‘ಕಲ್ ಗುಂಡಿಗೆ ಗಂಡು’ ಅಂಬರೀಶ್ ಹೇಳಿದ್ದ ಮಾತು ನೆನಪಿಸಿಕೊಂಡ ಮಾಲಾಶ್ರೀ

‘ಕಲ್ ಗುಂಡಿಗೆ ಗಂಡು’ ಅಂಬರೀಶ್ ಹೇಳಿದ್ದ ಮಾತು ನೆನಪಿಸಿಕೊಂಡ ಮಾಲಾಶ್ರೀ

ಮಂಜುನಾಥ ಸಿ.
|

Updated on: Dec 23, 2023 | 11:20 PM

Malshree: ಹಿರಿಯ ನಟಿ ಮಾಲಾಶ್ರೀ ಪುತ್ರಿ, ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಮಂಡ್ಯದಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಅಂಬರೀಶ್ ಅವರನ್ನು ಮಾಲಾಶ್ರೀ ನೆನಪು ಮಾಡಿಕೊಂಡರು.

ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ಹಿರಿಯ ನಟಿ ಮಾಲಾಶ್ರೀ ಪುತ್ರಿ ರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಮಂಡ್ಯದಲ್ಲಿ ಅದ್ಧೂರಿಯಾಗಿ ನೆಡೆದಿದೆ. ಕಾರ್ಯಕ್ರಮದಲ್ಲಿ ‘ಕಾಟೇರ’ ಸಿನಿಮಾದ ಜೊತೆಗೆ ಅಂಬರೀಶ್ ಬಗ್ಗೆಯೂ ಹಲವು ಗಣ್ಯರು ಮಾತನಾಡಿದರು. ಪುತ್ರಿಯನ್ನು ತಮ್ಮ ವೃತ್ತಿಗೆ ಪರಿಚಯಿಸುತ್ತಿರುವ ಖುಷಿಯಲ್ಲಿ ವೇದಿಕೆ ಏರಿದ ನಟಿ ಮಾಲಾಶ್ರೀ, ತಾವು ಅಂಬರೀಶ್ ಜೊತೆ ನಟಿಸುತ್ತಿದ್ದ ದಿನಗಳನ್ನು ನೆನಪು ಮಾಡಿಕೊಂಡರು. ಅಂಬರೀಶ್ ಬೈಯ್ದು ಹೇಳುತ್ತಿದ್ದ ಬುದ್ಧಿಮಾತುಗಳನ್ನು ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ