ಕಾಶ್ಮೀರಿ ಮುಸಲ್ಮಾನರ ಹಿತರಕ್ಷಣೆ ಕಾಯುವ ಹಕ್ಕು ತಮಗಿದೆ ಎನ್ನುತ್ತಿದ್ದಾರೆ ತಾಲಿಬಾನಿಗಳು, ಕಾಶ್ಮೀರಿಗಳು ಮುಸಿಮುಸಿ ನಗುತ್ತಿದ್ದಾರೆ!
ಶಾಹೀನ್ ಗೆ ತಾನು ಹಕ್ಕಾನಿಗಿಂತ ಡಿಫರೆಂಟ್ ಆಗಿ ಯೋಚಿಸುವವನು ಅಂತ ಆಲೋಚನೆಯಿದೆಯೋ ಅಥವಾ ಶಹೀದ್ ಆಗಬೇಕೆಂಬ ಉಮೇದಿಯೋ ಅಂತ ಭಾರತೀಯರಿಗೆ ಅರ್ಥಾವಾಗುತ್ತಿಲ್ಲ.
ತಾಲಿಬಾನಿಗಳು ತಮ್ಮ ನಿಜ ಬಣ್ಣ ತೋರಲಾರಂಭಿಸಿದ್ದಾರೆ. ವಿಶ್ವ ಮುಸ್ಲಿಂ ಸಮುದಾಯದ ಹಿತರಕ್ಷಕರು ತಾವೇ ಎಂಬರ್ಥದ ಅಣಿಮುತ್ತುಗಳು ಈ ರಕ್ತ ಪಿಪಾಸುಗಳ ಬಾಯಿಂದ ಉದರುರುತ್ತಿವೆ. ಅವರು ಯಾರು ಬೇರೆ ಯಾವ ದೇಶದ ಬಗ್ಗೆ ಮಾತಾಡಿದರೂ ಭಾರತ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಆದರೆ ಅಮೆರಿಕನ್ನರ ದಯಾಭಿಕ್ಷೆಯಿಂದ ಒಂದಷ್ಟು ಆಯುದಧಗಳನ್ನು ಸಂಪಾದಿಸಿರುವ ಈ ಭಂಡರು ಕಾಶ್ಮೀರಿ ಮುಸಲ್ಮಾನರ ಪರ ಧ್ವನಿಯೆತ್ತುವ ಹಕ್ಕು ತಮಗಿದೆ ಎಂದು ಹೇಳುತ್ತಿದ್ದಾರೆ. ಅವರ ಮಾತು ಕೇಳಿ ಎಲ್ಲಿಂದ ನಗಬೇಕೋ ಅನ್ನೋದು ಖುದ್ದು ಕಾಶ್ಮೀರಿಗಳಿಗೆ ಗೊತ್ತಾಗುತ್ತಿಲ್ಲ.
ಶುಕ್ರವಾರದಂದು ಒಂದು ಹೇಳಿಕೆಯನ್ನು ನೀಡಿರುವ ಸುಹೇಲ್ ಶಾಹೀನ್ ಹೆಸರಿನ ತಾಲಿಬಾನಿ ವಕ್ತಾರ, ಕಾಶ್ಮೀರ ಮತ್ತು ವಿಶ್ವದ ಯಾವುದೇ ಮೂಲೆಯ ಮಸಲ್ಮಾನರ ಪರ ದನಿಯೆತ್ತುವ ಹಕ್ಕು ತಾಲಿನಬಾನ್ಗಿದೆ ಎಂದು ಮೂರ್ಖನಂತೆ ಮಾತಾಡಿದ್ದಾನೆ. ಇವನಿಗೆ ತನ್ನ ಸಂಘಟನೆಯ ಪ್ರಮುಖ ಲೀಡರ್ ಅನಸ್ ಹಕ್ಕಾನಿ ಏನು ಹೇಳಿದ್ದಾನೆ ಎನ್ನುವ ಬಗ್ಗೆಯೂ ಖಬರಿಲ್ಲ.
ಕಾಶ್ಮೀರ ಯಾವತ್ತ್ತಿಗೂ ಇಂಡಿಯಾದ ಆಂತರಿಕ ವಿಷಯ, ಯಾವ ಕಾರಣಕ್ಕೂ ತಾಲಿಬಾನ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹಕ್ಕಾನಿ ಹೇಳಿದ್ದಾನೆ. ಶಾಹೀನ್ ಗೆ ತಾನು ಹಕ್ಕಾನಿಗಿಂತ ಡಿಫರೆಂಟ್ ಆಗಿ ಯೋಚಿಸುವವನು ಅಂತ ಆಲೋಚನೆಯಿದೆಯೋ ಅಥವಾ ಶಹೀದ್ ಆಗಬೇಕೆಂಬ ಉಮೇದಿಯೋ ಅಂತ ಭಾರತೀಯರಿಗೆ ಅರ್ಥಾವಾಗುತ್ತಿಲ್ಲ.
ಅಮೇರಿಕದ ಜೊತೆ ಫೆಬ್ರುವರಿ 2020 ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ತಾಲಿಬಾನ್ ಯಾವುದೇ ರಾಷ್ಟ್ರದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳ್ಳುವಂತಿಲ್ಲ. ಶಾಹೀನ್ ಗೆ ಇದು ಸಹ ನೆನಪಿದ್ದಂತಿಲ್ಲ. ಅಫ್ಘಾನಿಸ್ತಾನದ ಮುಸ್ಲಿಂ ಮಹಿಳೆಯರ ಮೇಲೆ ತಾಲಿಬಾನಿಬಾನಿಗಳೇ ಘನಘೋರ ಅನಾಚಾರ, ಅತ್ಯಾಚಾರಗಳನ್ನು ನಡೆಸುತ್ತಿದ್ದಾರೆ. ಶಾಹೀನ್ ನಂಥ ಮೂಢ ಅವಿವೇಕಿಗಳಿಗೆ ಅದು ಕಾಣವುದೇ ಇಲ್ಲ.
ಕಾಶ್ಮೀರದ ವಿಮೋಚನೆ ನಮ್ಮ ಗುರಿ ಅಲ್ಲಿರುವ ಮುಸ್ಲಿಮರ ರಕ್ಷಣೆಯೇ ನಮ್ಮ ಉದ್ದೇಶ ಎಂಬ ಘೋಷಣೆಗಳನ್ನು ಕೂಗಿ ಕಾಶ್ಮೀರಿಗಳ ಫೇವರ್ ಪಡೆಯಲಿಚ್ಛಿಸಿದ ಉಗ್ರರ ಅನೇಕ ಗುಂಪುಗಳನ್ನು ಅಲ್ಲಿನ ಮುಸ್ಲಿಮರೇ ಒದ್ದೋಡಿಸಿದ್ದಾರೆ. ಪ್ರಾಯಶಃ ಈಗ ತಾಲಿಬಾನಿಗಳ ಸರದಿ ಅಂತ ಕಾಣುತ್ತೆ!