ಕಾಲುಗಳಿಗೆ ಬೊಬ್ಬೆ ಬಂದರೂ ಪುನೀತ್ ರಾಜಕುಮಾರ ಅಭಿಮಾನಿಯೊಬ್ಬರು ಹಾವೇರಿಯಿಂದ ಬೆಂಗಳೂರಿಗೆ ನಡೆದೇ ಬಂದರು!
ಕೈಯಲ್ಲಿ ತನ್ನ ಆರಾಧ್ಯ ದೈವನ ಫೋಟೋ ಹಿಡಿದು ಬಂದಿರುವ ಇವರು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ವಾಪಸ್ಸು ಹೋಗಲಿದ್ದಾರೆ.
ಬೆಂಗಳೂರು: ಪುನೀತ್ ರಾಜಕುಮಾರ (Puneeth Rajkumar) ಅವರಿಗೆ ಎಂತೆಂಥ ಅಭಿಮಾನಿಗಳಿದ್ದಾರೆ ಅನ್ನೋದನ್ನ ಅರ್ಥಮಾಡಿಕೊಳ್ಳಲು ಹಾವೇರಿಯಿಂದ ಬೆಂಗಳೂರಿಗೆ ಬರಿಗಾಲಲ್ಲಿ (barefoot) ನಡೆದು ಬಂದಿರುವ ಅಭಿಮಾನಿಯನ್ನು ನೋಡಿದರೆ ಸಾಕು. ಇವರ ಹೆಸರು ನಮಗೆ ಗೊತ್ತಿಲ್ಲ, ಆದರೆ 337 ಕಿಮೀಗಳ ಅಂತರವನ್ನು ಇವರು ಬರಿಗಾಲಲ್ಲಿ ನಡೆದು ಕ್ರಮಿಸಿದ್ದಾರೆ! ಅವರ ಕಾಲುಗಳಲ್ಲಿ ಬೊಬ್ಬೆ ಬಂದಿವೆ ಮತ್ತು ಬಲಗಾಲನ್ನು ಊರಲು ಕೂಡ ಸಾಧ್ಯವಾಗುತ್ತಿಲ್ಲ. ಹೀಗೆ ಕಾಲೆಳೆಯುತ್ತಾ, ಕುಂಟುತ್ತಾ ಅವರು ಶಿವರಾಜ್ ಕುಮಾರ್ (Shiva Rajkumar) ಮನೆ ಬಳಿ ಬಂದಿದ್ದಾರೆ. ಕೈಯಲ್ಲಿ ತನ್ನ ಆರಾಧ್ಯ ದೈವನ ಫೋಟೋ ಹಿಡಿದು ಬಂದಿರುವ ಇವರು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ವಾಪಸ್ಸು ಹೋಗಲಿದ್ದಾರೆ.
Published on: Nov 01, 2022 02:08 PM
Latest Videos