Loading video

ಇದು ಸಾಮಾನ್ಯ ಹತ್ಯೆಯಲ್ಲ, ವ್ಯವಸ್ಥಿತ ಸಂಚು; ಸಂಚುಕೋರರನ್ನು ಮಟ್ಟ ಹಾಕಬೇಕು: ರಾಜೇಶ್ ನಾಯ್ಕ್, ಶಾಸಕ

Updated on: May 02, 2025 | 2:04 PM

ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಎಲ್ಲಿದೆ? ದ್ವೇಷದ ರಾಜಕೀಯ ಇಲ್ಲಿ ತಾಂಡವಾಡುತ್ತಿದೆ, ಸುಹಾಸ್ ಕೊಲೆಯ ಹಿಂದೆ ಯಾರಿದ್ದಾರೆ ಅಂತ ಗೊತ್ತಿಲ್ಲ, ಆದರೆ ಯಾರೇ ಇದ್ದರೂ ಅವು ದುಷ್ಟಶಕ್ತಿಗಳು; ಅವರಿಗೆ ಉತ್ತೇಜನ ನೀಡುವ ಕೆಲಸ ಯಾರಿಂದಲೂ ನಡೆಯಬಾರದು, ರಾಜ್ಯದಲ್ಲಿ ಪೊಲೀಸ್ ಸ್ಟೇಷನ್ ಗೆ ಬೆಂಕಿಯಿಡುವ ಕೃತ್ಯಗಳೂ ನಡೆಯುತ್ತಿವೆ, ಅದನ್ನೆಲ್ಲ ಮಾಡಿಯೂ ಬಚಾವಾಗುತ್ತೇವೆ ಎಂದು ದುಷ್ಟರಿಗೆ ಗೊತ್ತಿದೆ ಎಂದು ಶಾಸಕ ಹೇಳಿದರು.

ಮಂಗಳೂರು, ಮೇ 2: ಹಂತಕರ ದಾಳಿಗೆ ಬಲಿಯಾಗಿರುವ ಸ್ಥಳೀಯ ಹಿಂದೂ ಕಾರ್ಯಕರ್ತ ಸುಹಾಸ ಶೆಟ್ಟಿ ಮನೆಗೆ ಭೇಟಿ ನೀಡಿ ಕುಟುಂಬಸದ ಸದಸ್ಯರಿಗೆ ಸಾಂತ್ವನ ಹೇಳಿದ ಬಂಟ್ವಾಳದ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ (BJP MLA Rajesh Naik) ಜೊತೆ ನಮ್ಮ ಮಂಗಳೂರು ವರದಿಗಾರ ಮಾತಾಡಿದರು. ಪೊಲೀಸರು ಇದು ಸಾಮಾನ್ಯ ಹತ್ಯೆ ಅನ್ನೋ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ, ಅದರೆ ಇದು ಸಾಮಾನ್ಯ ಕೊಲೆ ಅಲ್ಲ, ಹಿಂದಿನ ಪ್ರಕರಣಗಳು ಮತ್ತು ಹಳೇ ವೈರತ್ವ ಹತ್ಯೆಗೆ ಕಾರಣ ಅಂತ ಅವರು ಹೇಳಿದರೆ, ವಿಷಯ ಗೊತ್ತಿದ್ದೂ ಅವರು ಸುಹಾಸನಿಗೆ ಯಾಕೆ ಸೂಕ್ತ ಭದ್ರತೆ ಒದಗಿಸಲಿಲ್ಲ ಎಂದು ರಾಜೇಶ್ ನಾಯ್ಕ್ ಪ್ರಶ್ನಿಸಿದರು. ಇದೊಂದು ವ್ಯವಸ್ಥಿತ ಕೊಲೆ ಮತ್ತು ಸಂಚಿನ ಹಿಂದೆ ಯಾರಿದ್ದಾರೆ ಅನ್ನೋದನ್ನು ಪತ್ತೆ ಮಾಡಿ ಅವರಗೆ ಕಠಿಣ ಶಿಕ್ಷೆಗೊಳಪಡಿಸುವ ಕೆಲಸವನ್ನು ಸರ್ಕಾರ ಮಾಡಿದ್ದಲ್ಲಿ ಮಾತ್ರ ಜನಕ್ಕೆ ಒಂದಷ್ಟು ವಿಶ್ವಾಸ ಮೂಡಬಹುದು ಎಂದು ಶಾಸಕ ಹೇಳಿದರು.

ಇದನ್ನೂ ಓದಿ:  ಸುಹಾಸ್ ಶೆಟ್ಟಿ ಹತ್ಯೆ ಕೇಸ್​​ ಬೆನ್ನಲ್ಲೇ ಉಡುಪಿಯಲ್ಲಿ ಮುಸ್ಲಿಂ ಯುವಕನ ಕೊಲೆಗೆ ಯತ್ನ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ