ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗರ್- ಶಿವಲಿಂಗೇಗೌಡ

Updated on: Feb 04, 2026 | 2:48 PM

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಲಂಚ ಆರೋಪ ಪ್ರಕರಣ ಸಂಬಂಧ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ (BJP And JDS) ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಸಚಿವ ತಿಮ್ಮಾಪುರ ರಾಜೀನಾಮೆ ನೀಡಬೇಕೆಂದು ಧರಣಿ ನಡೆಸಿವೆ. ನಿನ್ನೆ(ಫೆಬ್ರವರಿ 03) ಅಹೋರಾತ್ರಿ ಧರಣಿ ನಡೆಸಿ ತಿಮ್ಮಾಪುರ ರಾಜೀನಾಮೆಗೆ ಪಟ್ಟು ಹಿಡಿದಿದ್ದು, ಇಂದು (ಫೆ.04)  ಸಹ ಪ್ರತಿಭಟನೆ ಮುಂದುವರೆಸಿವೆ. ಈ ವೇಳೆ ಬಿಜೆಪಿ ಶಾಸಕ ಶರಣು ಸಲಗರ್ ಹಾಗೂ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವೈಯಕ್ತಿಕವಾಗಿ ಬೈದಾಡಿಕೊಂಡಿಕೊಂಡಿರುವ ಪ್ರಸಂಗ ನಡೆದಿದೆ.

ಬೆಂಗಳೂರು, (ಫೆಬ್ರವರಿ 04): ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಲಂಚ ಆರೋಪ ಪ್ರಕರಣ ಸಂಬಂಧ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ (BJP And JDS) ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಸಚಿವ ತಿಮ್ಮಾಪುರ ರಾಜೀನಾಮೆ ನೀಡಬೇಕೆಂದು ಧರಣಿ ನಡೆಸಿವೆ. ನಿನ್ನೆ(ಫೆಬ್ರವರಿ 03) ಅಹೋರಾತ್ರಿ ಧರಣಿ ನಡೆಸಿ ತಿಮ್ಮಾಪುರ ರಾಜೀನಾಮೆಗೆ ಪಟ್ಟು ಹಿಡಿದಿದ್ದು, ಇಂದು (ಫೆ.04)  ಸಹ ಪ್ರತಿಭಟನೆ ಮುಂದುವರೆಸಿವೆ. ಈ ವೇಳೆ ಬಸವಕಲ್ಯಾಣ  ಬಿಜೆಪಿ  ಶಾಸಕ ಶರಣು ಸಲಗರ್ ಹಾಗೂ ಅರಸೀಕರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ವೈಯಕ್ತಿಕವಾಗಿ ಬೈದಾಡಿಕೊಂಡಿಕೊಂಡಿರುವ ಪ್ರಸಂಗ ನಡೆದಿದೆ.

ದೇವೇಗೌಡ್ರಿಗೆ ದೋಖಾ ಮಾಡಿದ ಶಿವಲಿಂಗೇಗೌಡಗೆ ಧಿಕ್ಕಾರ ಎಂದು ಎಂದು ಶರಣು ಸಲಗರ್ ಘೋಷಣೆ ಕೂಗಿದರು. ಇದರಿಂದ ಕೆರಳಿದ ಶಿವಲಿಂಗೇಗೌಡ, ಚಿಂಚೋಳಿಯಲ್ಲಿ ನಿನ್ನ ಹೆಂಡತಿಯನ್ನು ತಹಶೀಲ್ದಾರ್ ಬಿಟ್ಟುಕೊಂಡು ಎಷ್ಟು ದುಡ್ಡು ಹೊಡೆದಿದ್ದೀಯಾ ಎಂದು ಗೊತ್ತಿದೆ. ನಿಮಗೆ ಮಾನ, ಮರ್ಯಾದೆ ಇದೆಯಾ ಎಂದು ಆಕ್ರೋಶ ಕಿಡಿಕಾರಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 04, 2026 02:41 PM