ಸಾರ್ವಜನಿಕ ಲೆಕ್ಕಪತ್ರ ಸಮಿತಿ ವತಿಯಿಂದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರೊಂದಿಗೆ ಪ್ರವಾಸ ಹೊರಟ ಜೆಡಿಎಸ್ ಪಕ್ಷದ ಟಿಎ ಸರವಣ

|

Updated on: Nov 02, 2023 | 1:21 PM

ಕಾಂಗ್ರೆಸ್ ಪಕ್ಷದ ಆರ್ ವಿ ದೇಶಪಾಂಡೆ, ಬಿಕೆ ಹರಿಪ್ರಸಾದ್, ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್, ಬಿಜೆಪಿಯ ಅಶೋಕ ಅಲ್ಲದೆ ಸುನೀಲ್ ಕುಮಾರ್, ವಿಶ್ವನಾಥ ಮತ್ತು ಜೆಡಿಎಸ್ ನಿಂದ ತಾವು ಪ್ರವಾಸ ಹೋಗುತ್ತಿರುವುದಾಗಿ ಸರವಣ ಹೇಳಿದರು. ಈ ಪ್ರವಾಸದಲ್ಲಿ ಸಮಿತಿಯು ಅಸ್ಸಾಂ ಅಲ್ಲದೆ ಮೇಘಾಲಯ ಮತ್ತು ಜಮ್ಮು ಮತ್ತು ಕಾಶ್ಮೀರ ಗಳಿಗೆ ಭೇಟಿ ನೀಡಲಿದೆ ಎಂದು ಜೆಡಿಎಸ್ ನಾಯಕ ಹೇಳಿದರು.

ಬೆಂಗಳೂರು: ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಟಿಎ ಸರವಣ (TA Saravana) ಇಂದು ಬೆಂಗಳೂರಿನಿಂದ ಗುವಹಾಟಿಗೆ ತೆರಳುವ ಮೊದಲು ಕೆಐಎ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ವತಿಯಿಂದ (Public Accounts Committee) ಮೂರು ರಾಜ್ಯಗಳ ಪ್ರವಾಸದ ಭಾಗವಾಗಿ ಅಸ್ಸಾಂ ರಾಜಧಾನಿಗೆ ಹೋಗುತ್ತಿರುವುದಾಗಿ ಹೇಳಿದರು. ಇದು ಸರ್ಕಾರಿ ಕಾರ್ಯಕ್ರಮವಲ್ಲ, ಸಮಿತಿಯ ಸದಸ್ಯರೆಲ್ಲ ಸ್ವಂತ ಖರ್ಚಿನಲ್ಲಿ ಹೋಗುತ್ತಿರವುದಾಗಿ ಹೇಳಿದ ಸರವಣ ಬಿಜೆಪಿ ನಾಯಕ ಆರ್ ಅಶೋಕ (R Ashoka) ಅವರ ನೇತೃತ್ವದ ರಾಜ್ಯ ಪಿಎಸಿಯಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿರುವರೆಂದು ಹೇಳಿದರು. ಕಾಂಗ್ರೆಸ್ ಪಕ್ಷದ ಆರ್ ವಿ ದೇಶಪಾಂಡೆ, ಬಿಕೆ ಹರಿಪ್ರಸಾದ್, ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್, ಬಿಜೆಪಿಯ ಅಶೋಕ ಅಲ್ಲದೆ ಸುನೀಲ್ ಕುಮಾರ್, ವಿಶ್ವನಾಥ ಮತ್ತು ಜೆಡಿಎಸ್ ನಿಂದ ತಾವು ಪ್ರವಾಸ ಹೋಗುತ್ತಿರುವುದಾಗಿ ಸರವಣ ಹೇಳಿದರು.

ಜಿಟಿ ದೇವೇಗೌಡ ಸಹ ತಮ್ಮೊಂದಿಗೆ ಬರಬೇಕಿತ್ತು ಆದರೆ ಹೆಚ್ ಡಿ ಕುಮಾರಸ್ವಾಮಿ ಅವರೊಂದಿಗೆ ತುರ್ತು ಸಭೆಯ ಕಾರಣ ಬರುತ್ತಿಲ್ಲ ಎಂದು ಹೇಳಿದರು. ಈ ಪ್ರವಾಸದಲ್ಲಿ ಸಮಿತಿಯು ಅಸ್ಸಾಂ ಅಲ್ಲದೆ ಮೇಘಾಲಯ ಮತ್ತು ಜಮ್ಮು ಮತ್ತು ಕಾಶ್ಮೀರಗಳಿಗೆ ಭೇಟಿ ನೀಡಲಿದೆ ಎಂದು ಜೆಡಿಎಸ್ ನಾಯಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ