ಬಿಜೆಪಿ ಸೇರುವ ಮೊದಲು ಅಂಬರೀಶ್ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಶ್

|

Updated on: Apr 05, 2024 | 11:58 AM

ಮಂಡ್ಯದ ಪಕ್ಷೇತರ ಸಂಸದೆಯಾಗಿರುವ ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಟಿಕೆಟ್ ನೀಡದಿದ್ದರೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದರು. ಆದರೆ ಬದಲಾಗಿರುವ ರಾಜ್ಯದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಟಿಕೆಟ್ ಅನ್ನು ಹೆಚ್ ಡಿ ಕುಮಾರಸ್ವಾಮಿಗೆ ನೀಡಿತು.

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambareesh) ಅವರ ನಿಧನದ ಬಳಿಕ ರಾಜಕಾರಣದಲ್ಲಿ ಸಕ್ರಿಯರಾದ ಸುಮಲತಾ ಅಂಬರೀಶ್ (Sumalatha Ambareesh) ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ನಾಯಕಿಯಾಗಿ ಬೆಳದಿದ್ದನ್ನು ಕನ್ನಡಿಗರು ನೋಡಿದ್ದಾರೆ. ರಾಜಕೀಯ ಬದುಕಿನಲ್ಲಿ ಅವರು ಯಾವುದೇ ನಿರ್ಧಾರ ತೆಗದುಕೊಳ್ಳುವ ಮೊಲು ಮತ್ತು ನಂತರ ಅವರು ನಗರದಲ್ಲಿರುವ ತಮ್ಮ ಪತಿಯ ಸ್ಮಾರಕಕ್ಕೆ ತೆರಳಿ ಪೂಜೆ (offers puja) ಸಲ್ಲಿಸುತ್ತಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅವರು ಬಹಳ ಗೊಂದಲದಲ್ಲಿದ್ದರು. ಮಂಡ್ಯದ ಪಕ್ಷೇತರ ಸಂಸದೆಯಾಗಿರುವ ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಟಿಕೆಟ್ ನೀಡದಿದ್ದರೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದರು. ಆದರೆ ಬದಲಾಗಿರುವ ರಾಜ್ಯದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಟಿಕೆಟ್ ಅನ್ನು ಹೆಚ್ ಡಿ ಕುಮಾರಸ್ವಾಮಿಗೆ ನೀಡಿತು. ಆಗ ಮತ್ತಷ್ಟು ಗೊಂದಲಕ್ಕೀಡಾಗಿದ್ದ ಸುಮಲತಾ ಬಿಜೆಪಿ ವರಿಷ್ಟರೊಂದಿಗೆ ಮಾತುಕತೆ ನಡೆಸಿದ ಬಳಿಕ ಅಧಿಕೃತವಾಗಿ ಬಿಜೆಪಿ ಸೇರುವ ನಿರ್ಣಯ ಪ್ರಕಟಿಸಿದರು. ಇಂದು ಅವರು ಪಕ್ಷಕ್ಕೆ ಸೇಪರ್ಡಗೊಳ್ಳಲಿದ್ದು ಬಿಜೆಪಿ ಕಚೇರಿಗೆ ತೆರಳುವ ಮುನ್ನ ಅಂಬರೀಶ್ ಸ್ಮಾರಕಕ್ಕೆ ಹೋಗಿ ಪೂಜೆ ಸಲ್ಲಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಗೆ ಕಾರಣಗಳೇನು? ಇಲ್ಲಿವೆ ನೋಡಿ ಕೆಲ ಅಂಶಗಳು