MP expresses gratitude to people; ಇಡೀ ಸರ್ಕಾರ ನನ್ನ ವಿರುದ್ಧ ನಿಂತರೂ ಮಂಡ್ಯದ ಜನ ನನ್ನ ಕೈ ಬಿಡಲಿಲ್ಲ: ಸುಮಲತಾ ಅಂಬರೀಶ್
ಲೋಕಸಭಾ ಚುನಾವಣೆಯಲ್ಲಿ ತಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಇಡೀ ಸರ್ಕಾರವೇ ನನ್ನ ವಿರುದ್ಧ ಸೆಣಸಿದರೂ ಮಂಡ್ಯದ ಜನ ತಮ್ಮ ಕೈಬಿಡಲಿಲ್ಲ ಎಂದು ಸುಮಲತಾ ಭಾವುಕರಾಗಿ ಹೇಳಿದರು.
ಮಂಡ್ಯ: ನಗರಲದಲ್ಲಿಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರ ಬಹು ನಿರೀಕ್ಷಿತ ಸುದ್ದಿಗೋಷ್ಟಿಯನ್ನು ಕೊಂಚ ತಡವಾಗಿಯೇ ಆರಂಭಿಸಿದರು. ದಿವಂಗತ ಪತಿ ಅಂಬರೀಶ್ (Ambareesh) ಅವರ ಭಾವಚಿತ್ರದ ಮುಂದೆ ಕೂತು ಮಾತು ಆರಂಭಿಸಿದ ಸುಮಲತಾ, ಮೊದಲಿಗೆ ತಾವು ರಾಜಕಾರಣಕ್ಕೆ ಯಾಕೆ ಬರಬೇಕಾಯಿತು ಅನ್ನೋದನ್ನು ವಿವರಿಸಿದರು. ಯಾವುದೇ ಸ್ವಾರ್ಥಸಾಧನೆಗೆ ತಾನು ರಾಜಕೀಯಕ್ಕೆ ಬರಲಿಲ್ಲ, ಮಂಡ್ಯದ ಜನ (people of Mandya) ಅಂಬರೀಶ್ ಅವರ ಬಗ್ಗೆ ಇಟ್ಟುಕೊಂಡಿದ್ದ ಪ್ರೀತಿ ಮತ್ತು ಅಭಿಮಾನ ತನ್ನನ್ನು ರಾಜಕೀಯಕ್ಕೆ ಎಳೆತಂದಿತು ಎಂದು ಅವರು ಹೇಳಿದರು. ಲೋಕಸಭಾ ಚುನಾವಣೆಯಲ್ಲಿ ತಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಇಡೀ ಸರ್ಕಾರವೇ ನನ್ನ ವಿರುದ್ಧ ಸೆಣಸಿದರೂ ಮಂಡ್ಯದ ಜನ ತಮ್ಮ ಕೈಬಿಡಲಿಲ್ಲ ಎಂದು ಸುಮಲತಾ ಭಾವುಕರಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos