ಟನ್​ ಕಬ್ಬಿಗೆ 3500 ರೂ.ಗೆ ಪಟ್ಟು: ವಿಜಯಪುರ – ಬೆಳಗಾವಿ ಹೆದ್ದಾರಿ ಬಂದ್ ಮಾಡಿ ರೈತರ ಪ್ರತಿಭಟನೆ

Edited By:

Updated on: Nov 12, 2025 | 12:13 PM

ಕ್ವಿಂಟಲ್ ಕಬ್ಬಿಗೆ 3,300 ರೂ. ದರ ನಿಗದಿ ಮಾಡಿದ್ದರೂ ಬಾಗಲಕೋಟೆ ಭಾಗದಲ್ಲಿ ರೈತರ ಹೋರಾಟ ಮುಂದುವರಿದಿದೆ. 3,500 ರೂ. ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ವಿಜಯಪುರ-ಬೆಳಗಾವಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ರೈತರು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಪರಿಸ್ಥಿತಿ ಗದ್ದಲದಿಂದ ಕೂಡಿತ್ತು, ರೈತರು ಹೆದ್ದಾರಿಯಲ್ಲಿ ತಮ್ಮ ಪಟ್ಟು ಸಡಿಲಿಸಿಲ್ಲ.

ಬಾಗಲಕೋಟೆ, ನವೆಂಬರ್ 12: ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಮುಂದುವರಿದಿದ್ದು, ವಿಜಯಪುರ-ಬೆಳಗಾವಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಕ್ವಿಂಟಲ್ ಕಬ್ಬಿಗೆ 3,500 ರೂ. ಬೆಲೆ ನಿಗದಿ ಮಾಡಲೇಬೇಕಂದು ರೈತರು ಪಟ್ಟು ಹಿಡಿದಿದ್ದಾರೆ. ಮುಧೋಳ ನಗರದಲ್ಲಿ ಸಂಜೆಯಿಂದ ರಾತ್ರಿ 11 ರವರೆಗೆ ನಡೆದ ಸಭೆಯೂ ವಿಫಲವಾಗಿದೆ. ರಾಜ್ಯ ಹೆದ್ದಾರಿ ಗ್ರಾಮೀಣ ಭಾಗದಲ್ಲಿ ರಸ್ತೆ ಬಂದ್ ಮಾಡುತ್ತಿರುವ, ಮುಧೋಳ‌ ಜಮಖಂಡಿ ಮಾರ್ಗ ಮಧ್ಯೆ ಇರುವ ಶಿರೋಳ ರಸ್ತೆಯ್ನೂ ಬಂದ್ ಮಾಡಿದ್ದಾರೆ. ಶಿರೋಳ. ಬುದ್ನಿ ಪಿಎಮ್ ರಸ್ತೆ ಕೂಡ ಬಂದ್ ಮಾಡಿದ್ದಾರೆ. ರಸ್ತೆಯಲ್ಲಿ ಮೇವಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ