11 ಸಿಕ್ಸ್, 11 ಫೋರ್: ತೂಫಾನ್ ಸೆಂಚುರಿಯೊಂದಿಗೆ ದಾಖಲೆಯ ಚೇಸಿಂಗ್
T20 Blast 2025: ಜೋರ್ಡನ್ ಕಾಕ್ಸ್ 60 ಎಸೆತಗಳಲ್ಲಿ 11 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 130 ರನ್ ಚಚ್ಚಿದರು. ಈ ಮೂಲಕ ಎಸೆಕ್ಸ್ ತಂಡವು 19.2 ಓವರ್ಗಳಲ್ಲಿ 222 ರನ್ಗಳಿಸಿ 4 ವಿಕೆಟ್ಗಳ ಜಯ ಸಾಧಿಸಿತು. ವಿಶೇಷ ಎಂದರೆ ಇದು ಟಿ20 ಕ್ರಿಕೆಟ್ನಲ್ಲಿ ಎಸೆಕ್ಸ್ ತಂಡದ ಅತ್ಯುತ್ತಮ ಚೇಸಿಂಗ್ ಆಗಿದೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯ ಸೌತ್ ಗ್ರೂಪ್ ಪಂದ್ಯದಲ್ಲಿ ಜೋರ್ಡನ್ ಕಾಕ್ಸ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಚೆಲ್ಮ್ಸ್ ಫೋರ್ಡ್ನ ಕೌಂಟಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಎಸೆಕ್ಸ್ ಹಾಗೂ ಹ್ಯಾಂಪ್ಶೈರ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಹ್ಯಾಂಪ್ಶೈರ್ ಪರ ಆರಂಭಿಕ ದಾಂಡಿಗ ಟಾಮಿ್ ಅಲ್ಬರ್ಟ್ 84 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಹ್ಯಾಂಪ್ಶೈರ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಎಸೆಕ್ಸ್ ತಂಡದ ಪರ ವಿಕೆಟ್ ಕೀಪರ್ ಬ್ಯಾಟರ್ ಜೋರ್ಡನ್ ಕಾಕ್ಸ್ ಸಿಡಿಸಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಾಕ್ಸ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 47 ಎಸೆತಗಳಲ್ಲಿ ಶತಕ ಮೂಡಿಬಂತು.
ಶತಕದ ಬಳಿಕ ಕೂಡ ತನ್ನ ಆರ್ಭಟ ಮುಂದುವರೆಸಿದ ಜೋರ್ಡನ್ ಕಾಕ್ಸ್ 60 ಎಸೆತಗಳಲ್ಲಿ 11 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 139 ರನ್ ಚಚ್ಚಿದರು. ಈ ಮೂಲಕ ಎಸೆಕ್ಸ್ ತಂಡವು 19.2 ಓವರ್ಗಳಲ್ಲಿ 222 ರನ್ಗಳಿಸಿ 4 ವಿಕೆಟ್ಗಳ ಜಯ ಸಾಧಿಸಿತು. ವಿಶೇಷ ಎಂದರೆ ಇದು ಟಿ20 ಕ್ರಿಕೆಟ್ನಲ್ಲಿ ಎಸೆಕ್ಸ್ ತಂಡದ ಅತ್ಯುತ್ತಮ ಚೇಸಿಂಗ್ ಆಗಿದೆ.
ಅಂದರೆ ಇದೇ ಮೊದಲ ಬಾರಿಗೆ ಎಸೆಕ್ಸ್ ತಂಡವು 220+ ರನ್ಗಳ ಗುರಿ ಬೆನ್ನತ್ತಿ ಗೆಲುವು ದಾಖಲಿಸಿದೆ. ಈ ಮೂಲಕ ಎಸೆಕ್ಸ್ ಪಡೆಗೆ ಅಮೋಘ ಗೆಲುವು ತಂದುಕೊಡುವಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಜೋರ್ಡನ್ ಕಾಕ್ಸ್ ಯಶಸ್ವಿಯಾಗಿದ್ದಾರೆ.

