AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ

ರಣರೋಚಕ ಪಂದ್ಯ, ಇಬ್ಬರು ರಿಟೈರ್ಡ್​ ಔಟ್, ಮ್ಯಾಚ್ ಟೈ

ಝಾಹಿರ್ ಯೂಸುಫ್
|

Updated on: Jan 05, 2026 | 1:22 PM

Share

17ನೇ ಓವರ್‌ನ ಮೊದಲ ಎಸೆತದ ನಂತರ ಜೀತ್ ರಾವಲ್ (23) ಅವರನ್ನು ನಿವೃತ್ತರಾಗಿ ಹಿಂತಿರುಗುವಂತೆ ನಾರ್ದರ್ನ್ ನೈಟ್ಸ್ ಸೂಚಿಸಿದರು. ಮುಂದಿನ ಓವರ್‌ನ ಮೊದಲ ಎಸೆತದಲ್ಲೇ ಕ್ಸೇವಿಯರ್ ಬೆಲ್ (9) ಅವರನ್ನು ಕೂಡ ವಾಪಸ್ ಕರೆಸಲಾಯಿತು. ಈ ಮೂಲಕ ನಾರ್ದರ್ನ್ ನೈಟ್ಸ್ ತಂಡವು ಟಿ20 ಕ್ರಿಕೆಟ್​ನಲ್ಲಿ ಇಬ್ಬರು ಆಟಗಾರರನ್ನು ರಿಟೈರ್ಡ್​ ಔಟ್ ಮಾಡಿದ ಮೊದಲ ತಂಡ ಎನಿಸಿಕೊಂಡಿತು.

ನ್ಯೂಝಿಲೆಂಡ್​ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ ಟೂರ್ನಿಯ 10ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಬೇ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ನಾರ್ದರ್ನ್ ನೈಟ್ಸ್ vs ಒಟಾಗೋ ತಂಡಗಳು ಮುಖಾಮುಖಿಯಾಗಿದ್ದವು.

ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಒಟಾಗೋ ತಂಡ 20 ಓವರ್​ಗಳಲ್ಲಿ 166 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನಾರ್ದರ್ನ್ ನೈಟ್ಸ್ 10 ಓವರ್​ಗಳಲ್ಲಿ 82 ರನ್ ಕಲೆಹಾಕಿದ್ದರು. ಆದರೆ ಬಳಿಕ ಇಬ್ಬರು ಪ್ರಮುಖ ದಾಂಡಿಗರು ರನ್​ ಕಲೆಹಾಕಲು ಪರದಾಡಿದರು.

17ನೇ ಓವರ್‌ನ ಮೊದಲ ಎಸೆತದ ನಂತರ ಜೀತ್ ರಾವಲ್ (23) ಅವರನ್ನು ನಿವೃತ್ತರಾಗಿ ಹಿಂತಿರುಗುವಂತೆ ನಾರ್ದರ್ನ್ ನೈಟ್ಸ್ ಸೂಚಿಸಿದರು. ಮುಂದಿನ ಓವರ್‌ನ ಮೊದಲ ಎಸೆತದಲ್ಲೇ ಕ್ಸೇವಿಯರ್ ಬೆಲ್ (9) ಅವರನ್ನು ಕೂಡ ವಾಪಸ್ ಕರೆಸಲಾಯಿತು. ಈ ಮೂಲಕ ನಾರ್ದರ್ನ್ ನೈಟ್ಸ್ ತಂಡವು ಟಿ20 ಕ್ರಿಕೆಟ್​ನಲ್ಲಿ ಇಬ್ಬರು ಆಟಗಾರರನ್ನು ರಿಟೈರ್ಡ್​ ಔಟ್ ಮಾಡಿದ ಮೊದಲ ತಂಡ ಎನಿಸಿಕೊಂಡಿತು.

ಇದಾದ ಬಳಿಕ ಹೋರಾಟ ಮುಂದುವರೆಸಿದ ನಾರ್ದರ್ನ್ ನೈಟ್ಸ್ ತಂಡವು ಕೊನೆಯ ಓವರ್​ನಲ್ಲಿ 18 ರನ್​ಗಳಿಸುವ ಮೂಲಕ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿದರು. ವಿಶೇಷ ಎಂದರೆ ಸೂಪರ್ ಸ್ಮ್ಯಾಶ್ ಲೀಗ್​ನಲ್ಲಿ ಸೂಪರ್ ಓವರ್ ಆಡಿಸಲಾಗುತ್ತಿಲ್ಲ. ಹೀಗಾಗಿ ಉಭಯ ತಂಡಗಳು ತಲಾ 2 ಅಂಕಗಳನ್ನು ಹಂಚಿಕೊಂಡಿದೆ.