Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಉತ್ತರಪ್ರದೇಶ ರಾಜಕೀಯ ಪಕ್ಷಗಳ ನಡುವಿನ ಕಚ್ಚಾಟವೂ ಈಗ ಕಿವಿಗೆ ಇಂಪು; ಒಂದರ ಬೆನ್ನಿಗೆ ಇನ್ನೊಂದು ಹಾಡುಗಳು ವೈರಲ್​

UP Assembly Election 2022: ರವಿ ಕಿಶನ್​ ತಮ್ಮ 5 ನಿಮಿಷಗಳ ಹಾಡಿನ ಮೂಲಕ ಹೊಗಳಿದ್ದಾರೆ. ಬಿಜೆಪಿಯನ್ನು ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ತರುವಂತೆ ಈ ಹಾಡಿನ ಮೂಲಕ ಮನವಿ ಮಾಡಿದ್ದಾರೆ. 

Video: ಉತ್ತರಪ್ರದೇಶ ರಾಜಕೀಯ ಪಕ್ಷಗಳ ನಡುವಿನ ಕಚ್ಚಾಟವೂ ಈಗ ಕಿವಿಗೆ ಇಂಪು; ಒಂದರ ಬೆನ್ನಿಗೆ ಇನ್ನೊಂದು ಹಾಡುಗಳು ವೈರಲ್​
ರವಿ ಕಿಶನ್​ ಮತ್ತು ನೇಹಾ ರಾಥೋಡ್​
Follow us
TV9 Web
| Updated By: Lakshmi Hegde

Updated on: Jan 18, 2022 | 9:14 AM

ಉತ್ತರ ಪ್ರದೇಶ ಸೇರಿ ಒಟ್ಟು 5 ರಾಜ್ಯಗಳ ಚುನಾವಣೆ ಸಮೀಪಿಸುತ್ತಿದೆ. ಈ ಮಧ್ಯೆ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ, ವಾಗ್ದಾಳಿ-ಪ್ರತಿವಾಗ್ದಾಳಿಗಳೆಲ್ಲ ಸಾಮಾನ್ಯ. ಹೀಗಿರುವಾಗ ಉತ್ತರ ಪ್ರದೇಶಲ್ಲಿ ರಾಜಯಕೀಯ ಪಕ್ಷಗಳ ನಡುವೆ ಗಾಯನ ಸಮರ ಶುರುವಾಗಿದೆ. ಇತ್ತೀಚೆಗೆ ಬಿಜೆಪಿ ನಾಯಕ, ಸಂಸದ ರವಿ ಕಿಶನ್​ ಅವರು ಉತ್ತರಪ್ರದೇಶ ಸರ್ಕಾರ, ಯೋಗಿ ಆದಿತ್ಯನಾಥ್​ ಅವರನ್ನು ಹೊಗಳಿ ಒಂದು ಹಾಡು ಹಾಡಿದ್ದರು. ಭೋಜಪುರಿ ನಟ, ಗಾಯಕರೂ ಆಗಿರುವ ರವಿ ಕಿಶನ್​ ಯುಪಿ ಮೆ ಸಬ್​ ಬಾ (ಉತ್ತರಪ್ರದೇಶದಲ್ಲಿ ಎಲ್ಲವೂ ಇದೆ) ಎಂಬ ಹಾಡನ್ನು ಹಾಡಿದ್ದರು. ಅದರಲ್ಲಿ, ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಕಳೆದ 5ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳ ಉಲ್ಲೇಖವಿದೆ.  ಇತ್ತೀಚೆಗೆ ಉದ್ಘಾಟನೆಯಾದ ಕುಶಿನಗರ ಏರ್​ಪೋರ್ಟ್ ಮತ್ತು ಜಾವರ್​ ಏರ್​ಪೋರ್ಟ್​ಗಳ ಉಲ್ಲೇಖವೂ ಇದೆ.  ಅಷ್ಟೇ ಅಲ್ಲ, ಉತ್ತರಪ್ರದೇಶ ಸರ್ಕಾರ ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸಿದ ರೀತಿ, ಕಾನೂನು ಸುವ್ಯವಸ್ಥೆ ಜಾರಿಗೊಳಿಸಿದ ರೀತಿಯಯನ್ನೂ ರವಿ ಕಿಶನ್​ ತಮ್ಮ 5 ನಿಮಿಷಗಳ ಹಾಡಿನ ಮೂಲಕ ಹೊಗಳಿದ್ದಾರೆ. ಬಿಜೆಪಿಯನ್ನು ಉತ್ತರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ತರುವಂತೆ ಈ ಹಾಡಿನ ಮೂಲಕ ಮನವಿ ಮಾಡಿದ್ದಾರೆ. 

ರವಿ ಕಿಶನ್​ ಹಾಡು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಇನ್ನೊಬ್ಬರು ಭೋಜಪುರಿ ಗಾಯಕ ನೇಹಾ ರಾಥೋಡ್​ ಈ ಹಾಡಿಗೆ ಪ್ರತಿಯಾಗಿ ಒಂದು ಹಾಡು ಹಾಡಿದ್ದಾರೆ. ತಮ್ಮ ಹಾಡಿನಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ತೆಗಳಿದ್ದಾರೆ. ಸದ್ಯ ಪ್ರತಿಪಕ್ಷಗಳು ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ಯಾವೆಲ್ಲ ಆರೋಪ ಮಾಡುತ್ತಿವೆಯೋ, ಅದೆಲ್ಲವನ್ನೂ ಸೇರಿಸಿ ನೇಹಾ ಹಾಡು ಹಾಡಿದ್ದಾರೆ.

23 ವರ್ಷದ ನೇಹಾ ರಾಥೋಡ್​ ಇದೀಗ ಯುಪಿ ಮೆ ಕಾ ಬಾ (ಏನಿದೆ ಉತ್ತರಪ್ರದೇಶದಲ್ಲಿ) ಎಂಬ ಹಾಡನ್ನು ಟ್ವಿಟರ್​, ಯೂಟ್ಯೂಬ್​​ನಲ್ಲಿ ಹರಿಬಿಟ್ಟಿದ್ದಾರೆ. ಕೊವಿಡ್​ 19 ಎರಡನೇ ಅಲೆ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಶವಗಳು ಸಿಕ್ಕ ಬಗ್ಗೆ, ಹತ್ರಾಸ್​ ಅತ್ಯಾಚಾರ ಪ್ರಕರಣ ಮತ್ತು ಲಖಿಂಪುರದಲ್ಲಿ ರೈತರ ಕೊಲೆಯಾದ ಬಗ್ಗೆ ತಮ್ಮ ಹಾಡಿನ ಮೂಲಕವೇ ಸರ್ಕಾರವನ್ನು ಚುಚ್ಚಿದ್ದಾರೆ.  ಈ ಹಾಡನ್ನು ಮಹಾರಾಷ್ಟ್ರ ಸಚಿವ ನವಾಬ್​ ಮಲ್ಲಿಕ್​ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಅಂದಹಾಗೇ, ಈ ಹಾಡಿನ ಸಮರ ಇಲ್ಲಿಗೇ ಮುಗಿದಿಲ್ಲ. ಬಿಜೆಪಿಯ ಮತ್ತೊಬ್ಬರು ಸಂಸದರಾದ ಮನೋಜ್​ ತಿವಾರಿ ಇನ್ನೊಂದು ಹಾಡನ್ನು ಹಾಡಿದ್ದಾರೆ. ಮಂದಿರ್ ಅಬ್​ ಬನಾನೆ ಎಂಬ ಹಾಡಿದು. ಅಂದರೆ ಮಂದಿರ (ಅಯೋಧ್ಯೆ ರಾಮಮಂದಿರ) ನಿರ್ಮಾಣ ಶುರುವಾಗಿದೆ, ಎಲ್ಲೆಲ್ಲೂ ಕೇಸರಿ ಎಂಬ ಅರ್ಥ ಸೂಸುವ ಹಾಡು.  ಫೆ.10ರಿಂದ ಶುರುವಾಗಲಿರುವ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಹಾಡಿನ ಮೂಲಕ ಸಮರ ಶುರುವಾಗಿದೆ.

ಇದನ್ನೂ ಓದಿ: ಮದುವೆಯ ಬಳಿಕವೂ ಸಂಬಂಧಿಕನ ಜೊತೆ ಪ್ರೀತಿ; ಬಾಡಿಗೆ ಮನೆಯಲ್ಲಿ ಪ್ರಿಯಕರನ ಜೊತೆ ಆತ್ಮಹತ್ಯೆಗೆ ಶರಣಾದ ಮಹಿಳೆ

ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!