AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದವನನ್ನ ಬರ್ಬರವಾಗಿ ಹತ್ಯೆಗೈದ ಮಕ್ಕಳು

ಇತ್ತೀಚಿನ ದಿನಗಳಲ್ಲಿ ಅನೈತಿಕ ಸಂಬಂಧಕ್ಕೆ ಕೊಲೆ ಪ್ರಕರಣಗಳು ಜಾಸ್ತಿ ಆಗುತ್ತಿವೆ. ಮೊನ್ನೆಯಷ್ಟೇ ಶಿವಮೊಗ್ಗದಲ್ಲಿ ಸ್ನೇಹಿತನ ಹೆಂಡತಿ ಜೊತೆ ಅನೈತಿಕ ಸಂಬಂಧಕ್ಕೆ ಮರ್ಡರ್ ಆಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಅನೈತಿಕ ಸಂಬಂಧ ವಿಚಾರಕ್ಕೆ ಬರ್ಬರವಾಗಿ ಹತ್ಯೆಯಾಗಿದೆ.. ಅಂಟಿಯ ಜೊತೆಯ ಅನೈತಿಕ ಸಂಬಂಧಕ್ಕೆ ಮತ್ತೊಂದು ಹತ್ಯೆ ಕುರಿತು ಒಂದು ವರದಿ ಇಲ್ಲಿದೆ.

ತಾಯಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದವನನ್ನ ಬರ್ಬರವಾಗಿ ಹತ್ಯೆಗೈದ ಮಕ್ಕಳು
ವಸಂತ್, ಕೊಲೆಯಾದ ವ್ಯಕ್ತಿ
Basavaraj Yaraganavi
| Updated By: ರಮೇಶ್ ಬಿ. ಜವಳಗೇರಾ|

Updated on: Jun 30, 2025 | 8:41 PM

Share

ಶಿವಮೊಗ್ಗ, (ಜೂನ್ 30): ತಮ್ಮ ತಾಯಿ ಜೊತೆ ಅನೈತಿಕ ಸಂಬಂಧ (illicit relationship) ಹೊಂದಿದ್ದ ವ್ಯಕ್ತಿಯನ್ನು ಮಕ್ಕಳಿಬ್ಬರು ಸೇರಿಕೊಂಡು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶಿವಮೊಗ್ಗ (Shivamogga) ತಾಲೂಕಿನ ಕುಂಸಿಯ ಕುಂಬೇಶ್ವರ್ ಬೀದಿಯಲ್ಲಿ ವಾಸು ಅಲಿಯಾಸ್ ವಸಂತ್ (35) ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುಂಸಿ ಪಟ್ಟಣದ ಕುಂಬೇಶ್ವರ ಬೀದಿಯಿಂದ ಎಕೆ ಕಾಲನಿಯ ವರೆಗೆ ಮಚ್ಚಿನಿಂದ ಅಟ್ಟಾಡಿಸಿಕೊಂಡು ಆಕಾಶ್ ಮತ್ತು ಹರೀಶ್ ಸಹೋದರಿಬ್ಬರು ಸೇರಿ ನಿನ್ನೆ (ಜೂನ್ 29) ವಸಂತನನ್ನು ಹತ್ಯೆ ಮಾಡಿದ್ದಾರೆ. ಮೃತ ಮಲ್ಲೆಶಪ್ಪನ ಎರಡನೇ ಪತ್ನಿ ಜೊತೆ ವಸಂತ ಅನೈತಿಕ ಸಂಬಂಧ ಹೊಂದಿದ್ದು, ನಿನ್ನೆ ಕುಡಿದ ಆಕೆಯ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಈ ವಿಚಾರದಿಂದ ಮೃತ ಮಲ್ಲೇಶಪ್ಪನ ಹಿರಿಯ ಹೆಂಡತಿ ಮಗ ಹರೀಶ್ ಮತ್ತು ಕಿರಿಯ ಹೆಂಡತಿಯ ಪುತ್ರ ಆಕಾಶ್ ಸೇರಿಕೊಂಡು ವಸಂತ್​ ನನ್ನು ಹೊಡೆದು ಕೊಂದಿದ್ದಾರೆ.

ಮಲ್ಲೇಶಪ್ಪ ಎನ್ನುವರಿಗೆ ಇಬ್ಬರು ಹೆಂಡಿತಿಯರು.ಮಲ್ಲೇಶಪ್ಪ ಮತ್ತು ಆತನ ಮೊದಲ ಪತ್ನಿ ಮೃತಪಟ್ಟಿದ್ದಾರೆ. ಬಳಿಕ ಮಲ್ಲೇಶಪ್ಪ ಸಹ ಸಾವನ್ನಪ್ಪಿದ್ದಾನೆ. ಬಳಿಕ ಮೃತ ಮಲ್ಲೇಶಪ್ಪನ 2ನೇ ಹೆಂಡ್ತಿಯೊಂದಿಗೆ ಕೊಲೆಯಾದ ವಸಂತ ಅನೈತಿಕ ಸಂಬಂಧ ಇಟ್ಟಿಕೊಂಡಿದ್ದ. ವಯಸ್ಸಿನಲ್ಲಿ ತನಗಿಂತ ಮಹಿಳೆ ದೊಡ್ಡವಳಾಗಿದ್ದರೂ ಸಹ ವಸಂತ್ ಲವ್ವಿಡವ್ವಿ ಇಟ್ಟುಕೊಂಡಿದ್ದ. ಆದರೆ, ನಿನ್ನೆ ಕುಡಿದು ಹೋಗಿ ಮಹಿಳೆ ಮನೆ ಬಳಿ ಕೂಗಾಡಿ ಗಲಾಟೆ ಮಾಡಿದ್ದ. ಈ ವಿಚಾರದಿಂದ ಮೃತ ಮಲ್ಲೇಶಪ್ಪನ ಮೊದಲ ಹೆಂಡ್ತಿ ಮಗ ಹರೀಶ್ ಮತ್ 2ನೇ ಪತ್ನಿಯ ಪುತ್ರ ಆಕಾಶ್ ಸಹೋದರರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ತಾಯಿ ಜೊತೆ ಕಿರಕ್ ಮಾಡಿದ್ದ ವಸಂತನನ್ನ ಹತ್ಯೆಗೆ ಸ್ಕೇಚ್ ಹಾಕಿದ್ದರು. ಅದರಂತೆ ನಿನ್ನೆ ರಾತ್ರಿ ಆತನಿಗೆ ಮದ್ಯ ಕುಡಿಸಿ ಕುಂಸಿ ಪಟ್ಟಣದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ವ್ಯಕ್ತಿ ಜೊತೆ ಲಿವಿಂಗ್ ಟುಗೆದರ್​​ನಲ್ಲಿದ್ದ ಆಶಾ ಬಿಬಿಎಂಪಿ ಕಸದ ಲಾರಿಯಲ್ಲಿ ಶವವಾಗಿ ಪತ್ತೆ!

ಕಳೆದ ವಾರ ಹಿಂದೆ ಶಿವಮೊಗ್ಗ ನಗರದ ಬೊಮ್ಮಕಟ್ಟೆಯಲ್ಲಿ ಸ್ನೇಹಿತನ ಪತ್ನಿ ಜೊತೆ ಅನೈತಕ ಸಂಬಂಧ ಹಿನ್ನಲೆಯಲ್ಲಿ ಯುವಕನ ಮರ್ಡರ್ ಆಗಿತ್ತು. ಪತಿಯು ಅನೈತಿಕ ಸಂಬಂಧ ಹೊಂದಿದ್ದ ಸ್ನೇಹಿತನನ್ನು ಕೊಲೆ ಮಾಡಿ ಜೈಲುಪಾಲಾಗಿದ್ದ. ಇದೀಗ ಮತ್ತದೇ ಅನೈತಿಕ ಸಂಬಂಧದ ವಿಚಾರವಾಗಿ ಮತ್ತೊಂದು ಕೊಲೆಯಾಗಿದೆ. ಅನೈತಿಕ ಸಂಬಂಧಕ್ಕೆ ಮುಂದಾಗುವವರಿಗೆ ತಕ್ಕ ಪಾಠ ಆಗಬೇಕೆಂದು ಸಹೋದರರಿಬ್ಬರು ಬೀದಿಯಲ್ಲೇ ವಸಂತನನ್ನು ಗ್ರಾಮಸ್ಥರ ಎದುರೇ ಕೊಚ್ಚಿ ಹಾಕಿದ್ದಾರೆ. ವಸಂತ ಕೊಲೆ ಮಾಡಿದ ಬಳಿಕ ಇಬ್ಬರು ಎಸ್ಕೇಪ್ ಆಗಿದ್ದಾರೆ. ಕುಂಸಿ ಠಾಣೆಯ ಸಿಪಿಐ ದೀಪಕ್ ನೇತೃತ್ವದ ತಂಡವು ಅರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನು ಈ ಕೊಲೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.