ಬೀಗರೂಟಕ್ಕೆ ಸರ್ವರನ್ನೂ ಆಹ್ವಾನಿಸಿದ ಸುಮಲತಾ, ಅಭಿಷೇಕ್-ಅವಿವಾ

ಬೀಗರೂಟಕ್ಕೆ ಸರ್ವರನ್ನೂ ಆಹ್ವಾನಿಸಿದ ಸುಮಲತಾ, ಅಭಿಷೇಕ್-ಅವಿವಾ

ಮಂಜುನಾಥ ಸಿ.
|

Updated on:Jun 15, 2023 | 8:23 PM

Abhishek-Aviva: ಅಭಿಷೇಕ್ ಅಂಬರೀಶ್-ಅವಿವಾ ಬಿದಪ್ಪ ಇತ್ತೀಚೆಗಷ್ಟೆ ವಿವಾಹವಾಗಿದ್ದು ಇವರ ಬೀಗರ ಔತಣ ಕೂಟವನ್ನು ಮಳವಳ್ಳಿ ಬಳಿ ಗ್ರಾಮವೊಂದರಲ್ಲಿ ಹಮ್ಮಿಕೊಳ್ಳಲಾಗಿದೆ. ಬೀಗರೂಟಕ್ಕೆ ಸಂಸದೆ ಸುಮಲತಾ ಹಾಗೂ ಅಭಿಷೇಕ್-ಅವಿವಾ ಅವರುಗಳು ಸರ್ವರನ್ನೂ ಆಹ್ವಾನಿಸಿದ್ದಾರೆ.

ಅಂಬರೀಶ್ (Ambareesh) ಪುತ್ರ ಅಭಿಷೇಕ್ ಅಂಬರೀಶ್ (Abhishek Ambareesh) ಹಾಗೂ ಅವಿವಾ ಬಿದಪ್ಪ (Aviva Bidappa) ಮದುವೆ ಇತ್ತೀಚೆಗಷ್ಟೆ ನಡೆದಿದ್ದು ಇದೀಗ ಮಂಡ್ಯದಲ್ಲಿ ಭರ್ಜರಿ ಔತಣಕೂಟವನ್ನು ಆಯೋಜಿಸಲಾಗಿದೆ. ಜೂನ್ 16ರಂದು ಭರ್ಜರಿಯಾಗಿ ಬೀಗರ ಔತಣ ಕೂಟವನ್ನು ಆಯೋಜಿಸಲಾಗಿದ್ದು ಈ ಔತಣಕೂಟಕ್ಕೆ ನೂತನ ವಧು-ವರ ಅಭಿಷೇಕ್-ಅವಿವಾ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರು ಎಲ್ಲ ಹಿತೈಷಿಗಳು, ಸ್ನೇಹಿತರು, ಅಭಿಮಾನಿಗಳನ್ನು ವಿಡಿಯೋ ಮೂಲಕ ಆಹ್ವಾನಿಸಿದ್ದಾರೆ. ಮದ್ದೂರಿನ ಗಜ್ಜಲಗೆರೆಯಲ್ಲಿ ಬೀಗರೂಟ ಆಯೋಜಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 15, 2023 08:22 PM