ಶಿಕ್ಷಕ ಶಾಲೆಯಿಂದ ವರ್ಗಾವಣೆ; ಸರ್ ಬಿಟ್ ಹೋಗ್ಬೇಡಿ, ಪ್ಲೀಸ್ ಸರ್ ಅಂತ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು- ವಿಡಿಯೋ ಇದೆ

Edited By: sandhya thejappa

Updated on: Jan 18, 2022 | 10:39 AM

ಕನ್ನಡ ಬೋಧನೆ ಜೊತೆಗೆ ವಿದ್ಯಾರ್ಥಿಗಳ ಸ್ನೇಹ ಜೀವಿಯಾಗಿದ್ದ ಶಿಕ್ಷಕ ತಿಪ್ಪಣ್ಣ ವರ್ಗಾವಣೆ ಆಗಿರುವುದಕ್ಕೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಶಿಕ್ಷಕನ ಕೈಕಾಲು ಹಿಡಿದು ಸರ್ ಬಿಟ್ ಹೋಗ್ಬೇಡಿ, ಸರ್ ಪ್ಲೀಸ್ ಅಂತ ಕಣ್ಣೀರು ಹಾಕಿದ್ದಾರೆ.

ರಾಯಚೂರು: ನೆಚ್ಚಿನ ಗುರು ವರ್ಗಾವಣೆಯಾಗಿದ್ದಕ್ಕೆ ಶಾಲಾ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. 14 ವರ್ಷದ ಶಿಕ್ಷಕನ ಸೇವೆಗೆ ವಿದ್ಯಾರ್ಥಿಗಳು ಮಿಡಿದಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬಯ್ಯಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕನ್ನಡ ಶಿಕ್ಷಕ ತಿಪ್ಪಣ್ಣ ತಾವರೆಗೆರಾ ಎಂಬುವವರು ವರ್ಗಾವಣೆಯಾಗಿದ್ದಾರೆ. ಕನ್ನಡ ಬೋಧನೆ ಜೊತೆಗೆ ವಿದ್ಯಾರ್ಥಿಗಳ ಸ್ನೇಹ ಜೀವಿಯಾಗಿದ್ದ ಶಿಕ್ಷಕ ತಿಪ್ಪಣ್ಣ ವರ್ಗಾವಣೆ ಆಗಿರುವುದಕ್ಕೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಶಿಕ್ಷಕನ ಕೈಕಾಲು ಹಿಡಿದು ಸರ್ ಬಿಟ್ ಹೋಗ್ಬೇಡಿ, ಸರ್ ಪ್ಲೀಸ್ ಅಂತ ಕಣ್ಣೀರು ಹಾಕಿದ್ದಾರೆ. ವಿದ್ಯಾರ್ಥಿಗಳ ದುಖಃ ಸಹಿಸಲಾಗದೆ ಶಿಕ್ಷಕನೂ ಕಣ್ಣೀರಿಟ್ಟಿದ್ದಾರೆ. ಶಿಕ್ಷಕ ತಿಪ್ಪಣ್ಣ ಗ್ರಾಮದ ಲೆಕ್ಕಪತ್ರಗಳ ಉಸ್ತುವಾರಿಯೂ ಆಗಿದ್ದರು. ಗ್ರಾಮಕ್ಕೆ ಹಿರಿಯನಂತಿದ್ದ ತಿಪ್ಪಣ್ಣ ವರ್ಗಾವಣೆಯಿಂದ ಗ್ರಾಮಸ್ಥರೂ ಬೇಸರಗೊಂಡಿದ್ದಾರೆ. ಬಯ್ಯಾಪುರ ಗ್ರಾಮದಿಂದ ಕುಷ್ಟಗಿ ತಾಲೂಕಿನ ತಾವರಗೆರಾದ ಬಾಲಕಿಯರ ಶಾಲೆಗೆ ವರ್ಗಾವಣೆ ಆಗಿದ್ದಾರೆ.

ಇದನ್ನೂ ಓದಿ

ಉಡುಪಿಯ ಕೃಷ್ಣ ಮಠದ ಪರ್ಯಾಯ ಮಹೋತ್ಸವ; ದ್ವೈವಾರ್ಷಿಕ ಪೂಜಾಧಿಕಾರ ವಹಿಸಿಕೊಂಡ ಕೃಷ್ಣಾಪುರ ಶ್ರೀ

Video: ಉತ್ತರಪ್ರದೇಶ ರಾಜಕೀಯ ಪಕ್ಷಗಳ ನಡುವಿನ ಕಚ್ಚಾಟವೂ ಈಗ ಕಿವಿಗೆ ಇಂಪು; ಒಂದರ ಬೆನ್ನಿಗೆ ಇನ್ನೊಂದು ಹಾಡುಗಳು ವೈರಲ್​

Loading...
Unable to load recommendations.
Follow Us