ಸಂಕ್ರಾಂತಿ ಸಮಯದಲ್ಲಿ ಅರ್ಥಪೂರ್ಣ ವಸ್ತು ಪ್ರದರ್ಶನ ನಡೆಸಿಕೊಟ್ಟ ಶಿಡ್ಲಘಟ್ಟ ಸಿಟಿಜನ್ ಶಾಲೆಯ ಮಕ್ಕಳು, ವೀಡಿಯೊ ನೋಡಿ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿಟಿಜನ್ ಶಾಲಾ ಆವರಣದಲ್ಲಿ ದೊಡ್ಡದಾದ ರಾಗಿ ಗುಡ್ಡೆಗೆ ಕಬ್ಬು, ಕಡಲೆಕಾಯಿ, ಎಳ್ಳು, ಬೆಲ್ಲ ಸಿಂಗರಿಸಿ ಪೂಜೆ ಸಲ್ಲಿಸಿ ಸಂಕ್ರಾಂತಿ ಸುಗ್ಗಿ ಆಚರಣೆ ಮಾಡಲಾಯಿತು. ಶಾಲೆಯ ಎಲ್ಲಾ ಮಕ್ಕಳು ತಮ್ಮ ಸಾಮರ್ಥ್ಯ ಮತ್ತು ಕಲಿಕೆಯ ಬುದ್ದಿಶಕ್ತಿಯಿಂದ ತಮ್ಮಲ್ಲಿನ ವಿಭಿನ್ನ ಪ್ರತಿಭೆ ಅನಾವರಣ ಮಾಡಿದರು.
ಶಿಡ್ಲಘಟ್ಟ, ಜನವರಿ 15: ನಾಡಿನಾದ್ಯಂತ ಈಗ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಇನ್ನು ಶಿಡ್ಲಘಟ್ಟ ನಗರದ ಸಿಟಿಜನ್ ಶಾಲೆಯಲ್ಲಿ 2024 ಶೈಕ್ಷಣಿಕ ವರ್ಷದ ಮಕ್ಕಳು ಶಾಲಾ ಕಲಿಕೆ ಸಾಮರ್ಥ್ಯದ ವಸ್ತುಗಳ ಮೂಲಕ ಅರ್ಥಪೂರ್ಣ ವಸ್ತುಪ್ರದರ್ಶನ ನಡೆಸಿಕೊಟ್ಟರು. ನಗರದ ಪ್ರತಿಷ್ಠಿತ ಸಿಟಿಜನ್ ಶಾಲೆಯಲ್ಲಿ ವಿಜ್ಞಾನ ವಿಭಾಗದ ಮಕ್ಕಳ ಕಲಿಕಾ ವಸ್ತು ಪ್ರದರ್ಶನವನ್ನು ಡಾ. ಸತ್ಯನಾರಾಯಣ ರಾವ್ ಅವರು ಮೊನ್ನೆ ಶನಿವಾರ ಉದ್ಘಾಟಿಸಿದರು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿಟಿಜನ್ ಶಾಲಾ ಆವರಣದಲ್ಲಿ ದೊಡ್ಡದಾದ ರಾಗಿ ಗುಡ್ಡೆಗೆ ಕಬ್ಬು, ಕಡಲೆಕಾಯಿ, ಎಳ್ಳು, ಬೆಲ್ಲ ಸಿಂಗರಿಸಿ ಪೂಜೆ ಸಲ್ಲಿಸಿ ಸಂಕ್ರಾಂತಿ ಸುಗ್ಗಿ ಆಚರಣೆ ಮಾಡಲಾಯಿತು. ಶಾಲೆಯ ಎಲ್ಲಾ ಮಕ್ಕಳು ತಮ್ಮ ಸಾಮರ್ಥ್ಯ ಮತ್ತು ಕಲಿಕೆಯ ಬುದ್ದಿಶಕ್ತಿಯಿಂದ ತಮ್ಮಲ್ಲಿನ ವಿಭಿನ್ನ ಪ್ರತಿಭೆ ಅನಾವರಣ ಮಾಡಿದರು.
ಈ ವಿಜ್ಞಾನ ವಸ್ತುಪ್ರದರ್ಶನ ನೋಡಿದರೆ ಹಿಂದಿನ ಕಾಲದ ಗುರುಕುಲ ನೋಡಿದಂತೆ ಭಾಸವಾಯಿತು. ಇದರಿಂದ ಮಕ್ಕಳಲ್ಲಿ ವಿಜ್ಞಾನದಲ್ಲಿನ ಆಸಕ್ತಿಯನ್ನು ಉತ್ತೇಜಿಸಿ, ಹೆಚ್ಚಿನ ಜ್ಞಾನ ಬೆಳೆಸಿದಂತಾಗುತ್ತದೆ ಎಂದು ಡಾ. ಸತ್ಯನಾರಾಯಣ ರಾವ್ ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್ ರಾಮಚಂದ್ರ ರೆಡ್ಡಿ, ಗೌರವಾಧ್ಯಕ್ಷರಾದ ಮಂಗಳಮ್ಮ, ಕಾರ್ಯದರ್ಶಿ ಕೆ.ಆರ್. ಅನಿಲ್ ಶೌರಿ, ಪ್ರಾಂಶುಪಾಲರಾದ ಎನ್. ಶಿವಣ್ಣ ಮತ್ತು ಮುಖ್ಯೋಪಾಧ್ಯಾಯರಾದ ಎನ್. ಸತೀಶ್ ಹಾಜರಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ