ಹುಬ್ಬಳ್ಳಿ ನಗರದಲ್ಲಿ ದಾರಿಹೋಕರನ್ನು ಬೆನ್ನಟ್ಟುತ್ತಿರುವ ಬೀದಿನಾಯಿಗಳು, ಪಾಲಿಕೆ ಅಧಿಕಾರಿಗಳ ನಿಷ್ಕಾಳಜಿ
ಆದರೆ, ಮತ್ತೊಬ್ಬ ಯುವಕ ಓಡುವ ಭರದಲ್ಲಿ ಬಿದ್ದುಬಿಡುತ್ತಾನೆ. ಪುಣ್ಯಕ್ಕೆ ನಾಯಿ ಅವನನ್ನು ಅಷ್ಟಕ್ಕೆ ಬಿಟ್ಟು ವಾಪಸ್ಸು ಹೋಗುತ್ತದೆ, ಕಚ್ಚುವುದಿಲ್ಲ.
ಹುಬ್ಬಳ್ಳಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ ಅಂತ ಅಲ್ಲಿನ ನಿವಾಸಿಗಳು ಹುಬ್ಬಳ್ಳಿ-ಧಾರವಾಡ ನಗರಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಅದರಿಂದ ಪ್ರಯೋಜನವಾಗುತ್ತಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲೊಂದಾಗಿರುವ ಕೊಪ್ಪಿಕರ್ ರಸ್ತೆಯಲ್ಲಿ ಕಪ್ಪು ಬಣ್ಣದ ನಾಯಿಯೊಂದು ಇಬ್ಬರು ಯುವಕರನ್ನು ಅಟ್ಟಿಸಿಕೊಂಡು ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಬ್ಬರಲ್ಲಿ ಒಬ್ಬ ಓಡಿ ತಪ್ಪಿಸಿಕೊಳ್ಳುವಲ್ಲಿ ಸಫಲನಾಗುತ್ತಾನೆ. ಆದರೆ, ಮತ್ತೊಬ್ಬ ಯುವಕ ಓಡುವ ಭರದಲ್ಲಿ ಬಿದ್ದುಬಿಡುತ್ತಾನೆ. ಪುಣ್ಯಕ್ಕೆ ನಾಯಿ ಅವನನ್ನು ಅಷ್ಟಕ್ಕೆ ಬಿಟ್ಟು ವಾಪಸ್ಸು ಹೋಗುತ್ತದೆ, ಕಚ್ಚುವುದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos