ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ

Updated on: May 16, 2025 | 5:28 PM

Rakesh Poojari: ರಾಕೇಶ್ ಪೂಜಾರಿ ಸಾವು ಅವರ ಗೆಳೆಯರಿಗೆ ಆಘಾತ ತಂದಿದೆ. ಇದೀಗ ರಾಕೇಶ್ ಪೂಜಾರಿಯ ಆತ್ಮೀಯ ಗೆಳೆಯ ಸೂರಜ್ ಟಿವಿ9 ಜೊತೆಗೆ ಮಾತನಾಡಿದ್ದು, ರಾಕೇಶ್ ನಿಧನ ಹೊಂದಿದ ದಿನದಂದು ರಾತ್ರಿ ಅವರು ತಮ್ಮೊಟ್ಟಿಗೆ ಫೋನಿನಲ್ಲಿ ಮಾತನಾಡಿದ್ದರು ಎಂದಿದ್ದಾರೆ. ರಾಕೇಶ್ ಅವರ ಬಗ್ಗೆ ಹಲವು ವಿಷಯಗಳನ್ನು ಅವರ ಗೆಳೆಯ ಸೂರಜ್ ಹೇಳಿದ್ದಾರೆ.

ಹಾಸ್ಯ ನಟ ರಾಕೇಶ್ ಪೂಜಾರಿ (Rakesh Poojari) ಸಾವು ಅವರ ಗೆಳೆಯರಿಗೆ ಆಘಾತ ತಂದಿದೆ. ಇದೀಗ ರಾಕೇಶ್ ಪೂಜಾರಿಯ ಆತ್ಮೀಯ ಗೆಳೆಯ ಸೂರಜ್ ಟಿವಿ9 ಜೊತೆಗೆ ಮಾತನಾಡಿದ್ದು, ರಾಕೇಶ್ ನಿಧನ ಹೊಂದಿದ ದಿನದಂದು ರಾತ್ರಿ ಅವರು ತಮ್ಮೊಟ್ಟಿಗೆ ಫೋನಿನಲ್ಲಿ ಮಾತನಾಡಿದ್ದರು ಎಂದಿದ್ದಾರೆ. ಕಾರ್ಯಕ್ರಮವೊಂದಕ್ಕೆ ರಾಕೇಶ್ ಅವರನ್ನು ಆಹ್ವಾನಿಸಲು ಸೂರಜ್ ಫೋನ್ ಮಾಡಿದ್ದರಂತೆ. ಕಾರ್ಯಕ್ರಮಕ್ಕೆ ಬರಲು ಒಪ್ಪಿದರಾದರೂ ತಮಗೆ ಶೂಟಿಂಗ್ ಇದ್ದು ಬೇಗನೆ ಹೊರಡಬೇಕು ಅದಕ್ಕೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದ್ದರಂತೆ. ಗೆಳೆಯ ರಾಕೇಶ್ ಬಗ್ಗೆ ಹಲವು ವಿಷಯಗಳನ್ನು ಸೂರಜ್ ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ