ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಡೆಡ್ಲಿ ವ್ಹೀಲಿಂಗ್; ಜೈಲಿನಿಂದ ಹೊರ ಬಂದ ಬಳಿಕವೂ ಮತ್ತೇ ಅದೇ ಚಾಳಿ
ಬೆಂಗಳೂರಿನ ನಾಗರಬಾವಿ ರಿಂಗ್ ರೋಡ್, ಜಯನಗರ ಮೆಟ್ರೋ ಪಿಲ್ಲರ್ ಕೆಳಗೆ, ಬಸವನಗುಡಿ ಪ್ಲೈ ಓವರ್ಸ್ ಸೇರಿ ಹಲವು ಕಡೆ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪೊಲೀಸರು ಅಪಾಯಕಾರಿ ವ್ಹೀಲಿಂಗ್ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದ್ರು ಪ್ರಯೋಜನವಾಗುತ್ತಿಲ್ಲ.
ಬೆಂಗಳೂರು, ಡಿ.24: ಬೈಕ್ ವ್ಹೀಲಿಂಗ್ಗೆ (Wheeling) ಕಡಿವಾಣ ಹಾಕಲು ಪೊಲೀಸರು ಎಷ್ಟೇ ಕ್ರಮಗಳನ್ನು ಕೈಗೊಂಡರೂ ಬೈಕ್ ವ್ಹೀಲಿಂಗ್ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಬದಲಿಗೆ ದಿನೇ ದಿನೇ ವ್ಹೀಲಿಂಗ್ ಮಾಡುವ ಪುಂಡರ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರಿನ ಪ್ರಮುಖ ರಸ್ತೆಗಳು, ಮುಖ್ಯ ರಸ್ತೆಗಳಲ್ಲಿ ಅಪಾಯಕಾರಿ ಬೈಕ್ ವ್ಹೀಲಿಂಗ್ ಮಾಡಲಾಗುತ್ತಿದೆ. ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ ಅಪ್ಲೋಡ್ ಮಾಡಲಾಗುತ್ತಿದೆ.
ಬೆಂಗಳೂರಿನ ನಾಗರಬಾವಿ ರಿಂಗ್ ರೋಡ್, ಜಯನಗರ ಮೆಟ್ರೋ ಪಿಲ್ಲರ್ ಕೆಳಗೆ, ಬಸವನಗುಡಿ ಪ್ಲೈ ಓವರ್ಸ್ ಸೇರಿ ಹಲವು ಕಡೆ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಪೊಲೀಸರು ಅಪಾಯಕಾರಿ ವ್ಹೀಲಿಂಗ್ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದ್ರು ಪ್ರಯೋಜನವಾಗುತ್ತಿಲ್ಲ. ಸಂಚಾರ ಪೊಲೀಸರಿಗೂ ಕೇರ್ ಮಾಡದೇ ಯುವಕರು ಅಪಾಯಕಾರಿ ವ್ಹೀಲಿಂಗ್ ಮೂಲಕ ಇತರರಿಗೆ ತಲೆನೋವಾಗಿದ್ದಾರೆ. ಇತರ ಸವಾರರು ಕೈಯಲ್ಲಿ ಜೀವ ಹಿಡಿದು ಭಯದಲ್ಲೇ ಗಾಡಿ ಓಡಿಸುವ ಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದೆ ಆರ್.ಟಿ.ನಗರ ಪೊಲೀಸರು ಈ ಯುವಕನನ್ನು ಅರೆಸ್ಟ್ ಮಾಡಿದ್ದರು. ಆದರೆ ಈಗ ಮತ್ತೆ ಅದೇ ಚಾಳಿ ಮುಂದುವರಿಸಿದ್ದಾನೆ. ಅರೆಸ್ಟ್ ಮಾಡಿದ್ರು ಜಾಮೀನಿನ ಮೇಲೆ ಹೊರಬಂದು ಮತ್ತೆ, ಮತ್ತೆ ವ್ಹೀಲಿಂಗ್ ಮಾಡುತ್ತಿದ್ದಾನೆ. ನಂಬರ್ ಪ್ಲೇಟ್ ಇದ್ರೆ ಬೈಕ್ ಮಾಲೀಕರ ಪತ್ತೆ ಹಚ್ಚುತ್ತಾರೆ ಅಂತ ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾನೆ. ಸದ್ಯ ಈ ಯುವಕನ ವ್ಹೀಲಿಂಗ್ ವಿಡಿಯೋ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ