ಮನೆ ಸಮೀಪ ಕಾಣಿಸಿಕೊಂಡ ಬೃಹತ್ ಕಾಳಿಂಗ ಸರ್ಪ ರಕ್ಷಣೆ; ಇಲ್ಲಿದೆ ವಿಡಿಯೋ
ಅಂಕೋಲಾ(Ankola)ದ ಕೃಷ್ಣಾಪುರದಲ್ಲಿ ಪ್ರಶಾಂತ್ ನಾಯ್ಕ ಎಂಬುವವರ ಮನೆಯ ಸಮೀಪ ಬೃಹತ್ ಕಾಳಿಂಗ ಸರ್ಪ(King Cobra)ವೊಂದು ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯ ಉರಗ ತಜ್ಞ ಮಹೇಶ್ ನಾಯ್ಕ ಎಂಬುವವರನ್ನು ಕರೆಯಿಸಿ ರಕ್ಷಣೆ (Rescue) ಮಾಡಿದ್ದಾರೆ.
ಉತ್ತರ ಕನ್ನಡ, ನ.02: ಜಿಲ್ಲೆಯ ಅಂಕೋಲಾ(Ankola)ದ ಕೃಷ್ಣಾಪುರದಲ್ಲಿ ಪ್ರಶಾಂತ್ ನಾಯ್ಕ ಎಂಬುವವರ ಮನೆಯ ಸಮೀಪ ಬೃಹತ್ ಕಾಳಿಂಗ ಸರ್ಪ(King Cobra)ವೊಂದು ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯ ಉರಗ ತಜ್ಞ ಮಹೇಶ್ ನಾಯ್ಕ ಎಂಬುವವರನ್ನು ಕರೆಯಿಸಿ ರಕ್ಷಣೆ (Rescue) ಮಾಡಿದ್ದಾರೆ. ಈ ಕಾಳಿಂಗ ಸರ್ಪವು ಬರೊಬ್ಬರಿ 13 ಅಡಿ ಉದ್ದವಾಗಿದೆ. ಇನ್ನು ಇದನ್ನು ರಕ್ಷಿಸಿ ಅರಣ್ಯಕ್ಕೆ ತೆಗೆದುಕೊಂಡು ಬಿಡಲಾಗಿದೆ.
ಇನ್ನು ಇತ್ತೀಚೆಗಷ್ಟೇ ಜಿಲ್ಲೆಯ ಕಾರವಾರದ ಮನೆಯೊಂದರಲ್ಲಿ ಅಪರೂಪದ ತೋಳ ಹಾವು ಪತ್ತೆಯಾಗಿತ್ತು. ಕೂಡಲೇ ಗಾಬರಿಗೊಂಡ ಮನೆಯವರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿಗಳು ಎಚ್ಚರಿಕೆಯಿಂದ ಹಾವನ್ನು ಡಬ್ಬವೊಂದರಲ್ಲಿ ಸೆರೆ ಹಿಡಿದು ರಕ್ಷಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
