AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಮಲತಾ ಅಂಬರೀಶ್ ಅವರನ್ನು ಏನೆಂದು ಕರೆಯುತ್ತಾರೆ ನಟ ದರ್ಶನ್?

Darshan: ನಟ ದರ್ಶನ್, ಅಂಬರೀಶ್ ಮನೆಯ ಅತ್ಯಂತ ಆಪ್ತ ಸದಸ್ಯ. ಅಂದಹಾಗೆ ಸಂಸದೆ, ನಟಿ ಸುಮಲತಾ ಅಂಬರೀಶ್ ಅವರನ್ನು ದರ್ಶನ್ ಏನೆಂದು ಕರೆಯುತ್ತಾರೆ ಗೊತ್ತೆ?

ಸುಮಲತಾ ಅಂಬರೀಶ್ ಅವರನ್ನು ಏನೆಂದು ಕರೆಯುತ್ತಾರೆ ನಟ ದರ್ಶನ್?
ದರ್ಶನ್-ಸುಮಲತಾ
Follow us
ಮಂಜುನಾಥ ಸಿ.
|

Updated on: Dec 23, 2023 | 10:56 PM

ಅಂಬರೀಶ್ (Ambareesh) ಕುಟುಂಬಕ್ಕೂ ನಟ ದರ್ಶನ್​ಗೂ ಹಲವು ವರ್ಷಗಳ ನಂಟು. ಅಂಬರೀಶ್ ಬದುಕಿದ್ದ ಸಮಯದಿಂದಲೂ ಆ ಕುಟುಂಬದ ಮಾನಸ ಪುತ್ರನಂತೆಯೇ ಇದ್ದರು ದರ್ಶನ್. ಸ್ವತಃ ಅಂಬರೀಶ್ ಸಹ ಹಲವು ಬಾರಿ ದರ್ಶನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು, ತಮ್ಮ ಪುತ್ರನಂತೆ ಎಂದು ಸಹ ಹೇಳಿದ್ದರು. ದರ್ಶನ್ ಸಹ ಹಾಗೆಯೇ ನಡೆದುಕೊಂಡಿದ್ದಾರೆ. ಅಂಬರೀಶ್ ಕಾಲವಾದ ಬಳಿಕ ಆ ಮನೆಯ ಸದಸ್ಯನಂತೆ ವರ್ತಿಸಿದ್ದಾರೆ. ಅಗತ್ಯ ಬಂದಾಗ ಸುಮಲತಾ ಅವರ ಮಗನಂತೆ ಎದೆಗೊಟ್ಟೆ ನಿಂತಿದ್ದಾರೆ. ಸುಮಲತಾ ಹಾಗೂ ಅಭಿಷೇಕ್ ಅಂಬರೀಶ್ ಸಹ ದರ್ಶನ್ ಅವರನ್ನು ತಮ್ಮ ಮನೆಯ ಸದಸ್ಯನೆಂದೇ ಪರಿಗಣಿಸಿದ್ದಾರೆ.

ಇಂದು (ಡಿಸೆಂಬರ್ 23) ಸುಮಲತಾರ ಲೋಕಸಭಾ ಕ್ಷೇತ್ರ ಮಂಡ್ಯದಲ್ಲಿ ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಹಾಡು ಲಾಂಚ್ ಮಾಡಲಾಗಿದೆ. ಇದಕ್ಕಾಗಿ ಅದ್ಧೂರಿ ಕಾರ್ಯಕ್ರಮವನ್ನು ಮಾಡಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂಸದೆ ಸುಮಲತಾ ಭಾಗಿಯಾಗಿದ್ದಾರೆ. ಇಂದು (ಡಿಸೆಂಬರ್ 23) ರೈತ ದಿನವೂ ಆಗಿದ್ದು, ಈ ದಿನದ ವಿಶೇಷವಾಗಿ ‘ಕಾಟೇರ’ ಸಿನಿಮಾದಲ್ಲಿನ ರೈತರ ಬಗೆಗಿನ ಹಾಡನ್ನು ಸುಮಲತಾ ಅವರು ಬಿಡುಗಡೆ ಮಾಡಿದ್ದಾರೆ.

ಹಾಡು ಬಿಡುಗಡೆ ಮಾಡಿ ಮಾತನಾಡಿರುವ ಸಂಸದೆ ಸುಮಲತಾ, ಮಂಡ್ಯದ ಜನರ ಬಗ್ಗೆ, ಅವರ ಪ್ರೀತಿಯ ಬಗ್ಗೆ ಮಾತನಾಡಿದ ಬಳಿಕ ನಟ ದರ್ಶನ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ‘‘ಮಂಡ್ಯ ಜನ ಪ್ರೀತಿ ಕೊಟ್ಟರೆ ಯಾವ ರೀತಿ ಇರುತ್ತದೆ ಎಂಬುದು ನಮಗೆ ಗೊತ್ತಿದೆ. ಅಂಬರೀಶ್ ಅವರಿಗೆ ನೀಡಿದ ಪ್ರೀತಿಯನ್ನೇ ನಮಗೂ ನೀಡಿದ್ದೀರಿ. ಮಂಡ್ಯದಲ್ಲಿ ಏನೇ ನಡೆದರೂ ಅದು ಇತಿಹಾಸವೇ. ‘ಕಾಟೇರ’ ಸಿನಿಮಾದ ಹಲವು ಕಾರ್ಯಕ್ರಮಗಳು ನಡೆದಿವೆ, ಆದರೆ ಮಂಡ್ಯದಲ್ಲಿ ಇಂದು ನಡೆಯುತ್ತಿರುವ ಈ ಇವೆಂಟ್ ಸಹ ಇತಿಹಾಸವೇ ಆಗಬೇಕು, ಹಲವು ವರ್ಷಗಳ ಕಾಲ ಈ ಕಾರ್ಯಕ್ರಮವನ್ನು ಜನ ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದರು.

ಇದನ್ನೂ ಓದಿ:ಲೋಕಸಭಾ ಚುನಾವಣೆ: ನಿಖಿಲ್​ರನ್ನು​ ಅಖಾಡಕ್ಕೆ ಇಳಿಸಲು ಒತ್ತಡ, ಬೆಂಗಳೂರು ಉತ್ತರಕ್ಕೆ ಹೋಗುತ್ತಾರ ಸುಮಲತಾ?

‘‘ನಾಲ್ಕೂವರೆ ವರ್ಷದ ಹಿಂದೆ ನೀವು ಸೃಷ್ಟಿಸಿದ ಇತಿಹಾಸ ನಾನು ಮರೆಯಲಾರೆ, ಬಹುಷಃ ನೀವು ಮರೆಯಲಾರಿರಿ. ನನಗೆ ಯಾರೂ ಇಲ್ಲ, ನನ್ನಲ್ಲಿನ ಶಕ್ತಿ ನಾನು ಕಳೆದುಕೊಂಡೆ ಎಂದುಕೊಂಡಿದ್ದಾಗ, ನನಗೆ ಶಕ್ತಿಯಾಗಿ ನಿಂತಿದ್ದು ನನ್ನ ಮಂಡ್ಯದ ಜನ. ಜೊತೆಗೆ ಇನ್ನಷ್ಟು ಶಕ್ತಿಯನ್ನು ನನ್ನ ಆಪ್ತರು ತುಂಬಿದರು. ಅದರಲ್ಲಿ ಮುಖ್ಯ ಶಕ್ತಿ ಡಿ-ಬಾಸ್, ದರ್ಶನ್. ಅಭಿಮಾನಿಗಳು ದರ್ಶನ್ ಮೇಲೆ ಎಷ್ಟು ಅಭಿಮಾನ ಇಟ್ಟುಕೊಂಡಿದ್ದಾರೆಯೋ ಅದೇ ಅಭಿಮಾನವನ್ನು ಅವರು ಅವರ ಅಭಿಮಾನಿಗಳ ಮೇಲೆ ಇಟ್ಟಿದ್ದಾರೆ. ಹಾಗಾಗಿ ಅವರನ್ನು ಸೆಲೆಬ್ರಿಟಿ ಎಂದು ಕರೆಯುತ್ತಾರೆ. ನಾನೂ ಸಹ ದರ್ಶನ್​ರ ಸೆಲೆಬ್ರಿಟಿ’’ ಎಂದರು ಸುಮಲತಾ.

‘‘ದರ್ಶನ್ ನನ್ನನ್ನು ‘ಮದರ್ ಇಂಡಿಯಾ’ ಎಂದೇ ಕರೆಯೋದು. ಮಂಡ್ಯಕ್ಕೆ ನಾನು ಸೊಸೆ ಮತ್ತು ಸಂಸದೆ, ಆದರೆ ಇಲ್ಲಿ ನಾನು ನಿಂತಿರುವುದು ನಿಮ್ಮಂತೆ ನಾನೂ ಸಹ ದರ್ಶನ್ ಅಭಿಮಾನಿಯಾಗಿ, ದರ್ಶನ್​ರ ಸೆಲೆಬ್ರಿಟಿಯಾಗಿ. ನನಗೆ ದರ್ಶನ್​ರ ನಟನೆ, ಡ್ಯಾನ್ಸ್, ಹಾಡು, ಫೈಟ್​ಗಳೆಂದರೆ ಬಹಳ ಇಷ್ಟ. ಈಗ ಬಿಡುಗಡೆಗೆ ರೆಡಿಯಾಗಿರುವ ‘ಕಾಟೇರ’ ಸಿನಿಮಾವನ್ನು ನೋಡಲು ಸಹ ನಾನು ಕಾತರಳಾಗಿ ಕಾಯುತ್ತಿದ್ದೇನೆ’’ ಎಂದಿದ್ದಾರೆ. ‘ಕಾಟೇರ’ ಸಿನಿಮಾ ಡಿಸೆಂಬರ್ 29ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ