Asia cup 2025: ಟಾಸ್ ಸಮಯದಲ್ಲಿ ರೋಹಿತ್​ರನ್ನು ನೆನೆದು ನಕ್ಕ ಸೂರ್ಯ; ವಿಡಿಯೋ ನೋಡಿ

Updated on: Sep 19, 2025 | 9:08 PM

SuryaKumar Yadav Forgets Player's Name: ಒಮಾನ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ತಂಡದ ಆಟಗಾರನ ಹೆಸರನ್ನು ಮರೆತು ನಗೆಪಾಟಲಿಗೆ ಕಾರಣರಾದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಬಳಿಕ, ಪ್ಲೇಯಿಂಗ್ 11 ಘೋಷಿಸುವಾಗ ಒಬ್ಬ ಆಟಗಾರನ ಹೆಸರು ನೆನಪಿರಲಿಲ್ಲ. ರೋಹಿತ್ ಶರ್ಮಾ ಅವರನ್ನು ಹೋಲಿಸಿ ನಗಲಾರಂಭಿಸಿದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಒಮಾನ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಎಲ್ಲರನ್ನೂ ನಗಿಸುವ ಒಂದು ಕೆಲಸ ಮಾಡಿದರು. ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆ ಬಳಿಕ ಪ್ಲೇಯಿಂಗ್ 11 ಬಗ್ಗೆ ಕೇಳಿದಾಗ, ಅವರು ಒಬ್ಬ ಆಟಗಾರನ ಹೆಸರನ್ನು ಮರೆತರು. ಈ ಪಂದ್ಯದಲ್ಲಿ ಹರ್ಷಿತ್ ರಾಣಾ ಆಡುತ್ತಿದ್ದಾರೆ ಎಂದ ಸೂರ್ಯನಿಗೆ ಇನ್ನೊಬ್ಬ ಆಟಗಾರ ಯಾರು ಎಂಬುದನ್ನು ಹೇಳಲು ಸಾಧ್ಯವಾಗಲಿಲ್ಲ.

ಸೂರ್ಯಕುಮಾರ್ ಯಾದವ್ ಆ ಹೆಸರನ್ನು ನೆನಪಿಟ್ಟುಕೊಳ್ಳಲು ತುಂಬಾ ಪ್ರಯತ್ನಿಸಿದರು ಆದರೆ ವಿಫಲರಾದರು. ಈ ಸಮಯದಲ್ಲಿ, ಅವರು, ‘ನಾನು ರೋಹಿತ್‌ನಂತೆ ಆಗಿದ್ದೇನೆಯೇ?’ ಎಂದು ಜೋರಾಗಿ ನಕ್ಕರು. ವಾಸ್ತವವಾಗಿ ರೋಹಿತ್ ಶರ್ಮಾ ಕೂಡ ಅನೇಕ ವಿಷಯಗಳನ್ನು ಮರೆತುಬಿಡುತ್ತಾರೆ. ಇದೀಗ ಅವರ ಹೆಸರನ್ನು ಉಲ್ಲೇಖಿಸುವ ಮೂಲಕ ಸೂರ್ಯಕುಮಾರ್ ಯಾದವ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದಾರೆ.