ಲೋಕಸಭಾ ಚುನಾವಣೆ: ನಿಖಿಲ್ರನ್ನು ಅಖಾಡಕ್ಕೆ ಇಳಿಸಲು ಒತ್ತಡ, ಬೆಂಗಳೂರು ಉತ್ತರಕ್ಕೆ ಹೋಗುತ್ತಾರ ಸುಮಲತಾ?
ಲೋಕಸಭಾ ಚುನಾವಣೆಗೆ ಸಿದ್ಧತೆ ಜೋರಾಗಿದೆ. ಅದರಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆ ಮಂಡ್ಯ ಚುನಾವಣೆ ಅಖಾಡ ಮತ್ತಷ್ಟು ಕುತೂಹಲ ಮೂಡಿಸಿದೆ. ಮಂಡ್ಯ ಟಿಕೆಟ್ ನಿಖಿಲ್ಗೆ ನೀಡಬೇಕು ಎಂಬ ಒತ್ತಡ ಹೇಳಿ ಬಂದಿದ್ದು ಮತ್ತೊಂದೆಡೆ ಬಿಜೆಪಿಗೆ ಬೆಂಬಲ ನೀಡಿರುವ ಸುಮಲತಾ ಅವರು ಎಲ್ಲಿಂದ ಸರ್ಧೆ ಮಾಡುತ್ತಾರೆ ಎಂಬ ಚರ್ಚೆ ಹುಟ್ಟುಕೊಂಡಿದೆ.
ಮಂಡ್ಯ, ನ.25: ಸಕ್ಕರೆ ನಗರಿ ಮಂಡ್ಯದ ರಾಜಕೀಯ ಇಂಡಿಯಾದಲ್ಲೇ ಫೇಮಸ್(Lok Sabha Election). ಯಾವುದೇ ಚುನಾವಣೆ ಇದ್ದರೂ, ಮೊದಲು ಮುಂಚೂಣಿಗೆ ಬರುವುದೇ ಮಂಡ್ಯ. ಕಳೆದ ಬಾರಿಯ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಸುಮಲತಾ (Sumalatha Ambareesh) ವಿರುದ್ದ ಹೀನಾಯ ಸೋಲನ್ನ ಕಂಡಿದ್ದರು. ಈ ಸೋಲಿನ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ದಳಪತಿಗಳು, ಈ ಬಾರಿ ಮತ್ತೊಮ್ಮೆ ಚುನಾವಣೆಗೆ ನಿಖಿಲ್ ರನ್ನೆ ಕಣಕ್ಕೆ ಇಳಿಸಲು ಪ್ಯ್ಲಾನ್ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಟಕ್ಕರ್ ಕೊಡಲು ಮುಂದಾಗಿದ್ದಾರೆ.
ಮತ್ತೊಮ್ಮೆ ಮಂಡ್ಯ ಅಖಾಡಕ್ಕೆ ನಿಖಿಲ್?
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಿಖಿಲ್ ಹೆಸರು ಕೇಳಿ ಬರುತ್ತಿದೆ. ಮತ್ತೊಮ್ಮೆ ನಿಖಿಲ್‌ರನ್ನೇ ಕಣಕ್ಕೆ ಇಳಿಸುವಂತೆ ಮಂಡ್ಯ ಜೆಡಿಎಸ್ ನಾಯಕರು ಒತ್ತಡ ಹಾಕುತ್ತಿದ್ದಾರೆ. ಈ ಮೂಲಕ ಲೋಕಸಭೆ, ವಿಧಾನಸಭೆ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರ ಜೊತೆ ಜಿಲ್ಲೆಯ ಜೆಡಿಎಸ್ ನಾಯಕರು ಚರ್ಚೆ ಮಾಡಿದ್ದು ನಿಖಿಲ್ರನ್ನು ಕಣಕ್ಕೆ ಇಳಿಸಲು ಒತ್ತಡ ಹಾಕಿದ್ದಾರೆ. ಜೊತೆಗೆ ನಿಖಿಲ್ ಸ್ವರ್ಧೆ ಮಾಡಿದ್ರೆ ಗೆಲುವು ಸಾಧಿಸಲು ಅನುಕೂಲ ಎಂಬ ಲೆಕ್ಕಚಾರ ಹಾಕಲಾಗುತ್ತಿದೆ.
ಇದನ್ನೂ ಓದಿ: ಯಾರೇನೆ ಮೈತ್ರಿ ಮಾಡಿಕೊಂಡರೂ ನನ್ನ ನಿಲುವಿಗೆ ನಾನು ಬದ್ಧ: ಸುಮಲತಾ ಅಂಬರೀಶ್, ಸಂಸದೆ
ಒಂದೆಡೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಆಗಿದೆ. ಜಿಲ್ಲೆಯಲ್ಲಿ ಜೆಡಿಎಸ್ ಸಾಕಷ್ಟು ಬಲಿಷ್ಠವಾಗಿರುವುದರಿಂದ ಮಂಡ್ಯ ಕ್ಷೇತ್ರವನ್ನ ಜೆಡಿಎಸ್ ಬಿಟ್ಟುಕೊಡಬೇಕಾದ ಅನಿರ್ವಾಯ ಬಿಜೆಪಿಗೆ ಇದೆ. ಹೀಗಾಗಿ ನಿಖಿಲ್ ಸ್ವರ್ಧೆ ಮಾಡಿದ್ರೆ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಲಿದ್ದಾರೆ. ಈ ಬಾರಿ ನಿಖಿಲ್ ಸ್ವರ್ಧೆ ಮಾಡಿದ್ರೆ ಜನರ ಅನುಕಂಪ ಕೂಡ ವರ್ಕೌಟ್ ಆಗಲಿದೆ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಈ ಮೂಲಕ ಸಂಸದೆ ಸುಮಲತಾ, ಕಾಂಗ್ರೆಸ್ ಗೆ ಟಕ್ಕರ್ ಕೊಡಲು ಜೆಡಿಎಸ್ ಚಿಂತಿಸುತ್ತಿದೆ.
ಸಂಸದೆ ಸುಮಲತಾ ನಡೆ ಸಾಕಷ್ಟು ನಿಗೂಢ
ಇನ್ನು ಮತ್ತೊಂದೆಡೆ ಸಂಸದೆ ಸುಮಲತಾ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಿ ಸ್ವರ್ಧೆ ಮಾಡ್ತಾರೆ ಎಂಬ ಪ್ರಶ್ನೆ ಎದ್ದಿದೆ. ಮಂಡ್ಯನಾ, ಬೆಂಗಳೂರು ಉತ್ತರನಾ? ಮೈತ್ರಿ ಅಭ್ಯರ್ಥಿನಾ? ಇಲ್ಲ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧೆ ಮಾಡ್ತಾರಾ ಎಂಬಂತಾಗಿದೆ. ಸದ್ಯ ಮಂಡ್ಯ ಸಂಸದೆಯಾಗಿರೋ ಸುಮಲತಾ ಅವರು ಈಗಾಗಲೇ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಮೈತ್ರಿ ಅಂತಾ ಬಂದರೆ ಮಂಡ್ಯದಿಂದ ಸುಮಲತಾಗೆ ಟಿಕೆಟ್ ಸಿಗೋದು ಕಷ್ಟ ಎನ್ನಲಾಗುತ್ತಿದೆ. ಈ ಬಾರಿ ಮಂಡ್ಯ ಕ್ಷೇತ್ರ ಸೇರಿ ಕೆಲವು ಲೋಕಸಭಾ ಕ್ಷೇತ್ರಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಗೆ ಅಂತಾದ್ರೆ ಸುಮಲತಾ ನಡೆ ಏನು? ಇದರ ನಡುವೆ ಸುಮಲತಾ ಬೆಂಗಳೂರು ಉತ್ತರದಿಂದ ಸ್ವರ್ಧೆ ಮಾಡ್ತಾರೆ ಎಂಬ ಚರ್ಚೆ ಕೂಡ ಶುರುವಾಗಿದೆ. ಅಲ್ಲದೆ ಸುಮಲತಾ ಅವರು ಕಾಂಗ್ರೆಸ್ ಕದ ತಟ್ಟುತ್ತಾರಾ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ