
ಕಾರು ಹೇಗಿದೆ ಅಂತ ನೋಡೋದಾದರೆ, ಇದಕ್ಕೆ ಕೇವಲ ಎರಡು ಡೋರ್ ಮತ್ತು ಎರಡು ಮಾತ್ರ ಸೀಟಿವೆ. ಕಾರಿಗೆ ಲೀಥಿಯಂ ಬ್ಯಾಟರಿ ಅಳವಡಿಸಲಾಗಿದೆ. ಈ ಕಾರಿನ ಅತಿ ದೊಡ್ಡ ಪ್ಲಸ್ ಅಂದರೆ ಅದನ್ನು ರೋಡ್ ಮೇಲೆಯೇ ಚಾರ್ಜ್ ಮಾಡಬಹುದು ಮತ್ತು ಪ್ರತಿ ಚಾರ್ಜ್ಗೆ 200 ಕಿಮೀ ದೂರವನ್ನು ಕ್ರಮಿಸಬಹುದು. ಕಾರಿನ ಗರಿಷ್ಟ ವೇಗ 80 ಕಿಮೀ/ಗಂಟೆಗೆ,
ಕಂಪನಿಯು ಮೂರು ವರ್ಷ ಅಥವಾ 1 ಲಕ್ಷ ಕಿಮೀ ವಾರಂಟಿಯನ್ನು ನೀಡುತ್ತದೆ. ಅಂದಹಾಗೆ ಬೆಲೆ ರೂ 4.5 ಲಕ್ಷ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: Shocking Video: ಬೈಕ್ಗಳಿಗೆ ಡಿಕ್ಕಿ ಹೊಡೆದು, ರಸ್ತೆಯ ಪಕ್ಕದವರ ಮೇಲೆ ಹರಿದ ಐಷಾರಾಮಿ ಕಾರು; ಶಾಕಿಂಗ್ ವಿಡಿಯೋ ವೈರಲ್