ಬೀದರ್: ಹುಮ್ನಾಬಾದ ಬಳಿ ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿನ ಗದ್ದೆಗೆ ಬೆಂಕಿ, ಲಕ್ಷಾಂತರ ರೂ. ಬೆಳೆ ನಾಶ

ಬೀದರ್: ಹುಮ್ನಾಬಾದ ಬಳಿ ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿನ ಗದ್ದೆಗೆ ಬೆಂಕಿ, ಲಕ್ಷಾಂತರ ರೂ. ಬೆಳೆ ನಾಶ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 25, 2022 | 12:11 PM

ಬಾಬು ಶೆಟ್ಟಿ ಪಾಟೀಲ್ ಹೆಸರಿನ ಕಬ್ಬು ಬೆಳೆಗಾರ ತಮ್ಮ 10 ಎಕರೆ ಗದ್ದೆಯಲ್ಲಿ ಕಬ್ಬು ಬೆಳೆದಿದ್ದರು. ಆದರೆ ಬೆಂಕಿ ಅವಗಢ ಪೈರಿನ ಹೆಚ್ಚಿನ ಭಾಗವನ್ನು ಸುಟ್ಟು ಬೂದಿ ಮಾಡಿದೆ

ಬೀದರ್:  ಶಾರ್ಟ್ ಸರ್ಕ್ಯೂಟ್ ನಿಂದ (Short Circuit) ಕಬ್ಬಿನಗದ್ದೆಯೊಂದರಲ್ಲಿ ಅಗ್ನಿ ಆನಾಹುತ ಸಂಭವಿಸಿ ಕಟಾವಿಗೆ ಬಂದಿದ ಕಬ್ಬಿನ ಬೆಳೆ (sugarcane crop) ನಾಶವಾಗಿರುವ ಘಟನೆ ಬೀದರ್ ಜಿಲ್ಲೆ ಹುಮ್ನಾಬಾದ್ (Humnabad) ತಾಲ್ಲೂಕಿನಲ್ಲಿರುವ ತಾಳಮಡಗಿ ಗ್ರಾಮದಲ್ಲಿ ನಡೆದಿದೆ. ಬಾಬು ಶೆಟ್ಟಿ ಪಾಟೀಲ್ ಹೆಸರಿನ ಕಬ್ಬು ಬೆಳೆಗಾರ ತಮ್ಮ 10 ಎಕರೆ ಗದ್ದೆಯಲ್ಲಿ ಕಬ್ಬು ಬೆಳೆದಿದ್ದರು. ಆದರೆ ಬೆಂಕಿ ಅವಗಢ ಪೈರಿನ ಹೆಚ್ಚಿನ ಭಾಗವನ್ನು ಸುಟ್ಟು ಬೂದಿ ಮಾಡಿದೆ. ಅನಾಹುತಕ್ಕೆ ಜೆಸ್ಕಾಂ ಅಧಿಕಾರಿಗಳನ್ನು ದೂರಿರುವ ಪಾಟೀಲ್ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ