ಹಿನ್ನಡೆ ಅನುಭವಿಸಿ ಹತಾಶರಾಗಿರುವ ರವಿಶಂಕರ್​​ನ್ನು ಸಂತೈಸಲು ಒಬ್ಬರೇ ಒಬ್ಬ ಬಿಜೆಪಿ ಕಾರ್ಯಕರ್ತ ಅವರೊಂದಿಗಿಲ್ಲ

| Updated By: ರಶ್ಮಿ ಕಲ್ಲಕಟ್ಟ

Updated on: Jun 16, 2022 | 12:50 PM

ಪಕ್ಷದ ಒಬ್ಬ ಕಾರ್ಯಕರ್ತ ಕೂಡಾ ಅವರೊಂದಿಗಿಲ್ಲ. ಅವರನ್ನು ನೋಡುತ್ತಿದ್ದರೆ ಒಂದು ಇಂಗ್ಲಿಷ್ ಗಾದೆಮಾತು ನೆನಪಾಗುತ್ತದೆ: Success has many fathers, but failure is an orphan, ರವಿಶಂಕರ್ ಅವರ ವಿಷಯದಲ್ಲಿ ಇದು ಅಕ್ಷರಶಃ ಸತ್ಯ!

Mysuru: ಹತಾಶೆ ಎಂವಿ ರವಿಶಂಕರ್ (MV Ravishankar) ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇವರು ದಕ್ಷಿಣ ಪದವೀಧರ ಕ್ಷೇತ್ರದ (South Graduates constituency) ಬಿಜೆಪಿ ಆಭ್ಯರ್ಥಿ. ಮೈಸೂರಿನ ಮತ ಎಣಿಕೆ ಕೇಂದ್ರದ (Counting Centre ) ಮುಂದೆ ಒಂಟಿಯಾಗಿ ಕೂತು ತಮ್ಮ ಅದೃಷ್ಟವನ್ನು ಹಳಿದುಕೊಳ್ಳುತ್ತಿದ್ದಾರೆ. ಮತ ಎಣಿಕೆ ಕಾರ್ಯ ಇನ್ನೂ ಮುಗಿದಿಲ್ಲ, ಇನ್ನೂ ಎರಡು ಸುತ್ತಿನ ಎಣಿಕೆ ಬಾಕಿಯಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಗಿಂತ 6,000ಕ್ಕೂ ಹೆಚ್ಚು ಮತಗಳ ಹಿನ್ನೆಡೆಯಲ್ಲಿರುವುದರಿಂದ ತಮ್ಮ ಗೆಲುವು ಅಸಾಧ್ಯ ಅನ್ನೋದು ಅವರಿಗೆ ಮನವರಿಕೆಯಾಗಿದೆ. ಅವರ ಸ್ಥಿತಿ ನೋಡಿ ಮಾರಾಯ್ರೇ. ತಮ್ಮ ಪಕ್ಷದ ಒಬ್ಬರೇ ಒಬ್ಬ ಕಾರ್ಯಕರ್ತ ಅವರೊಂದಿಗಿಲ್ಲ. ಅವರನ್ನು ನೋಡುತ್ತಿದ್ದರೆ ಒಂದು ಇಂಗ್ಲಿಷ್ ಗಾದೆಮಾತು ನೆನಪಾಗುತ್ತದೆ: Success has many fathers, but failure is an orphan, ರವಿಶಂಕರ್ ಅವರ ವಿಷಯದಲ್ಲಿ ಇದು ಅಕ್ಷರಶಃ ಸತ್ಯ!

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published on: Jun 16, 2022 10:48 AM