ಸುಳ್ಳು ಹೇಳಿ ಅನಗತ್ಯ ಸನ್ನಿವೇಶಗಳಿಗೆ ಕಾರಣರಾದ ಸುಜಾತ ಭಟ್ ಅವರಿಗೆ ತಮ್ಮ ತಪ್ಪಿನ ಅರಿವಾಗಿದೆಯೇ?

Updated on: Aug 27, 2025 | 7:45 PM

ನಾನು ಹೇಳಿದ್ದು ಸುಳ್ಳು, ಕೊಟ್ಟಿರೋ ದೂರನ್ನು ವಾಪಸ್ಸು ಪಡೆಯುವೆ, ನನ್ನನ್ನು ಬಿಟ್ಟುಬಿಡಿ ಅಂತ ಸುಜಾತ ಭಟ್ ಅಧಿಕಾರಿಗಳ ಮುಂದೆ ಗೋಗರೆದರು ಎಂಬ ವದಂತಿ ಇದೆ. ಅದರೆ ಅವರನ್ನು ಅದು ಹೇಗೆ ಬಿಡೋದು ಸಾಧ್ಯ? ಅವರ ಮೇಲೆ ಬೇರೆ ಯಾರಾದರೂ ಒತ್ತಡ ಹಾಕಿ ಸುಳ್ಳು ಹೇಳಿಸಿದ್ದರೆ ಅದು ಯಾರು ಅಂತ ಗೊತ್ತಾಗಬೇಕಲ್ಲ? ಅವರಿಂದ ಎಲ್ಲ ಸತ್ಯಗಳನ್ನು ಕಕ್ಕಿಸದ ಹೊರತು ಅಧಿಕಾರಿಗಳೇನೂ ಬಿಡಲಾರರು.

ಬೆಂಗಳೂರು, ಆಗಸ್ಟ್ 27: ಅನನ್ಯಾ ಭಟ್ (Ananya Bhat) ನನ್ನ ಮಗಳು ಅಂತ ಸುಳ್ಳು ಹೇಳಿ ರಾಜ್ಯಾದಾದ್ಯಂತ ಭಾನಗಡಿ ಸೃಷ್ಟಿಸಿದ ಹಿರಿಯ ಮಹಿಳೆ ಸುಜಾತ ಭಟ್ ಅವರಿಗೆ ತಮ್ಮ ತಪ್ಪಿನ ಅರಿವು ಈಗ ಆದಂತಿದೆ. ಎಸ್ಐಟಿ ಅಧಿಕಾರಿಗಳು ಇಂದು ಬೆಳಗ್ಗೆಯಿಂದ ಅವರ ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಮಧ್ಯಾಹ್ನದ ಊಟ ಕೂಡ ಅವರಿಗೆ ಎಸ್​ಐಟಿ ಠಾಣೆಯಲ್ಲೇ ಒದಗಿಸಲಾಗಿದೆ. ಎಸ್ಐಟಿ ರಚನೆಯಾದಾಗಿನಿಂದ ಮಾಧ್ಮಮಗಳ ಮುಂದೆ ಸ್ಥಿರವಲ್ಲದ ಹೇಳಿಕೆಗಳನ್ನು ನೀಡುತ್ತಾ ಜನರ ಶಂಕೆಗಳಿಗೆ ಈಡಾಗಿದ್ದ ಸುಜಾತ ಭಟ್ ತನಿಖಾ ತಂಡದ ಅಧಿಕಾರಿಗಳ ಎದುರು ತತ್ತರಿಸಿಹೋಗಿದ್ದಾರೆ ಎಂಬ ವದಂತಿಯಿದೆ. ಎಸ್​ಪಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಸುಜಾತ ಅವರ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: ನೋಟಿಸ್ ಕೊಡದಿದ್ದರೂ ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 27, 2025 07:42 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More