Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಂಗ್ ರೆಬಲ್ ಸ್ಟಾರ್ ಅಲ್ಲ, ಅಭಿಷೇಕ್ ಅಂಬರೀಶ್​ಗೆ ಹೊಸ ಹೆಸರು ಕೊಟ್ಟ ದರ್ಶನ್

Bad Manners: ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಟ್ರೈಲರ್ ಅನ್ನು ನಟ ದರ್ಶನ್ ಹಾಗೂ ಸಂಸದೆ ಸುಮಲತಾ ಬಿಡುಗಡೆ ಮಾಡಿದರು. ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ದರ್ಶನ್ ಮಾತನಾಡಿ, ಅಭಿಷೇಕ್ ಅಂಬರೀಶ್​ಗೆ ಹೊಸ ಹೆಸರೊಂದನ್ನು ನೀಡಿದರು.

ಯಂಗ್ ರೆಬಲ್ ಸ್ಟಾರ್ ಅಲ್ಲ, ಅಭಿಷೇಕ್ ಅಂಬರೀಶ್​ಗೆ ಹೊಸ ಹೆಸರು ಕೊಟ್ಟ ದರ್ಶನ್
Follow us
ಮಂಜುನಾಥ ಸಿ.
|

Updated on: Nov 12, 2023 | 10:05 PM

ಅಭಿಷೇಕ್ ಅಂಬರೀಶ್ (Abhishek Ambareesh) ನಟನೆಯ ‘ಬ್ಯಾಡ್ ಮ್ಯಾನರ್ಸ್‘ (Bad Manners) ಸಿನಿಮಾ ಇದೇ ತಿಂಗಳ ಕೊನೆಯ ವಾರ ಬಿಡುಗಡೆ ಆಗಲಿದೆ. ಸಿನಿಮಾದ ಟೀಸರ್ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆಯನ್ನು ನಟ ದರ್ಶನ್, ನಟಿ, ಸಂಸದೆ ಸುಮಲತಾ ಅಂಬರೀಶ್ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಜಿಟಿ ಮಾಲ್​ನಲ್ಲಿ ಆಯೋಜಿಸಲಾಗಿತ್ತು.

ಸಿನಿಮಾದ ಟ್ರೈಲರ್ ಅನ್ನು ನಟ ದರ್ಶನ್ ಹಾಗೂ ಸುಮಲತಾ ಅವರು ಒಟ್ಟಿಗೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ನಟ ದರ್ಶನ್, ”ಸೂರಿ ಅವರ ಸಿನಿಮಾಗಳು ಭಿನ್ನವಾಗಿರುತ್ತವೆ. ಅವರದ್ದೇ ಆದ ದಾರಿಯಲ್ಲಿ ಅವರು ಸಿನಿಮಾ ಮಾಡುತ್ತಾರೆ. ಅವರ ಸಿನಿಮಾಗಳಲ್ಲಿ ಸಮಾಜವನ್ನು ಹಾನಿ ಮಾಡುತ್ತಿರುವ ವಿಷಗಳಿರುತ್ತವೆ. ಈ ಹಿಂದೆ ಡ್ರಗ್ಸ್​ ಇತ್ತು. ಈ ಸಿನಿಮಾದಲ್ಲಿ ಗನ್ ಇದೆ. ಯುವಕರು ಹೇಗೆ ಗನ್​ಗಳನ್ನು ಬಳಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದರ ಬಗ್ಗೆ ಸೂರಿಯವರು ಸಿನಿಮಾ ಮಾಡಿದ್ದಾರೆ” ಎಂದಿದ್ದಾರೆ ನಟ ದರ್ಶನ್.

”ನೀವೆಲ್ಲ ಸಿನಿಮಾದ ಟ್ರೈಲರ್ ನೋಡಿದ್ದೀರಿ, ನಾನು ಒಟ್ಟಾರೆ ಸಿನಿಮಾ ನೋಡಿದ್ದೇನೆ. ಬಹಳ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯ ಗುಣಮಟ್ಟದ ಸಿನಿಮಾ ನೋಡಿದ ಅನುಭವ ನನಗೆ ಆಯಿತು. ಇದಕ್ಕಾಗಿ ಸಿನಿಮಾಕ್ಕೆ ಕೆಲಸ ಮಾಡಿರುವ ಎಲ್ಲ ತಂತ್ರಜ್ಞರಿಗೂ ನಾನು ಧನ್ಯವಾದ ಹೇಳುತ್ತೀನಿ, ಸಿನಿಮಾದಲ್ಲಿ ಕೆಲಸ ಮಾಡಿರುವ ಎಲ್ಲ ಹಿರಿಯ ನಟರಿಗೂ ನಾನು ಧನ್ಯವಾದ ಹೇಳುತ್ತೀನಿ ಎಂದರು ದರ್ಶನ್.

ಇದನ್ನೂ ಓದಿ: ಬ್ಯಾಡ್ ಮ್ಯಾನರ್ಸ್ ಬಿಡುಗಡೆ ದಿನಾಂಕ ಘೋಷಣೆ: ಬ್ಯಾಕ್ ಲುಕ್​ನಲ್ಲಿ ಅಭಿಷೇಕ್ ಅಂಬರೀಶ್

ಅಭಿಷೇಕ್ ಅಂಬರೀಶ್ ಬಗ್ಗೆ ಮಾತನಾಡಿದ ನಟ ದರ್ಶನ್, ”ಮೊದಲ ಸಿನಿಮಾಗೂ ಈ ಸಿನಿಮಾಕ್ಕೂ ಅಭಿಷೇಕ್ ಅಂಬರೀಶ್ ಬಹಳ ಬದಲಾಗಿದ್ದಾರೆ. ಅವರ ಆಕ್ಟಿಂಗ್ ಸ್ಕಿಲ್ ಬದಲಾಗಿದೆ, ಸ್ಟೈಲ್ ಬದಲಾಗಿದೆ, ಇದಕ್ಕೆ ಸೂರಿಯವರೇ ಕಾರಣ. ಬಹಳ ಚೆನ್ನಾಗಿ ಕೆಲಸ ತೆಗೆಸಿಕೊಂಡಿದ್ದಾರೆ. ಇಷ್ಟು ದಿನ ಅವನನ್ನು ‘ಯಂಗ್ ರೆಬಲ್ ಸ್ಟಾರ್’ ಎನ್ನುತ್ತಿದ್ದಿರಿ, ಇನ್ನು ಮುಂದೆ ಅವರು ‘ರಿಯಲ್ ರೆಬಲ್ ಸ್ಟಾರ್’. ಅಭಿ ಈ ಸಿನಿಮಾದಲ್ಲಿ ನೋಡಲು ಸಹ ಬಹಳ ಮುದ್ದಾಗಿ ಕಾಣುತ್ತಿದ್ದಾರೆ. ಸಿನಿಮಾದ ಹೆಸರು ‘ಬ್ಯಾಡ್ ಮ್ಯಾನರ್ಸ್’ ಆದರೆ ಸಿನಿಮಾದಲ್ಲಿ ಒಳ್ಳೆಯ ಮ್ಯಾನರ್ಸ್ ಇದೆ. ಒಳ್ಳೆ ಮ್ಯಾನರ್ಸ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ದಯವಿಟ್ಟು ಎಲ್ಲರೂ ನವೆಂಬರ್ 24ಕ್ಕೆ ಬಿಡುಗಡೆ ಆಗಲಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ವೀಕ್ಷಿಸಿ ಎಂದರು.

ವೇದಿಕೆ ಮೇಲೆ ಹಾಜರಿದ್ದ ರವಿಚಂದ್ರನ್ ಪುತ್ರ ವಿಕ್ಕಿ, ನಟ ಧನ್ವೀರ್, ವಿನೋದ್ ಪ್ರಭಾಕರ್ ಅವರುಗಳ ಸಿನಿಮಾಗಳು ಸಹ ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅವರ ಸಿನಿಮಾಗಳಿಗೂ ಬೆಂಬಲ ನೀಡಿ ಎಂದು ದರ್ಶನ್ ಮನವಿ ಮಾಡಿದರು. ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ರಚಿತಾ ರಾಮ್, ದತ್ತಣ್ಣ ಇನ್ನೂ ಹಲವು ಪ್ರಮುಖ ನಟರಿದ್ದಾರೆ. ಸಿನಿಮಾದ ವಿತರಣೆ ಹಕ್ಕು, ಡಿಜಿಟಲ್, ಸ್ಯಾಟಲೈಟ್ ಹಕ್ಕುಗಳನ್ನು ಜಯಣ್ಣ ಫಿಲ್ಮ್ಸ್​ ಖರೀದಿ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ