ಪುನೀತ್ ರಾಜಕುಮಾರ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಭಾಗವಹಿಸಲಿದ್ದಾರೆ
ರಜನೀಕಾಂತ್ ಅವರ ಆಪ್ತ ಮಿತ್ರ ರಘುನಂದನ್ ಮಾಧ್ಯಮವರೊಂದಿಗೆ ಮಾತಾಡಿ ನಟನ ಪ್ರವಾಸ ವಿವರಗಳನ್ನು ನೀಡಿದರು.
ಬೆಂಗಳೂರು: ಸರಿಯಾಗಿ ಒಂದು ವರ್ಷದ ಹಿಂದೆ ಆಕಸ್ಮಿಕ ಮರಣವನ್ನಪ್ಪಿ ಇಡೀ ಕನ್ನಡನಾಡನ್ನು ಶೋಕಸಾಗರದಲ್ಲಿ ಮುಳುಗಿಸಿದ ಪುನೀತ್ ರಾಜಕುಮಾರ್ (Puneeth Rajkumar) ಅವರಿಗೆ ಇಂದು ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲು ಕರ್ನಾಟಕ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಗಮನಿಸಬೇಕಾದ ಸಂಗತಿಯೇನೆಂದರೆ, ಕನ್ನಡದವರೇ ಆಗಿರುವ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ (Rajnikanth) ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ. ರಜನೀಕಾಂತ್ ಅವರ ಆಪ್ತ ಮಿತ್ರ ರಘುನಂದನ್ (Raghunandan) ಮಾಧ್ಯಮವರೊಂದಿಗೆ ಮಾತಾಡಿ ನಟನ ಪ್ರವಾಸ ವಿವರಗಳನ್ನು ನೀಡಿದರು.