ನಡೆಯಲಾಗದ ಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್: ವಿಡಿಯೋ ಇಲ್ಲಿದೆ ನೋಡಿ

ನಡೆಯಲಾಗದ ಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್: ವಿಡಿಯೋ ಇಲ್ಲಿದೆ ನೋಡಿ

Vinay Bhat
|

Updated on: Dec 24, 2023 | 9:25 AM

Suryakumar Yadav injury: ಸೂರ್ಯಕುಮಾರ್ ಸುಮಾರು 7 ವಾರಗಳ ಕಾಲ ಕ್ರಿಕೆಟ್ ಆಕ್ಷನ್‌ನಿಂದ ದೂರವಿರುತ್ತಾರೆ. ಎಡಗಾಲಿಗೆ ವಾಕಿಂಗ್ ಬೂಟ್ ಧರಿಸಿ, ಊರುಗೋಲಿನ ನೆರವಿನೊಂದಿಗೆ ನಡೆದಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಹೀಗಾಗಿ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ.

ಆಫ್ರಿಕಾದಲ್ಲಿ ಭಾರತ ಟಿ20 ತಂಡದ ನಾಯಕತ್ವದ ವಹಿಸಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ಗಾಯದ ಸಮಸ್ಯೆಯಿಂದಾಗಿ ಮುಂದಿನ ಹಲವು ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಕೊನೆಯ ಟಿ20 ಪಂದ್ಯದಲ್ಲಿ ಸೂರ್ಯ ಗಾಯಕ್ಕೆ ಒಳಗಾಗಿದ್ದು, ಇದೀಗ ಮುಂದಿನ ತಿಂಗಳು ನಡೆಯಲಿರುವ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಸೂರ್ಯ ದೇಶಕ್ಕೆ ಮರಳಿ ಪಾದದ ಸ್ಕ್ಯಾನ್ ಮಾಡಿದ್ದು, ಗಾಯವು ಸಾಕಷ್ಟು ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸೂರ್ಯಕುಮಾರ್ ಸುಮಾರು 7 ವಾರಗಳ ಕಾಲ ಕ್ರಿಕೆಟ್ ಆಕ್ಷನ್‌ನಿಂದ ದೂರವಿರುತ್ತಾರೆ. ಎಡಗಾಲಿಗೆ ವಾಕಿಂಗ್ ಬೂಟ್ ಧರಿಸಿ, ಊರುಗೋಲಿನ ನೆರವಿನೊಂದಿಗೆ ನಡೆದಾಡುತ್ತಿರುವ ವಿಡಿಯೋವನ್ನು ಸೂರ್ಯಕುಮಾರ್ ಯಾದವ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ, ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಉಳಿಯುವ ಮೂಲಕ ಪುನರ್ವಸತಿಗೆ ಒಳಗಾಗಬೇಕಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.