ಕೊಪ್ಪಳದ ಬೂದಗುಂಪಾ ಕೊಲೆ ಪ್ರಕರಣ, ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ
ಜುಲೈ 25 ರಂದು ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದಲ್ಲಿ ಸುಟ್ಟು ಕರಕಲಾದ ಅಪರಿಚಿತ ದೇಹವೊಂದು ಪತ್ತೆಯಾದ ಬಳಿಕ ಅಪರಾಧಿಗಳನ್ನು ಹಿಡಿಯಲು ಪೊಲೀಸರ ಮೂರು ತಂಡಗಳನ್ನು ರಚಿಸಲಾಗಿತ್ತು. ಮೃತ ದ್ಯಾಮಣ್ಣನ ಸಹೋದರ ನೀಡಿದ ಮಾಹಿತಿ ಮೇರೆಗೆ ಸೋಮಪ್ಪ ಮತ್ತು ನೇತ್ರಾವತಿಯ ವಿಚಾರಣೆ ನಡೆಸಿದಾಗ, ಅವರು ತಪ್ಪೊಪ್ಪಿಕೊಂಡಿದ್ದಾರೆ, ಕೊಲೆಗೆ ಬಳಸಿದ ರಾಡ್ ಮತ್ತು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಕೊಪ್ಪಳ, ಆಗಸ್ಟ್ 1: ತನ್ನ ಹಳೆಯ ಗೆಣೆಕಾರ ಸೋಮಪ್ಪನೊಂದಿಗೆ ಹೊಂದಿದ್ದ ಅನೈತಿಕ ಸಂಬಂಧಕ್ಕೆ (illicit relationship) ಅಡ್ಡಿಯಾಗಿದ್ದ ಗಂಡ ದ್ಯಾಮಣ್ಣ ವಜ್ರಬಂಡಿಯನ್ನು ಹೆಂಡತಿ ನೇತ್ರಾವತಿ ಸೋಮಪ್ಪನ ಜೊತೆ ಸೇರಿ ಕೊಂದ ಭೀಕರ ಪ್ರಕರಣವನ್ನು ಕೊಪ್ಪಳದ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಎಲ್ ಅರಸಿದ್ದಿಯವರು (Dr Ram L Arasidi) ಮಾಧ್ಯಗಳಿಗೆ ವಿವರಿಸಿದರು. ನೇತ್ರಾವತಿ ಮತ್ತು ಸೋಮಪ್ಪ ನಡುವೆ ಸುಮಾರು 14 ವರ್ಷಗಳಿಂದ ದೈಹಿಕ ಸಂಪರ್ಕ ಜಾರಿಯಲ್ಲಿತ್ತು, ಅಕ್ರಮ ಸಂಬಂಧಕ್ಕೆ ಮಗ್ಗುಲದ ಮುಳ್ಳಾಗಿದ್ದ ದ್ಯಾಮಣ್ಣನನ್ನು ಜುಲೈ 25 ರಂದು ಜೋಡಿಯು ಕಬ್ಬಿಣದ ರಾಡ್ನಿಂದ ಹೊಡೆದು ಸಾಯಿಸಿದ ಬಳಿಕ ದೇಹದ ಗುರುತು ಸಿಗಬಾರದೆಂದು ಮೃತದೇಹವನ್ನು ಸುಟ್ಟಿದ್ದರು ಎಂದು ಅರಸಿದ್ದಿ ಹೇಳಿದರು.
ಇದನ್ನೂ ಓದಿ: ತಾಯಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದವನನ್ನ ಬರ್ಬರವಾಗಿ ಹತ್ಯೆಗೈದ ಮಕ್ಕಳು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

