ಅಫ್ಘಾನಿಸ್ತಾನದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಮಾಡುತ್ತೇವೆ ಅಂತ ಭರವಸೆ ನೀಡಿದ ತಾಲಿಬಾನ್ ನಾಯಕರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 01, 2021 | 1:04 AM

ಅಮೇರಿಕದಂಥ ಅತ್ಯಂತ ಪ್ರಬಲ ದೇಶದ ಸೇನೆಯನ್ನು ವಾಪಸ್ಸು ಕಳಿಸುವಲ್ಲಿ ಯಶ ಸಾಧಿಸಿರುವ ತಾಲಿಬಾನಿಗಳು, ಸುಮಾರು 4 ಕೋಟಿ ಜನಸಂಖ್ಯೆಯ ದೇಶವನ್ನು ಹೇಗೆ ಆಳಲಿದ್ದಾರೆ ಎಂಬ ಕುತೂಹಲ ಮಿಕ್ಕೆಲ್ಲ ದೇಶಗಳಿಗಿದೆ.

ಅಮೇರಿಕದ ಸೇನಾ ಪಡೆಗಳು ಅಫ್ಘಾನಿಸ್ತಾನವನ್ನು ಮಂಗಳವಾರದಂದು ಸಂಪೂರ್ಣವಾಗಿ ಖಾಲಿ ಮಾಡಿದ ನಂತರ ತಾಲಿಬಾನಿಗಳು ವಿಜಯೋತ್ಸವ ಆಚರಿಸಿದರು. ದೇಶವನ್ನು ಇನ್ನು ಮುಂದೆ ಆಳಲಿರುವ ತಾಲಿಬಾನಿ ನಾಯಕರು ಒಂದು ಸುದ್ದಿಗೋಷ್ಟಿಯನ್ನು ನಡೆಸಿ, ದಶಕಗಳಿಂದ ಯುದ್ಧಭೂಮಿಯಾಗಿ ಮಾರ್ಪಟ್ಟಿದ್ದ ಅಫ್ಘಾನಿಸ್ತಾನದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭದ್ರತೆ ತರಲು ಶ್ರಮಿಸುವ ವಾಗ್ದಾನ ಮಾಡಿದರು. ಆದರೆ ಅವರ ಭರವಸೆ ಅಫ್ಘಾನಿಸ್ತಾನದ ಜನರಲ್ಲಿ ವಿಶ್ವಾಸ ಮೂಡಿಸಿಲ್ಲ. ಮುಂದೆ ಏನು ಕಾದಿದೆಯೋ ಎಂಬ ಭೀತಿ ಅವರನ್ನು ಆವರಿಸಿದೆ.

ಅಮೇರಿಕದಂಥ ಅತ್ಯಂತ ಪ್ರಬಲ ದೇಶದ ಸೇನೆಯನ್ನು ವಾಪಸ್ಸು ಕಳಿಸುವಲ್ಲಿ ಯಶ ಸಾಧಿಸಿರುವ ತಾಲಿಬಾನಿಗಳು, ಸುಮಾರು 4 ಕೋಟಿ ಜನಸಂಖ್ಯೆಯ ದೇಶವನ್ನು ಹೇಗೆ ಆಳಲಿದ್ದಾರೆ ಎಂಬ ಕುತೂಹಲ ಮಿಕ್ಕೆಲ್ಲ ದೇಶಗಳಿಗಿದೆ. ಅಂತರರಾಷ್ಟ್ರೀಯ ಹಣಕಾಸಿನ ನೆರವಿನಿಂದ ಈ ದೇಶ ನಡೆಯುತ್ತಿದೆ. ಹಿಂದೆ ತೊಂಬತ್ತರ ದಶಕದಲ್ಲಿ ಆಫ್ಘಾನಿಸ್ತಾನವನ್ನು ಆಳಿದ ತಾಲಿಬಾನ್ ಇಸ್ಲಾಮಿಕ್ ಕಟ್ಟಳೆಗಳ ಮೂಲಕ ಅಡಳಿತ ನಡೆಸಿದ್ದರು.

ಆದರೆ, ಅವರ ಆಡಳಿತ ಕೊನೆಗೊಂಡ ಈ 20 ವರ್ಷಗಳ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೆಚ್ಚೆಚ್ಚು ಜನ ಸುಶಕ್ಷಿತರಾಗಿದ್ದಾರೆ, ಯುವ ಪೀಳಿಗೆ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿ ದೇಶಕ್ಕೆ ಮರಳಿದ್ದಾರೆ. ಹೊಸ ತಲೆಮಾರಿನ ಜನರೊಂದಿಗೆ ತಾಲಿಬಾನಿಗಳು ಹೇಗೆ ಏಗುತ್ತಾರೆ ಅನ್ನೋದು ಕಾದು ನೋಡಬೇಕಾದ ಆಂಶವಾಗಿದೆ.

ಅನೇಕ ಯುವಕರು ಅಮೇರಿಕದ ಮತ್ತು ಅದರ ಮಿತ್ರರಾಷ್ಟ್ರಗಳ ಸೇನೆಗಳೊಂದಿಗೆ ಕೆಲಸ ಮಾಡಿದ್ದಾರೆ. ಮೂಲಗಳ ಪ್ರಕಾರ ಎಲ್ಲ ಯೋಧರು ಏರ್ಲಿಫ್ಟ್ ಅದ ಮೇಲೆ ಸುಮಾರು 200 ಅಮೇರಿಕನ್ನರು ಅಫ್ಘಾನಿಸ್ತಾನದಲ್ಲಿ ಉಳಿದುಕೊಂಡಿದ್ದಾರೆ. ಆಡಳಿತ ನಡೆಸಲು ತಾಲಿಬಾನಿಗಳು ಅವರಿಂದ ಮಾರ್ಗದರ್ಶನ ಪಡೆಯಲಾರರು.

ಸೇನೆಗಳ ವಾಪಸ್ಸಾತಿ ನಂತರ, ಬದ್ರಿ ಎಂದು ಕರೆಸಿಕೊಳ್ಳುವ ತಾಲಿಬಾನ್ ಫೈಟರ್ಗಳು ಕಾಬೂಲ್ ವಿಮಾನ ನಿಲ್ದಾಣದ ಪ್ರದಕ್ಷಿಣೆ ಹಾಕಿ ಫೋಟೋಗಳನ್ನು ತೆಗೆಸಿಕೊಂಡರು.

ಇದನ್ನೂ ಓದಿ:   Viral Video: ಮೊಮ್ಮಗನೊಂದಿಗೆ 89 ವರ್ಷದ ಅಜ್ಜಿಯ ಸಕತ್ ಡಾನ್ಸ್; ವಿಡಿಯೋ ನೋಡಿದ್ರೆ ನೀವೂ ಫಿದಾ ಆಗ್ತೀರಾ 

Follow us on