ತುಮಕೂರು: ಶಾಲೆಯಲ್ಲಿ ಮಕ್ಕಳಿರುವಾಗಲೇ ಕಾಣಿಸಿಕೊಂಡು ಕಣ್ಮರೆಯಾದ ಚಿರತೆಗಳು!
ತುಮಕೂರು ಗ್ರಾಮಾಂತರದ ಬೆಳಗುಂಬ ಬಳಿಯ ಶಾಲೆಯಲ್ಲಿ ಇಂದು ಬೆಳಿಗ್ಗೆ ಎರಡು ಚಿರತೆಗಳು ಕಾಣಿಸಿಕೊಂಡ ಘಟನೆ ನಡೆದಿದೆ. ಈ ಘಟನೆಯಿಂದ ಸದ್ಯ ಭಯದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಶಾಲಾ ಸಿಬ್ಬಂದಿಗಳಿಂದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿದರು. ವಿಡಿಯೋ ನೋಡಿ.
ತುಮಕೂರು, ಆಗಸ್ಟ್ 04: ತುಮಕೂರು ಗ್ರಾಮಾಂತರದ ಬೆಳಗುಂಬ ಬಳಿಯ ಶಾಲಾ ಆವರಣದಲ್ಲಿ ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಎರಡು ಚಿರತೆಗಳು (Leopards) ಕಾಣಿಸಿ ಕಣ್ಮರೆ ಆಗಿವೆ. ಮಕ್ಕಳು ಶಾಲೆಯಲ್ಲಿ ಇರುವಾಗಲೇ ಘಟನೆ ನಡೆದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಎರಡು ಚಿರತೆಗಳನ್ನು ಕಂಡ ಶಾಲಾ ಸಿಬ್ಬಂದಿಗಳಿಂದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
