ದಿಲ್ಲಿಯಲ್ಲೇ ಕುಮಾರಸ್ವಾಮಿ-ಸುಮಲತಾ ಅಚ್ಚರಿ ಭೇಟಿ: ಮುನಿಸು ಮರೆತ್ರಾ ರಾಜಕೀಯ ಬದ್ಧ ವೈರಿಗಳು?

ದಿಲ್ಲಿಯಲ್ಲೇ ಕುಮಾರಸ್ವಾಮಿ-ಸುಮಲತಾ ಅಚ್ಚರಿ ಭೇಟಿ: ಮುನಿಸು ಮರೆತ್ರಾ ರಾಜಕೀಯ ಬದ್ಧ ವೈರಿಗಳು?

ರಮೇಶ್ ಬಿ. ಜವಳಗೇರಾ
|

Updated on: Jun 10, 2024 | 5:31 PM

ಮಂಡ್ಯದ (Mandya) ಜನರು ಕುಮಾರಸ್ವಾಮಿ ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಮಂಡ್ಯವನ್ನು ಬಿಟ್ಟುಕೊಟ್ಟಿರುವ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದ್ದಾರೆ.

ನವದೆಹಲಿ, (ಜೂನ್ 10): ಮಂಡ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಮೋದಿ ಸಂಪುಟದಲ್ಲಿ ಸಚಿವರಾಗಿ (Modi Cabinet Minister) ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇದೀಗ ಮಂಡ್ಯದ (Mandya) ಜನರು ಕುಮಾರಸ್ವಾಮಿ ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಮಂಡ್ಯವನ್ನು ಬಿಟ್ಟುಕೊಟ್ಟಿರುವ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದ್ದಾರೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರೇ ಸುಮಲತಾ ಅವರ ನಿವಾಸಕ್ಕೆ ಭೇಟಿ ನೀಡಿ ಬೆಂಬಲ ಕೋರಿದ್ದರು. ಆದ್ರೆ, ಸುಮಲತಾ ಮಾತ್ರ ಒಂದೇ ಒಂದು ದಿನ ಎಚ್​ಡಿಕೆ ಪರ ಪ್ರಚಾರ ಹೋಗಿಲ್ಲ. ಆದ್ರೆ, ಇದೀಗ ದೆಹಲಿಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದಾರೆ. ಲೋಕಸಭಾ ಫಲಿತಾಂಶ ಪ್ರಕಟವಾದ ಬಳಿಕ ಸುಮಲತಾ, ಸಾಮಾಜಿಕ ಜಾಲತಾಣಗಳಲ್ಲಿ ಶುಭಶಯ ತಿಳಿಸಿದ್ದರು. ಇದೀಗ ಖುದ್ದು ಭೇಟಿ ಮಾಡಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಮೂಲಕ ರಾಜಕೀಯ ಬದ್ಧ ವೈರಿಗಳು ಈಗ ಮುನಿಸು ಮರೆತು ಒಂದಾದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.