ಕೊಪ್ಪಳದಲ್ಲಿ ಯುವಕನೊಬ್ಬನ ಕೊಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಅರಸಿದ್ದಿ ಹೇಳೋದೇನು?
ಲವ್ ಅಫೇರ್ ನಿಮಿತ್ತ ಹತ್ಯೆ ನಡೆದಿದೆ, ವೈಯಕ್ತಿಕ ಕಾರಣಗಳ ನಿಮಿತ್ತ ನಡೆದಿರುವ ಕೊಲೆ ಎಂದು ಎಸ್ಪಿ ರಾಮ್ ಅರಸಿದ್ದಿ ಪದೇಪದೆ ಹೇಳುತ್ತಾರೆ. ಅವರ ಹೇಳಿಕೆ ಹಿಂದಿನ ಕಾಳಜಿ ಮತ್ತು ಕಳಕಳಿಯನ್ನು ಜನ ಅರ್ಥಮಾಡಿಕೊಳ್ಳಬೇಕು. ಮುಸ್ಲಿಂ ಸಮುದಾಯದವನೊಬ್ಬ ಹಿಂದೂ ಯುವಕನ ಕೊಲೆ ಮಾಡಿದರೆ ಅಥವಾ ಹಿಂದೂ ಒಬ್ಬ ಮುಸಲ್ಮಾನನ್ನು ಕೊಂದರೆ ಅದು ಬೇರೆಯೇ ಬಣ್ಣ ಪಡೆದುಕೊಳ್ಳುತ್ತದೆ. ಅದು ಆಗಬಾರದು ಅನ್ನೋದೇ ಎಸ್ಪಿಯವರ ಕಾಳಜಿ.
ಕೊಪ್ಪಳ, ಆಗಸ್ಟ್ 4: ನಿನ್ನೆ ರಾತ್ರಿ 8 ಗಂಟೆಗೆ ಸುಮಾರಿಗೆ ನಗರದ ವಾರ್ಡ್ ನಂಬರ್ ಮೂರರಲ್ಲಿ ಗವಿಸಿದ್ದಪ್ಪ ನಾಯಕ್ (Gavi Siddappa Nayak) ಹೆಸರಿನ 26-ವರ್ಷ ವಯಸ್ಸಿನ ಯುವಕನ ಕೊಲೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಎಲ್ ಅರಸಿದ್ದಿ ಹೇಳಿದರು. ಸಾದಿಖ್ ಹುಸ್ಸೇನ್ ಎಂಬುವವನು ಎರಡು ಲಾಂಗ್ಗಳನ್ನು ಬಳಸಿ ಕೊಲೆ ಮಾಡಿದ್ದಾನೆ, ಹತ್ಯೆಗೆ ಬಳಸಿದ ಆಯುಧ ಮತ್ತು ಕೊಲೆಗಾರನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ ಎಸ್ಪಿ ಇದು ಕೇವಲ ವೈಯಕ್ತಿಕ ಕಾರಣಗಳಿಗೆ ಆಗಿರುವ ಕೊಲೆ, ಜನ ವಿಪರೀತ ಅರ್ಥಗಳನ್ನು ಕಲ್ಪಿಸಬಾರದು ಎಂದು ಹೇಳುತ್ತಾರೆ. ಪೊಲೀಸರು ಸಿಟಿ ರೌಂಡ್ಸ್ ಮಾಡುತ್ತಿದ್ದು ಪರಿಸ್ಥಿತಿ ಹದಗೆಡದಂತೆ ನಿಗಾ ವಹಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಮಸೀದಿ ಎದುರಲ್ಲೇ ಯುವಕನ ಭೀಕರ ಕೊಲೆ: ಬೆಚ್ಚಿಬಿದ್ದ ಕೊಪ್ಪಳ ಜನ, ಹತ್ಯೆಗೆ ಮುಳುವಾಯ್ತು ಪ್ರೀತಿ!
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

