ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಬೇಕೆನ್ನುವ ಪಾಟೀಲರಿಗೆ ಜನ ಪಾಠ ಕಲಿಸಿದ್ದು ಮರೆತಿದೆ: ರೇಣುಕಾಚಾರ್ಯ

ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಬೇಕೆನ್ನುವ ಪಾಟೀಲರಿಗೆ ಜನ ಪಾಠ ಕಲಿಸಿದ್ದು ಮರೆತಿದೆ: ರೇಣುಕಾಚಾರ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 04, 2021 | 7:17 PM

ಶನಿವಾರದಂದು ದಾವಣಗೆರೆಯಲ್ಲಿ ಮಾತಾಡಿದ ಹೊನ್ನಾಳಿಯ ಬಿಜೆಪಿ ಶಾಸಕ ಎಮ್ ಪಿ ರೇಣಕಾಚಾರ್ಯ ಅವರು, ಪಾಟೀಲ್ ಅವರು ಹಿಂದೆ ಮಾಡಿದ ತಪ್ಪಿನಿಂದ ಪಾಠ ಕಲಿಯದಿರುವುದು ದುರಂತ ಅಂತ ಹೇಳಿದರು.

ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಚರ್ಚೆ, ವಿವಾದ, ಹೇಳಿಕೆ-ಪ್ರತಿ ಹೇಳಿಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಜ್ವಲಂತ ಸಮಸ್ಯೆ ಯಾವುದೇ ಆಗಿರಲಿ, ಅದನ್ನು ಕೊನೆಗಾಣಿಸುವ ಪ್ರಯತ್ನ ನಮ್ಮ ನಾಯಕರು ಬೇಗ ಮಾಡುವುದಿಲ್ಲ. ಸಮಸ್ಯೆ ಬಗೆಗಹರಿದರೆ, ಮುಂಬರುವ ಚುನಾವಣೆಯಲ್ಲಿ ವೋಟಿನ ಭಿಕ್ಷೆ ಕೇಳಲು ಅವರಿಗೆ ಒಂದು ಅಂಶ ಬೇಕಲ್ಲ ಮಾರಾಯ್ರೇ..ಚಾಣಾಕ್ಷರು ಅವರು. 2018ರ ವಿಧಾನ ಸಭೆ ಚುನಾವಣೆಗೆ ಮೊದಲು ಪ್ರತ್ಯೇಕ ಲಿಂಗಾಯತ ಧರ್ಮ ವಿವಾದ ರಾಜ್ಯದ ಮೂರು ಪ್ರಮುಖ ಪಕ್ಷಗಳಿಗೆ- ಬಿಜೆಪಿ, ಕಾಂಗ್ರೆಸ್ ಮತ್ತು ಜನತಾ ದಳ (ಎಸ್) ವೋಟು ಗಿಟ್ಟಿಸುವ ವಿಷಯವಾಗಿ ಲಭಿಸಿತ್ತು. ಲಿಂತಾಯತ ಪ್ರತ್ಯೇಕ ಧರ್ಮ ಅಂತ ಘೋಷಿಸುವುದಾಗಿ ಹೇಳಿದ್ದೇ ಅಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಗೆ ಮುಳುವಾಯಿತು ಎಂದು ರಾಜಕೀಯ ಪರಿಣಿತರು ಹೇಳುತ್ತಾರೆ.

ಆ ವಿಷಯ ಹಾಗಿರಲಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಎಮ್ ಬಿ ಪಾಟೀಲರು, ಇತ್ತೀಚಿಗೆ ನೀಡಿದ ಹೇಳಿಕೆಯೊಂದರಲ್ಲಿ, 2023 ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುನ ಪ್ರಕ್ರಿಯೆ ಅರಂಭಿಸಲಾಗುವುದು ಎಂದು ಹೇಳಿದ್ದು ರಾಜಕೀಯ ವಲಯಗಳಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಶನಿವಾರದಂದು ದಾವಣಗೆರೆಯಲ್ಲಿ ಮಾತಾಡಿದ ಹೊನ್ನಾಳಿಯ ಬಿಜೆಪಿ ಶಾಸಕ ಎಮ್ ಪಿ ರೇಣಕಾಚಾರ್ಯ ಅವರು, ಪಾಟೀಲ್ ಅವರು ಹಿಂದೆ ಮಾಡಿದ ತಪ್ಪಿನಿಂದ ಪಾಠ ಕಲಿಯದಿರುವುದು ದುರಂತ ಅಂತ ಹೇಳಿದರು. ಪಾಟೀಲರು ಹಿಂದಯೂ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವ ಪ್ರಯತ್ನ ಮಾಡಿದರು. ಜನ ಅವರಿಗೆ ತಕ್ಕ ಪಾಠ ಕಲಿಸಿದರು. ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವ ಬದಲು ಈ ಸಮುದಾಯದ ಎಲ್ಲ ಒಳಪಂಗಡಗಳನ್ನು ಒಂದೇ ಛತ್ರದಡಿ ತಂದು ಅಖಿಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಹಿಂದುಳಿದ ವರ್ಗದ ಸ್ಥಾನಮಾನ ದೊರಕಿಸುವ ಪ್ರಯತ್ನ ಮಾಡಿದರೆ ತಾವು ಸಹ ಅದಕ್ಕೆ ಬೆಂಬಲ ನೀಡುವುದಾಗಿ ಅವರು ಹೇಳಿದರು.

ಪಾಟೀಲರೇ, ರೇಣುಕಾಚಾರ್ಯ ಅವರು ಹೇಳಿದ್ದು ಕೇಳಿಸಿತಾ?

ಇದನ್ನೈ ಓದಿ:  ತಾತ ಸುಂದರ್​ ರಾಜ್​ ಜತೆ ರಾಯನ್​ ರಾಜ್​ ಸರ್ಜಾ ತುಂಟಾಟ; ವಿಡಿಯೋ ವೈರಲ್