Big Announcement: ವಿದ್ಯಾರ್ಥಿಗಳು ಜೂನ್ 15ರವರೆಗೆ ಹಳೆಯ ಬಸ್​ಪಾಸ್​ನೊಂದಿಗೆ ಸರ್ಕಾರೀ ಬಸ್​ಗಳಲ್ಲಿ ಪ್ರಯಾಣಿಸಬಹುದು: ರಾಮಲಿಂಗಾರೆಡ್ಡಿ

|

Updated on: Jun 01, 2023 | 6:25 PM

ಜೂನ್ 15ರೊಳಗೆ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.

ಬೆಂಗಳೂರು: ಬಸ್ ಪಾಸ್ ಕುರಿತು ವಿದ್ಯಾರ್ಥಿಗಳಲ್ಲಿ ಉಂಟಾಗಿದ್ದ ಗೊಂದಲವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಾತ್ಕಾಲಿಕವಾಗಿ ದೂರ ಮಾಡಿದ್ದಾರೆ. ಜೂನ್ 15 ರವರೆಗೆ ವಿದ್ಯಾರ್ಥಿಗಳು ತಮ್ಮ ಕಳೆದ ಶೈಕ್ಷಣಿಕ ವರ್ಷದ ಪಾಸು ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆಥವಾ ಕಾಲೇಜಿಗೆ ಪಾವತಿಸಿದ ಶುಲ್ಕದ ರಸೀತಿಯನ್ನು (receipt) ಬಿಎಮ್ ಟಿಸಿ (BMTC) ಇಲ್ಲವೇ ಕೆಎಸ್ ಆರ್ ಟಿಸಿ (KSRTC) ಬಸ್ ಗಳಲ್ಲಿ ಕಂಡಕ್ಟರ್ ಗೆ ತೋರಿಸಿದರೆ ಸಾಕು. ಜೂನ್ 15 ರ ಬಳಿಕ ಹೊಸ ಬಸ್ ಪಾಸ್ ಗಳ ವಿತರಣೆ ಆರಂಭವಾಗಲಿದೆ. ಸಾರಿಗೆ ಸಚಿವರು ಟ್ವೀಟ್ ಮೂಲಕ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಅಷ್ಟರೊಳಗೆ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on