ನಾಲಗೆ ಮೇಲೆ ಅಂಕೆಯಿಲ್ಲದ ಕಾಂಗ್ರೆಸ್ ಶಾಸಕ ಪರಮೇಶ್ವರ ನಾಯ್ಕ್, ಪ್ರಧಾನಿಗಳ ವಿರುದ್ಧ ಅವಾಚ್ಯ ಪದಬಳಕೆ
ಭಾರತದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧ ಅಪಶಬ್ದ, ಬೈಗುಳ, ಅವಾಚ್ಯ ಪದಗಳನ್ನು ಬಳಸುವ ಅಧಿಕಾರ ಪರಮೇಶ್ವರ ನಾಯ್ಕ್ ಅಥವಾ ಬೇರೆ ಯಾರಿಗೂ ಇಲ್ಲ.
ಬಳ್ಳಾರಿ: ಹೂವಿನ ಹಡಗಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಿಟಿ ಪರಮೇಶ್ವರ ನಾಯ್ಕ್ (PT Parmeshwar Naik) ಅವರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ ಬಹಳ ಹಿಂದೆಯೇ ಸಾಬೀತಾಗಿರುವ ಅಂಶ. ಅವರೀಗ ಪ್ರಧಾನ ಮಂತ್ರಿ ಮೋದಿ ನರೇಂದ್ರ ಮೋದಿ (PM Narendra Modi) ಅವರನ್ನು ಅವಾಚ್ಯ ಪದಗಳಲ್ಲಿ (indecent terms) ನಿಂದಿಸಿರುವುದು ಮೊಬೈಲ್ ಕೆಮೆರಾವೊಂದರಲ್ಲಿ ಸೆರೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಹಾಗಂತ ಭಾರತದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ವಿರುದ್ಧ ಅಪಶಬ್ದ, ಬೈಗುಳ, ಅವಾಚ್ಯ ಪದಗಳನ್ನು ಬಳಸುವ ಹಕ್ಕು ಪರಮೇಶ್ವರ ನಾಯ್ಕ್ ಅಥವಾ ಬೇರೆ ಯಾರಿಗೂ ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ತಮ್ಮ ಮಾತುಗಳನ್ನು ಎಚ್ಚರದಿಂದ ಆಡಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos