Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ

ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ

Ganapathi Sharma
|

Updated on: Mar 19, 2025 | 7:01 AM

ಬಾಹ್ಯಾಕಾಶ ನೌಕೆ ವಿಫಲವಾದ ನಂತರ ಒಂಬತ್ತು ತಿಂಗಳ ಕಾಲ ಬಾಹ್ಯಾಕಾಶದಲ್ಲಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿದ್ದಾರೆ. ಮಂಗಳವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹಿಂತಿರುಗಿದ ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಭಾರತೀಯ ಕಾಲಮಾನ ಬುಧವಾರ ಬೆಳಗಿನ ಜಾವ 3:27 ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆದರು.

ಸುನೀತಾ ವಿಲಿಯಮ್ಸ್ ಮತ್ತು ಬುಚ್‌ವಿಲ್ಮೋರ್‌ ಮತ್ತು ಇವರಿಬ್ಬರನ್ನು ಕರೆತರಲು ತೆರಳಿದ್ದ ನಾಸಾ ಗಗನಯಾತ್ರಿ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರನ್ನೊಳಗೊಂಡ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಭಾರತೀಯ ಕಾಲಮಾನ ಬುಧವಾರ ಬೆಳಗಿನ ಜಾವ 3:27 ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಲ್ಯಾಂಡಿಂಗ್ ಕ್ಷಣಗಳನ್ನು ನಾಸಾ ಯೂಟ್ಯೂಬ್ ಮತ್ತು ನಾಸಾ+ ನಲ್ಲಿ ನೇರಪ್ರಸಾರ ಮಾಡಿತು. ಲ್ಯಾಂಡಿಂಗ್​​ನ ಅದ್ಭುತ ವಿಡಿಯೋ ಇಲ್ಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ