Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇದಿಕೆ ಮೇಲೆ ವಿದೇಶಿ ಮಹಿಳೆಯ ಎತ್ತಿಕೊಂಡು ಮುತ್ತಿಟ್ಟ ನಟ ವರುಣ್ ಧವನ್, ತೀವ್ರ ಟೀಕೆ

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ನಟ ವರುಣ್ ಧವನ್, ವಿದೇಶಿ ಸೂಪರ್ ಮಾಡೆಲ್ ಗೀಗಿ ಹದೀದ್ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಟೀಕೆ ವ್ಯಕ್ತವಾಗಿದೆ.

ವೇದಿಕೆ ಮೇಲೆ ವಿದೇಶಿ ಮಹಿಳೆಯ ಎತ್ತಿಕೊಂಡು ಮುತ್ತಿಟ್ಟ ನಟ ವರುಣ್ ಧವನ್, ತೀವ್ರ ಟೀಕೆ
ವರುಣ್ ಧವನ್
Follow us
ಮಂಜುನಾಥ ಸಿ.
|

Updated on:Apr 02, 2023 | 7:02 PM

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ಉದ್ಘಾಟನೆ ಕಾರ್ಯಕ್ರಮ ಭಾರಿ ಅದ್ಧೂರಿಯಾಗಿತ್ತು. ಬಾಲಿವುಡ್​ನ (Bollywood) ಹಲವು ದಿಗ್ಗಜರ ಜೊತೆಗೆ ಹಾಲಿವುಡ್​ನ (Hollywood) ಸ್ಟಾರ್ ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಉದ್ಘಾಟನಾ ಕಾರ್ಯಕ್ರಮದ ವೇದಿಕೆ ಮೇಲೆ ಹಲವು ಬಾಲಿವುಡ್ ನಟರು ನೃತ್ಯ ಮಾಡಿ ಅತಿಥಿಗಳನ್ನು ರಂಜಿಸಿದರು. ಆದರೆ ನೃತ್ಯ ಕಾರ್ಯಕ್ರಮದ ವೇಳೆ ನಟ ವರುಣ್ ಧವನ್ (Varun Dhawan) ನಡೆದುಕೊಂಡಿರುವ ರೀತಿ ಟೀಕೆಗೆ ಗುರಿಯಾಗಿದೆ.

ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕುಣಿದ ನಟ ವರುಣ್ ಧವನ್ ಅಮೆರಿಕದ ಸೂಪರ್ ಮಾಡೆಲ್ ಗೀಗಿ ಹದೀದ್ ಅನ್ನು ಎತ್ತಿಕೊಂಡು ವೇದಿಕೆ ಮೇಲೆಯೇ ಮುತ್ತು ಕೊಟ್ಟಿದ್ದಾರೆ. ವರುಣ್​ರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವರುಣ್ ಧವನ್​ರ ಈ ನಡೆಗೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ವರುಣ್ ಧವನ್, ಗೀಗಿಯನ್ನು ಎತ್ತಿಕೊಂಡಿದ್ದು ನೃತ್ಯದ ಭಾಗವಾಗಿರಲಿಲ್ಲ, ಬದಲಿಗೆ ಗೀಗಿಯನ್ನು ವೇದಿಕೆಗೆ ಆಹ್ವಾನಿಸಿ ಆಕೆಯನ್ನು ಎತ್ತಿಕೊಂಡು ಮುತ್ತುಕೊಟ್ಟಿದ್ದಾರೆ ವರುಣ್, ಹಾಗಾಗಿ ಟೀಕೆ ವ್ಯಕ್ತವಾಗುತ್ತಿದೆ.

ಗೀಗಿ ಹದೀದಿಯ ಒಪ್ಪಿಗೆ ಇಲ್ಲದೆ ವರುಣ್ ಧವನ್ ಹೀಗೆ ಮುತ್ತುಕೊಟ್ಟಿರುವುದು ಸರಿಯಲ್ಲ ಎಂದು ಹಲವರು ಹೇಳಿದ್ದಾರೆ. ಮಹಿಳೆ ಎಲ್ಲಿಯೂ ಸುರಕ್ಷಿತಳಲ್ಲ, ವರುಣ್ ಧವನ್ ತಮ್ಮ ಹೀರೋತನ ತೋರಿಸಲು ಮಹಿಳೆಯನ್ನು ಹೀಗೆ ಕೀಳಾಗಿ ಬಳಸಿಕೊಂಡಿರುವುದು ಸರಿಯಲ್ಲವೆಂದು ಕೆಲವರು ಟೀಕಿಸಿದ್ದಾರೆ. ವರುಣ್ ಧವನ್ ತಮ್ಮನ್ನು ತಾವು ನಿಯಂತ್ರದಲ್ಲಿಟ್ಟುಕೊಳ್ಳಬೇಕು, ಆನ್​ಸ್ಕ್ರೀನ್ ಹೀಗೆ ಮಾಡಿದರೆ ಸರಿ ಎನ್ನಬಹುದು, ಆದರೆ ವೇದಿಕೆಯ ಮೇಲೆ ಹೀಗೆ ಮಾಡುವುದು ಸರಿಯಲ್ಲ ಎಂದಿರುವ ನೆಟ್ಟಿಗರೊಬ್ಬರು ಈ ಹಿಂದೆ ಇದೇ ವರುಣ್ ಧವನ್, ಪತ್ರಿಕಾಗೋಷ್ಠಿಯೊಂದರಲ್ಲಿ ಆಲಿಯಾ ಭಟ್​ರ ಅನುಮತಿ ಇಲ್ಲದೆ ಅವರ ಸೊಂಟ ಹಿಚುಕಿದ್ದ ಘಟನೆಯನ್ನು ನೆನಪಿಸಿದ್ದಾರೆ.

ತಮ್ಮ ವಿಡಿಯೋಕ್ಕೆ ವಿರೋಧ ವ್ಯಕ್ತವಾಗುತ್ತಲೆ ಘಟನೆ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ನಟ ವರುಣ್ ಧವನ್, ”ಬಹುಷಃ ಇಂದು ಬೆಳಿಗ್ಗೆ ನೀವು ಎದ್ದ ಕೂಡಲೇ ಜಾಗೃತಗೊಳ್ಳಲು ನಿರ್ಧರಿಸಿದಂತಿದೆ” ಎಂದು ಟ್ರೋಲರ್​ಗಳ ಕಾಲೆಳೆದಿರುವ ವರುಣ್, ”ನಿಮ್ಮ ತಪ್ಪು ಕಲ್ಪನೆಯ ನೀರಿನ ಗುಳ್ಳೆಗೆ ನಾನೀಗ ಸೂಜಿ ಚುಚ್ಚಲಿದ್ದೇನೆ, ಗೀಗಿ ಹದೀದ್ ವೇದಿಕೆ ಮೇಲೆ ಬರಬೇಕೆಂಬುದು ಮೊದಲೇ ನಿಶ್ಚಿತವಾಗಿತ್ತು, ಆ ಕಾರ್ಯ ಯೋಜನೆಯಂತೆಯೇ ನಡೆದಿದೆ. ಹಾಗಾಗಿ ನಿಮ್ಮ ಮೂಗು ತೂರಿಸಲು ಬೇರೆ ಯಾವುದಾದರೂ ವಿಷಯವನ್ನು ಹುಡುಕಿಕೊಳ್ಳಿ, ಹೊರಗೆ ಹೋಗಿ ನಿಜವಾದ ಕೆಲಸ ಮಾಡದೆ ಇಂಥಹುದರಲ್ಲೇ ಸಮಯ ವ್ಯರ್ಥ ಮಾಡಿಕೊಂಡಿರಿ” ಎಂದು ಖಾರವಾಗಿಯೇ ಪ್ರತಿಕ್ರಯಿಸಿದ್ದಾರೆ.

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ವರುಣ್ ಧವನ್ ಮಾತ್ರವೇ ಅಲ್ಲದೆ ಹಲವರು ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡಿ ರಂಜಿಸಿದರು. ಸ್ವತಃ ನೀತಾ ಅಂಬಾನಿ ಮೊದಲಿಗೆ ನೃತ್ಯ ಪ್ರದರ್ಶನ ನೀಡಿದರು. ಅದಾದ ಬಳಿಕ ಶಾರುಖ್ ಖಾನ್, ರಣ್ವೀರ್ ಸಿಂಗ್, ವರುಣ್ ಧವನ್ ಇನ್ನೂ ಹಲವರು ತಾರೆಯರು ವೇದಿಕೆ ಏರಿದರು. ಶಾರುಖ್ ಖಾನ್ ತಮ್ಮ ಇತ್ತೀಚೆಗಿನ ಪಠಾಣ್ ಸಿನಿಮಾದ ಸ್ಟೆಪ್ ಹಾಕಿದರು ಅವರ ಜೊತೆಗೆ ವರುಣ್ ಧವನ್ ಹಾಗೂ ರಣ್ವೀರ್ ಸಿಂಗ್ ಸಹ ಸೇರಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Sun, 2 April 23

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ