ಬಿದಿರು ಕಳಲೆ ಸಾಂಬಾರ್; ವರ್ಷಕ್ಕೆ ಒಮ್ಮೆಯಾದರೂ ಮಾಡಿ ಸವಿಯಿರಿ
ಆರೋಗ್ಯಕರವಾದ ಅಡುಗೆ ಇಷ್ಟಪಡುವವರಿಗಾಗಿ ಇಂದು ನಾವು ಬಿದಿರು ಕಳಲೆ ಸಾಂಬಾರ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು( Cooking) ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಕಾರ ಇಷ್ಟಪಡುವವರು ಇರುತ್ತಾರೆ. ಇನ್ನು ಆರೋಗ್ಯಕರವಾದ ಅಡುಗೆ ಇಷ್ಟಪಡುವವರು ಇರುತ್ತಾರೆ. ಹೀಗಾಗಿ ಇಂದು ನಾವು ಬಿದಿರು ಕಳಲೆ ಸಾಂಬಾರ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಬಿದಿರು ಕಳಲೆ ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು ಸಾಸಿವೆ, ಕರಿಬೇವು, ಅಡುಗೆ ಎಣ್ಣೆ, ಬಿದಿರು ಕಳಲೆ, ಗೋರೆ ಕಾಯಿ, ಬದನೆಕಾಯಿ, ಕೋಸು, ಹುರುಳಿ ಕಾಯಿ, ಈರುಳ್ಳಿ, ಟೊಮೆಟೋ, ನುಗ್ಗೆಕಾಯಿ, ಮೂಲಂಗಿ, ಆಲೂಗಡ್ಡೆ, ಸೀಮೆ ಬದನೆಕಾಯಿ, ಕ್ಯಾರೆಟ್, ಹರವೆ ಸೊಪ್ಪು, ಮೆಂತೆ ಸೊಪ್ಪು, ಸಬ್ಬಸಿಗೆ ಸೊಪ್ಪು, ನುಗ್ಗೆ ಸೊಪ್ಪು, ಬಟಾಣಿ, ಹೆಸರು ಕಾಳು, ಅವರೆ ಕಾಳು, ಮಡಕೆ ಕಾಳು, ಹುರುಳಿ ಕಾಳು, ಬೆಳ್ಳುಳ್ಳಿ, ಬ್ಯಾಡಗಿ ಮೆಣಸಿನಕಾಯಿ, ಕಾಯಿ ತುರಿ, ಕೊತ್ತಂಬರಿ ಸೊಪ್ಪು.
ಬಿದಿರು ಕಳಲೆ ಸಾಂಬಾರ್ ಮಾಡುವ ವಿಧಾನ
ಹುರಿದ ಬ್ಯಾಡಗಿ ಮೆಣಸಿನಕಾಯಿ, ಕರಿ ಮೆಣಸು, ಬೆಳ್ಳುಳ್ಳಿ, ಕಾಯಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಬಳಿಕ ಒಂದು ಕುಕ್ಕರ್ಗೆ ಬಿದಿರು ಕಳಲೆ, ಗೋರೆ ಕಾಯಿ, ಬದನೆಕಾಯಿ, ಕೋಸು, ಹುರುಳಿ ಕಾಯಿ, ಈರುಳ್ಳಿ, ಟೊಮೆಟೋ, ನುಗ್ಗೆಕಾಯಿ, ಮೂಲಂಗಿ, ಆಲೂಗಡ್ಡೆ, ಸೀಮೆ ಬದನೆಕಾಯಿ, ಕ್ಯಾರೆಟ್, ಹರವೆ ಸೊಪ್ಪು, ಮೆಂತೆ ಸೊಪ್ಪು, ಸಬ್ಬಸಿಗೆ ಸೊಪ್ಪು, ನುಗ್ಗೆ ಸೊಪ್ಪು, ಬಟಾಣಿ, ಹೆಸರು ಕಾಳು, ಅವರೆ ಕಾಳು, ಮಡಕೆ ಕಾಳು, ಹುರುಳಿ ಕಾಳು, ಉಪ್ಪು ಹಾಕಿ ಬೇಯಿಸಿ. ಬಳಿಕ ಬೇಯಿಸಿದ ತರಕಾರಿಯನ್ನು ಒಂದು ಪಾತ್ರೆಗೆ ಹಾಕಿ, ರುಬ್ಬಿದ ಮಸಾಲೆ ಹಾಕಿ. ನಂತರ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಹಾಕಿದರೆ ಬಿದಿರು ಕಳಲೆ ಸಾಂಬಾರ್ ಸವಿಯಲು ಸಿದ್ಧ.
ಇದನ್ನೂ ಓದಿ:
ಗಾರ್ಲಿಕ್ ಚೀಸ್ಕಾರ್ನ್ ಸ್ಯಾಂಡ್ವಿಚ್; ಮನೆಯಲ್ಲಿ ಇಂದೇ ಮಾಡಿ ಸವಿಯಿರಿ
ಉತ್ತರ ಕರ್ನಾಟಕ ಸ್ಪೆಷಲ್ ಮೆಂತೆ ಸೊಪ್ಪು ಕಡಬು; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
Published on: Sep 01, 2021 08:53 AM
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

