‘ಅಡಿಪೊಳಿ’; ಕೇರಳದಲ್ಲಿ ‘ಸು ಫ್ರಮ್ ಸೋ’ ನೋಡಿದವರದ್ದು ಒಂದೇ ರಿಯಾಕ್ಷನ್
‘ಸು ಫ್ರಮ್ ಸೋ’ ಸಿನಿಮಾ ಸಾಕಷ್ಟು ನಿರೀಕ್ಷೆಯೊಂದಿಗೆ ರಿಲೀಸ್ ಆಯಿತು.ಈ ನಿರೀಕ್ಷೆಯನ್ನೂ ಮೀರಿ ಚಿತ್ರ ಯಶಸ್ಸು ಕಂಡಿದೆ ಎಂದರೂ ತಪ್ಪಾಗಲಾರದು. ಚಿತ್ರದ ಮೂಲಕ ನಿರ್ಮಾಪಕ ರಾಜ್ ಬಿ. ಶೆಟ್ಟಿ ಹಾಗೂ ಮೊದಲಾದವರು ಗೆಲುವಿನ ನಗೆ ಬೀರಿದ್ದಾರೆ. ನಿರ್ದೇಶಕ ಜೆಪಿ ತುಮಿನಾಡ ‘ಸು ಫ್ರಮ್ ಸೋ’ ಮೂಲಕ ಗೆದಿದ್ದಾರೆ.
‘ಅಡಿಪೊಳಿ’- ಇದು ಮಲಯಾಳಂ ಶಬ್ದ. ಇದರ ಅರ್ಥ ಸಖತ್ ಆಗಿದೆ ಎಂದು. ಕೇರಳದಲ್ಲಿ ‘ಸು ಫ್ರಮ್ ಸೋ’ (Su From So) ಸಿನಿಮಾ ನೋಡಿದವರು ‘ಅಡಿಪೊಳಿ’ ಎಂದು ಹೇಳುತ್ತಿದ್ದಾರೆ. ಈ ಚಿತ್ರವನ್ನು ಮಲಯಾಳದವರು ಸಾಕಷ್ಟು ಇಷ್ಟಪಟ್ಟಿದ್ದಾರೆ. ಸಿನಿಮಾನ ಮೆಚ್ಚಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರೀಮಿಯರ್ ಶೋ ನೋಡಿ ಬಂದವರು ‘ಅಡಿಪೊಳಿ’ ಎಂದು ಹೇಳುತ್ತಿದ್ದಾರೆ. ‘ಇದು ಕೇವಲ ಕನ್ನಡ ಸಿನಿಮಾ ಅಲ್ಲ’ ಎಂದಿದ್ದಾರೆ. ಕೊಚ್ಚಿಯಲ್ಲಿ ‘ಸು ಫ್ರಮ್ ಸೋ’ ಸಿನಿಮಾದ ಶೋಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ ಅನ್ನೋದು ವಿಶೇಷ. ವೀಕೆಂಡ್ನಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.