ಮಂಡ್ಯದಲ್ಲಿ ಮನೇನೂ ಕಟ್ತೀನಿ, ಜನರ ಕೆಲಸವೂ ಮಾಡ್ತೀನಿ, ಟೀಕಿಸುವವರಿಗೆ ಉತ್ತರ ನೀಡುವಷ್ಟು ಸಮಯ ನನಗಿಲ್ಲ: ಸುಮಲತಾ ಅಂಬರೀಷ್
ಸುದ್ದಿಗಾರರೊಂದಿಗೆ ಮಾತಾಡಿದ ಸುಮಲತಾ ಅವರು, ‘ನಾನು ಮನೆ ಕಟ್ಟುತ್ತಿರುವ ಬಗ್ಗೆ ಜನ ತಮ್ಮ ಮನಸ್ಸಿಗೆ ತೋಚಿದ ಹಾಗೆ ಟೀಕಿಸಬಹುದು, ಅವರು ಟೀಕೆಗಳಿಗೆ ಉತ್ತರಿಸುವ ವ್ಯವಧಾನವಾಗಲೀ, ಆಸಕ್ತಿಯಾಗಲೀ ನನಗಿಲ್ಲ,’ ಎಂದು ಹೇಳಿದರು
ರಾಜ್ಯದ ಹಲವಾರು ಪ್ರಮುಖ ನಾಯಕರ ತನ್ನ ವಿರುದ್ಧ, ಅಬ್ಬರದ ಪ್ರಚಾರ ಮತ್ತು ಅಪಪ್ರಚಾರ ನಡೆಸಿದರೂ, ಮಂಡ್ಯದ ಪ್ರತಿನಿಧಿಯಾಗಿ ಸಂಸತ್ತಿಗೆ ಆಯ್ಕೆಯಾದ ಸುಮಲತಾ ಅಂಬರೀಷ್ ಅವರು ಅಕ್ರಮ ಗಣಿಕೆ ವಿರುದ್ಧ ಜೋರಾಗಿ ಧ್ವನಿ ಎತ್ತಿ ಸುದ್ದಿಯಲ್ಲಿದ್ದಾರೆ. ಅವರೇನೇ ಹೇಳಿದರೂ ತನ್ನ ವಿರುದ್ಧವೇ ಮಾತಾಡುತ್ತಿದ್ದಾರೆ ಎಂದು ಭಾವಿಸುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಪ್ರತಿ ಹೇಳಿಕೆಗಳನ್ನು ನೀಡಿ ಮಾಧ್ಯಮಗಳಲ್ಲಿ ರಾರಾಜಿಸುವ ಪ್ರಯತ್ನ ಮಾಡುತ್ತಾರೆ. ನಿಮಗೆ ನೆನಪಿರಬಹುದು, ಮಂಡ್ಯ ಲೋಕ ಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಚಾರ ಮಾಡುವಾಗ ಸುಮಲತಾ ಅವರು ಮಂಡ್ಯ ನಗರದಲ್ಲಿ ಮನೆ ಕಟ್ಟಿ ಅಲ್ಲೇ ವಾಸ ಮಾಡುವ ಭರವಸೆಯನ್ನು ಜನರಿಗೆ ನೀಡಿದ್ದರು. ಆದರೆ, ಕಳೆದೆರಡು ವರ್ಷಗಳಿಂದ ಅವರು ಮನೆ ಕಟ್ಟಿರಲಿಲ್ಲ ಮತ್ತು ಮಂಡ್ಯದಲ್ಲಿ ವಾಸವೂ ಮಾಡಿರಲಿಲ್ಲ. ಈಗ ಅವರು ಮನೆ ಕಟ್ಟುವ ಕೆಲಸ ಪ್ರಾರಂಭಿಸದ್ದಾರೆ. ಇದು ಅವರ ರಾಜಕೀಯ ವಿರೋಧಿಗಳಿಗೆ ಟೀಕಿಸಲು ಅವಕಾಶ ನೀಡಿದಂತಾಗಿದೆ.
ಮಂಡ್ಯದ ಶಾಸಕರು ಸುಮಲತಾ ಅವರನ್ನು ಕೆಣಕುವ ದೃಷ್ಟಿಯಿಂದ, ಎರಡು ವರ್ಷಗಳಿಂದ ಮಂಡ್ಯದ ದೂರವೇ ಇದ್ದ ಸಂಸೆದೆಗೆ ಈಗ್ಯಾಕೆ ಮನೆ ಕಟ್ಟುವ ಮತ್ತು ಮಂಡ್ಯದಲ್ಲಿ ವಾಸ ಮಾಡುವ ಆಸೆ ಹುಟ್ಟಿದೆ ಅಂತ ಪ್ರಶ್ನಿಸಿ, ಚುನಾವಣೆ ಹತ್ತಿರ ಬರುತ್ತಿರುವುದರಿಂದ ಹೀಗೆ ಮಾಡುತ್ತಿದ್ದಾರೆಯೇ ಅಂತ ಕೇಳಿದ್ದಾರೆ.
ಈ ಟೀಕೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಸುಮಲತಾ ಅವರು, ‘ನಾನು ಮನೆ ಕಟ್ಟುತ್ತಿರುವ ಬಗ್ಗೆ ಜನ ತಮ್ಮ ಮನಸ್ಸಿಗೆ ತೋಚಿದ ಹಾಗೆ ಟೀಕಿಸಬಹುದು, ಅವರು ಟೀಕೆಗಳಿಗೆ ಉತ್ತರಿಸುವ ವ್ಯವಧಾನವಾಗಲೀ, ಆಸಕ್ತಿಯಾಗಲೀ ನನಗಿಲ್ಲ,’ ಎಂದು ಹೇಳಿ, ‘ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಆಶ್ವಾಸನೆಯ ಮೇರೆಗೆ ನಾನು ಮಂಡ್ಯದಲ್ಲಿ ಮನೆ ಕಟ್ಟುತ್ತಿದ್ದೇನೆ,’ ಎಂದು ಹೇಳಿದರು.
ಕೇವಲ ಮನೆ ಕಟ್ಟಿದರೆ ಸಾಲದು, ಕ್ಷೇತ್ರದಲ್ಲಿದ್ದುಕೊಂಡು ಜನಪರ ಕೆಲಸವೂ ಮಾಡಬೇಕಾಗುತ್ತದೆ ಎಂದು ಕುಮಾರ ಸ್ವಾಮಿಯವರು ಹೇಳಿದ್ದಾರೆ ಅಂತ ವರದಿಗಾರರು ಅವರ ಗಮನಕ್ಕೆ ತಂದಾಗ, ಸುಮಲತಾ ಅವರು, ‘ಮನೇನೂ ಕಟ್ತೀನಿ ಕೆಲಸಾನೂ ಮಾಡ್ತೀನಿ,’ ಅಂತ ಮಗುಳ್ನಗುತ್ತಾ ಹೇಳಿದರು.
ಇದನ್ನೂ ಓದಿ: ಸಿದ್ದಾರ್ಥ್ ಶುಕ್ಲಾ ಸಾವಿನ ಬಗ್ಗೆ ನಗುತ್ತಾ ಮಾತನಾಡಿದ್ದ ಸಲ್ಮಾನ್ ಖಾನ್: ಶಾಕಿಂಗ್ ವಿಡಿಯೋ ವೈರಲ್