Surat Saree Walkathon: ಮಹಿಳೆಯರಲ್ಲಿ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸಲು ಸೂರತ್ ನಗರದಲ್ಲೊಂದು ‘ಸೀರೆ ವಾಕಥಾನ್’

|

Updated on: Apr 10, 2023 | 2:39 PM

ಜಿ20 ಶೃಂಗಸಭೆಯ ನಾಯಕತ್ವ ಈ ಬಾರಿ ಭಾರತ ವಹಿಸಿಕೊಂಡಿರುವುದರಿಂದ ಅದರಲ್ಲಿ ಸಾರ್ವಜನಿಕರು ಭಾಗಿಯಾಗುವುದನ್ನು ಪ್ರಮೋಟ್ ಮಾಡಲು ವಿನ್ಯಾಸಗೊಳಿಸಿರುವ ಹಲವು ಕಾರ್ಯಕ್ರಮಗಳಲ್ಲಿ ಸೀರೆ ವಾಕಥಾನ್ ಒಂದಾಗಿದೆ.

ಸೂರತ್: ಮಹಿಳೆಯರಲ್ಲಿ ಫಿಟ್ನೆಸ್ (fitness) ಕುರಿತು ಜಾಗೃತಿ ಮೂಡಿಸಲು ಸೂರತ್ ಪುರಸಭಾ ಸಂಸ್ಥೆ (city municipal corporation) ರವಿವಾರದಂದು ಸೂರತ್ ಸೀರೆ ವಾಕಥಾನ್ (Surat Saree Walkathon) ಅಯೋಜಿಸಿತ್ತು. ನಗರದ ಪೊಲೀಸ್ ಮೈದಾನದಿಂದ ವಾಕಥ್ಲಾನ್ ಆರಂಭಗೊಂಡಿತ್ತು.

‘ಎಸ್ ಎಮ್ ಸಿ ಆಯೋಜಿಸಿದ ವಾಕಥಾನ್ ಬಗ್ಗೆ ಗೊತ್ತಾದಾಗ ಈ ಸೀರೆಯುಟ್ಟು ಅದರಲ್ಲಿ ಭಾಗವಹಿಸಿದ್ದಯ ಬಹಳ ಸಂತೋಷ ನೀಡಿತು. ಇದು ನನ್ನ ಅತ್ಯಂತ ನೆಚ್ಚಿನ ಸೀರೆಯಾಗಿರುವುದರಿಂದ ಇದನ್ನೇ ಉಡಬಯಸಿದ್ದೆ. ಈವೆಂಟ್ ನಲ್ಲಿ ಭಾಗವಹಿಸಿದ್ದು ನಮ್ಮೆಲ್ಲರಿಗೆ ಸಂತೋಷ ನೀಡಿದೆ,’ ಎಂದು ವಾಕಥಾನ್ ನಲ್ಲಿ ಭಾಗವಹಿಸಿದ್ದ ಸ್ವಾತಿ ಚೌಹಾನ್ ಹೇಳುತ್ತಾರೆ.
ಸೂರತ್ ಅಲ್ಲದೆ ಬೇರೆ ಬೇರೆ ಊರುಗಳಿಂದ ಆಗಮಿಸಿದ್ದ 10,000 ಹೆಚ್ಚು ಮಹಿಳೆಯರು ವಾಕಥಾನ್ ನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಆರಂಭಕ್ಕೆ ಮೊದಲು ಮಹಿಳೆಯರಿಗೆ ಜುಂಬಾ ಮತ್ತು ಯೋಗದ ತರಬೇತಿಯನ್ನು ನೀಡಲಾಯಿತು.

ಇದನ್ನೂ ಓದಿ:  ವೇದಿಕೆ ಮೇಲೆ ವಿದೇಶಿ ಮಹಿಳೆಯ ಎತ್ತಿಕೊಂಡು ಮುತ್ತಿಟ್ಟ ನಟ ವರುಣ್ ಧವನ್, ತೀವ್ರ ಟೀಕೆ

‘ಮನೆಯಲ್ಲಿ ಸೀರೆಯುಟ್ಟು ಹಗಲು ರಾತ್ರಿ ಮನೆಕೆಲಸಗಳಲ್ಲಿ ಮಗ್ನರಾಗಿ ಸುಮ್ಮನೆ ಸ್ವಲ್ಪಹೊತ್ತು ತಿರುಗಾಡಲು ಹೊರಗಡೆ ಸಹ ಬಾರದ ಗೃಹಿಣಿಯರಿಗೆ ಈ ವಾಕಥಾನ್ ನಲ್ಲಿ ಸೀರೆಯುಟ್ಟು ನಡೆಯುವುದು/ ಓಡುವುದು ಒಂದು ಉತ್ತಮ ಪರಿಕಲ್ಪನೆಯಾಗಿದೆ, ಬಹಳ ಪ್ರಯೋಜಕಾರಿಯೂ ಆಗಿದೆ. ಸೀರೆಯನ್ನು ಉಟ್ಟು ಸಹ ವಾಕ್ ಗೆ ಹೋಗಬಹುದು ಎಂಬ ವಿಶ್ವಾಸ ಅವರಲ್ಲಿ ಮೂಡಲಿರುವುದರಿದ ಅವರು ಶೂ ಧರಿಸಿ ಅದನ್ನು ಮಾಡುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಲಿದ್ದಾರೆ,’ ಎಂದು ವೃತ್ತಿಯಲ್ಲಿ ಗಾಯಕಿಯಾಗಿರುವ ವೈಶಾಲಿ ಗೊಹ್ಲಿ ಹೇಳುತ್ತಾರೆ.

ವಾಕಥಾನ್ ನಲ್ಲಿ ಭಾಗವಹಿಸಿದವರ ಜೊತೆ ಕೇಂದ್ರ ವಸತಿ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ಗೋಷ್ ಮತ್ತು ಸೂರತ್ ಮೇಯರ್ ಹೆಮಾಲಿ ಭಘಾವಾಲಾ ಗರ್ಬಾ ನೃತ್ಯ ಮಾಡಿದರು.

‘ಸೂರತ್ ಮಹಿಳೆಯರು ವಾಕ್ ಮಾಡಲಾರಂಭಿಸಿದ್ದಾರೆ. ಸೂರತ್ ಒಂದು ಸ್ಮಾರ್ಟ್ ಸಿಟಿಯಾಗಿದ್ದು, ಇಲ್ಲಿನ ನಗರಸಭೆ ಮತ್ತು ಸೂರತ್ ಸ್ಮಾರ್ಟ್ ಸಿಟಿ-ಎರಡು ಸಂಸ್ಥೆಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ. ಒಟ್ಟು 12,000 ನೋಂದಣಿಗಳಾಗಿದ್ದವು ಮತ್ತು ಅನೇಕ ಮಹಿಳೆಯರು ಸೀರೆಯುಟ್ಟು ವಾಕಥಾನ್ ನಲ್ಲಿ ಭಾಗವಹಿಸಿದರು,’ ಎಂದು ಕೇಂದ್ರ ವಸತಿ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ಗೋಷ್ ಹೇಳಿದರು.

ಇದನ್ನೂ ಓದಿ:  ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಪ್ರಯಾಣಿಕನ ಬ್ಯಾಗ್​ನಲ್ಲಿ ಸಿಕ್ತು 1ಕೋಟಿಗೂ ಅಧಿಕ ವಿದೇಶಿ ಹಣ 

ಡಬ್ಲ್ಯೂ 20 ಸಂಸ್ಥೆಯ ಅಧ್ಯಕ್ಷೆಯಾಗಿರುವ ಡಾ ಸಂಧ್ಯಾ ಪುರೇಚ, ‘ಸೀರೆ ನಮ್ಮ ಪರಂಪರೆ, ಅಭಿಮಾನ, ಮತ್ತು ರಾಷ್ಟ್ರೀಯತೆಯ ಸಂಕೇತವಾಗಿದೆ. ಸೀರೆಯುಟ್ಟು ಫಿಟ್ ಮತ್ತು ಆರೋಗ್ಯಕರ ಜೀವನ ನಡೆಸಲು ಇದಕ್ಕಿಂತ ಉತ್ತಮ ಉಪಾಯ ಬೇರೇನಿದೆ? ಸೂರತ್ ನಗರಸಭೆ ಈ ಕಾರ್ಯಕ್ರಮ ಆಯೋಜಿಸಿದ್ದನ್ನು ನಾವು ಗಮನಿಸಿದೆವು, ಅವರಿಗೆ ಡಬ್ಲ್ಯೂ 20 ಸಂಸ್ಥೆಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು,’ ಎಂದು ಹೇಳಿದರು.

ಜಿ20 ಶೃಂಗಸಭೆಯ ನಾಯಕತ್ವ ಈ ಬಾರಿ ಭಾರತ ವಹಿಸಿಕೊಂಡಿರುವುದರಿಂದ ಅದರಲ್ಲಿ ಸಾರ್ವಜನಿಕರು ಭಾಗಿಯಾಗುವುದನ್ನು ಪ್ರಮೋಟ್ ಮಾಡಲು ವಿನ್ಯಾಸಗೊಳಿಸಿರುವ ಹಲವು ಕಾರ್ಯಕ್ರಮಗಳಲ್ಲಿ ಸೀರೆ ವಾಕಥಾನ್ ಒಂದಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ವೋಕಲ್ ಫಾರ್ ಲೋಕಲ್,’ ‘ಫಿಟ್ ಇಂಡಿಯ,’ ಮತ್ತು ‘ಮೇಕ್ ಇನ್ ಇಂಡಿಯ’ ಘೋಷವಾಕ್ಯಗಳಿಗೆ ಸೂರತ್ ಸೀರೆ ವಾಕಥಾನ್ ಪೂರಕವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ