ರಾಜಕಾರಣ ಬಿಡ್ತೀನಿ ಆದ್ರೆ ಸ್ವಾಭಿಮಾನ ಬಿಡಲ್ಲ, ಜೆಡಿಎಸ್ ನಾಯಕರ ಟೀಕೆಗೆ ತಿರುಗೇಟು ನೀಡಿದ ಸುಮಲತಾ
ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬಾಹ್ಯ ಬೆಂಬಲ ವ್ಯಕ್ತಪಡಿಸುವ ಮೂಲಕ ಇಷ್ಟು ದಿನಗಳ ವಂದತಿಗಳಿಗೆ ತೆರೆ ಎಳೆದಿದ್ದಾರೆ. ಈ ಸಂಬಂಧ ಇಂದು (ಮಾ.10) ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಾರಂಭದಿಂದಲೇ ಜೆಡಿಎಸ್ ದಳಪತಿಗಳ ವಿರುದ್ಧ ಹರಿಹಾಯ್ದರು. ಭದ್ರಕೋಟೆ ಅಂತೀರಾ, ಈ ಭದ್ರಕೋಟೆಗೆ ಏನು ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಬಿಜೆಪಿಗೆ (BJP) ಬಾಹ್ಯ ಬೆಂಬಲ ವ್ಯಕ್ತಪಡಿಸುವ ಮೂಲಕ ಇಷ್ಟು ದಿನಗಳ ವಂದತಿಗಳಿಗೆ ತೆರೆ ಎಳೆದಿದ್ದಾರೆ. ಈ ಸಂಬಂಧ ಇಂದು (ಮಾ.10) ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಾರಂಭದಿಂದಲೇ ಜೆಡಿಎಸ್ (JDS) ದಳಪತಿಗಳ ವಿರುದ್ಧ ಹರಿಹಾಯ್ದರು. ಭದ್ರಕೋಟೆ ಅಂತೀರಾ, ಈ ಭದ್ರಕೋಟೆಗೆ ಏನು ಮಾಡಿದ್ದೀರಾ? ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆ ಕೇಳುವ ಸಮಯ ಬಂದಿದೆ. ಕನ್ನಂಬಾಡಿ ಅಣೆಕಟ್ಟು ಸುರಕ್ಷತೆಯ ಬಗ್ಗೆ ನಾನು ಧ್ವನಿ ಎತ್ತಿದ್ದೆ. ಕೆಆರ್ಎಸ್ ಜಲಾಶಯದ ಸುರಕ್ಷತೆ ಬಗ್ಗೆ ಯಾರೂ ಮಾತನಾಡಲಿಲ್ಲ. ಸುರಕ್ಷತೆ ಬಗ್ಗೆ ನಾನು ಧ್ವನಿ ಎತ್ತಿದ್ದಾಗ ಏನೇನೋ ಮಾತನಾಡಿದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸದೆ ಟಾಂಗ್ ಕೊಟ್ಟರು.