ಮಂಡ್ಯ(Mandya) ವಿಧಾನಸಭೆ ಕ್ಷೇತ್ರದಲ್ಲಿ (Assembly Election) ಚುನಾವಣಾ ಕಾವು ತಾರಕ್ಕೇರಿದ್ದು, ಮಂಡ್ಯದ ಗಂಡು ನಟ ದಿವಂಗತ ಅಂಬರೀಶ್ ಪತ್ನಿ, ಸಂಸದೆ ಸುಮಲತಾ ಅಂಬರೀಶ (Sumalata Ambareesh) ಬಿಜೆಪಿ ಸೇರುತ್ತಾರೆ ಎಂಬ ವಂದತಿಗಳು ಎದ್ದಿವೆ. ಈ ಹಿನ್ನೆಲೆ ಇಂದು (ಮಾ.10) ರಂದು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಜೆಡಿಎಸ್ ದಳಪತಿಗಳ ವಿರುದ್ಧ ವಾಗ್ದಳಿ ಮಾಡುತ್ತಾ ಕಣ್ಣೀರು ಹಾಕಿದ್ದಾರೆ.