ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರಿಕೆ

Edited By:

Updated on: Apr 27, 2025 | 12:31 PM

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪುರಾಣ ಪ್ರಸಿದ್ಧ ಬಪ್ಪನಾಡು‌ ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮರಥೋತ್ಸವ ವೇಳೆ ತೇರು (Chariot Collapse) ಮುಗುಚಿ ಬಿದ್ದಿತ್ತು. ತೇರಿನ ಒಳಗೆ ಕುಳಿತಿದ್ದ ಅರ್ಚಕರು ಸೇರಿದಂತೆ ಸಾವಿರಾರು ಭಕ್ತರು ಪವಾಡ ಸದೃಶ ಎಂಬಂತೆ ಪಾರಾಗಿದ್ದರು. ಆದರೆ ಇದೀಗ ಈ ಘಟನೆ ಮಾತ್ರ ತುಳುನಾಡಿನ ಕಾರ್ಣಿಕ ದೈವದ (Daiva) ರೋಷಾವೇಷಕ್ಕೆ ಕಾರಣವಾಗಿದೆ. ಈ ಬಗ್ಗೆ ದೈವರಾಧಕ ತಮ್ಮಣ್ಣ ಶೆಟ್ಟಿ ಜೊತೆ ನಮ್ಮ ಪ್ರತಿನಿಧಿ ಅಶೋಕ್ ನಡೆಸಿರುವ ಮಾತುಕತೆ ಇಲ್ಲಿದೆ.

ಮಂಗಳೂರು, (ಏಪ್ರಿಲ್ 27): ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪುರಾಣ ಪ್ರಸಿದ್ಧ ಬಪ್ಪನಾಡು‌ ದುರ್ಗಾಪರಮೇಶ್ವರಿ ದೇವಿಯ ಬ್ರಹ್ಮರಥೋತ್ಸವ ವೇಳೆ ತೇರು (Chariot Collapse) ಮುಗುಚಿ ಬಿದ್ದಿತ್ತು. ತೇರಿನ ಒಳಗೆ ಕುಳಿತಿದ್ದ ಅರ್ಚಕರು ಸೇರಿದಂತೆ ಸಾವಿರಾರು ಭಕ್ತರು ಪವಾಡ ಸದೃಶ ಎಂಬಂತೆ ಪಾರಾಗಿದ್ದರು. ಆದರೆ ಇದೀಗ ಈ ಘಟನೆ ಮಾತ್ರ ತುಳುನಾಡಿನ ಕಾರ್ಣಿಕ ದೈವದ (Daiva) ರೋಷಾವೇಷಕ್ಕೆ ಕಾರಣವಾಗಿದೆ. ಈ ಬಗ್ಗೆ ದೈವರಾಧಕ ತಮ್ಮಣ್ಣ ಶೆಟ್ಟಿ ಜೊತೆ ನಮ್ಮ ಪ್ರತಿನಿಧಿ ಅಶೋಕ್ ನಡೆಸಿರುವ ಮಾತುಕತೆ ಇಲ್ಲಿದೆ. ಇಂತಹ ಘಟನೆಗಳು ತುಳುನಾಡಿನಲ್ಲಿ ಸಂಭವಿಸಬಾರದಿತ್ತು. ರಥ ಬಿದ್ದ ವಿಚಾರ ಜಾರಂದಾಯ ದೈವಕ್ಕೆ ಕೋಪ ಬಂದಿದೆ. ನನ್ನ ತಾಯಿಯ(ದುರ್ಗಾಪರಮೇಶ್ವರಿ) ಪರಿಸ್ಥಿತಿ ಹೀಗಾಗಲು ನೀವು ಕಾರಣ ಎಂದು ದೈವ ಆಕ್ರೋಶಗೊಂಡಿದೆ. ದೇವಸ್ಥಾನಕ್ಕೆ ಒಳಪಟ್ಟ ಅನೇಕರು ಮಾಡಿದ ತಪ್ಪಿನಿಂದ ಹೀಗಾಗಿದೆ. ಮುಂದೆ ಸರಿಮಾಡಿಕೊಳ್ಳದಿದ್ದರೆ ದೊಡ್ಡ ಅನಾಹುತವಾಗುತ್ತೆ ಎಂದು ದೈವ ಸೂಚನೆ ನೀಡಿದೆ. ಇದು ಮಾಡಿದ ತಪ್ಪನ್ನ ತಿದ್ದಿಕೊಳ್ಳುವ ಅವಕಾಶ ಎಂದರು.

ಬಪ್ಪನಾಡಿಗೆ ಮಾತ್ರವಲ್ಲ ಇಡಿ ದಕ್ಷಿಣ ಕನ್ನಡಕ್ಕೆ ಇದೊಂದು ಸೂಚನೆ. ದೈವರಾಧನೆ ದಾರಿ ತಪ್ಪುತ್ತಿದೆ ದಕ್ಷಿಣ ಕನ್ನಡಕ್ಕೆ ಎಚ್ಚರಿಕೆಯಿದು. ದೈವರಾಧನೆಯಲ್ಲಿ ಅಹಂಕಾರ, ಪ್ರತಿಷ್ಠೆ ಬಿಡು ಎಂದು ದೈವ ಸಂದೇಶ ನೀಡಿದೆ. ತುಳುನಾಡಿನಲ್ಲಿ ದೇವಸ್ಥಾನಗಳಿಗೂ, ದೈವರಾಧನೆಗೂ ಅವಿನಭಾವ ಸಂಬಂಧವಿದೆ. ಇಲ್ಲಿ ಯಾವುದೇ ದೇವಸ್ಥಾನಗಳ ಉತ್ಸವಾಧಿಗಳನ್ನು ದೈವಗಳೆ ಮುಂದೆ ನಿಂತು‌ ಮಾಡಿಸೋದು. ಹೀಗಾಗಿ ದೈವಗಳಿಗೆ ಸಾಕಷ್ಟು ಮಹತ್ವವಿದೆ ಎಂದು ಹೇಳಿದರು.