ಕನ್ನಡಿಗರ ಮೇಲೆ ದರ್ಪ ತೋರಿದ ತಮಿಳು ಪುಂಡರು: ಕನ್ನಡ ಧ್ವಜ ಬಿಚ್ಚುವಂತೆ ಟಿಟಿ ವಾಹನ ಅಡ್ಡ ಹಾಕಿ ರೌಡಿಸಂ

Edited By:

Updated on: Feb 18, 2026 | 10:56 AM

ಶಬರಿಮಲೆಗೆ ತೆರಳುತ್ತಿದ್ದ ಕನ್ನಡಿಗರ ಟಿಟಿ ಮೇಲೆ ಅಳವಡಿಸಿದ್ದ ಕನ್ನಡ ಬಾವುಟ ತೆಗೆಯಬೇಕೆಂದು ತಮಿಳುನಾಡಿನ ಕೆಲ ಪುಂಡರು ದುಂಡಾವರ್ತನೆ ತೋರಿದ ಘಟನೆ ತಮಿಳುನಾಡಿನ ತೂತುಕುಡಿ ಸಮೀಪ ನಡೆದಿದೆ. ಚಾಮರಾಜನಗರದಿಂದ ಭಕ್ತರು ಟಿಟಿ ವಾಹನದಲ್ಲಿ ಶಬರಿಮಲೆಗೆ ತೆರಳುತ್ತಿದ್ದರು. ಇದರೊಂದಿಗೆ, ತಮಿಳುನಾಡಿನಲ್ಲಿ ಕನ್ನಡಿಗರ ಮೇಲಿನ ವರ್ತನೆ ಕುರಿತು ಮತ್ತೆ ಚರ್ಚೆ ಶುರುವಾಗಿದ್ದು, ಆಕ್ರೋಶ ವ್ಯಕ್ತವಾಗಿದೆ.

ಚಾಮರಾಜನಗರ, ಫೆಬ್ರವರಿ 18: ಕನ್ನಡ ಬಾವುಟ ಹಾಕಿದ್ದ ವಾಹನವನ್ನು ತಡೆದು ತಮಿಳು ಯುವಕರು ಗಲಾಟೆ ನಡೆಸಿದ ಘಟನೆ ಕನ್ನಡಿಗರಲ್ಲಿ ಆಕ್ರೋಶ ಹುಟ್ಟಿಸಿದೆ. ಚಾಮರಾಜನಗರ ಜಿಲ್ಲೆಯಿಂದ ಶಬರಿಮಲೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಚಾಮರಾಜನಗರದ ಹರದನಹಳ್ಳಿಯ ಮಣಿ ನಾಯ್ಕ ಹಾಗೂ ಸ್ನೇಹಿತರು ಟಿಟಿ ವಾಹನದಲ್ಲಿ ಕನ್ನಡ ಧ್ವಜ ಅಳವಡಿಸಿಕೊಂಡು ಯಾತ್ರೆಗೆ ತೆರಳುತ್ತಿದ್ದಾಗ, ತಮಿಳುನಾಡಿನ ತೂತುಕುಡಿ ಸಮೀಪ ವಾಹನವನ್ನು ಅಡ್ಡಹಾಕಿ ಕೆಲ ತಮಿಳು ಯುವಕರು ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ವಾಹನದಲ್ಲಿದ್ದ ಕನ್ನಡ ಧ್ವಜವನ್ನು ತೆಗೆದುಹಾಕುವಂತೆ ಒತ್ತಾಯಿಸಿ, ‘ತಮಿಳುನಾಡಿನಲ್ಲಿ ಕನ್ನಡ ಧ್ವಜ ಹಾಕಲು ಅವಕಾಶ ಇಲ್ಲ’ ಎಂದು ಎಚ್ಚರಿಕೆ ನೀಡಿದರೆಂದು ಆರೋಪಿಸಲಾಗಿದೆ.

ಘಟನೆ ವೇಳೆ ಪೊಲೀಸರು ಸ್ಥಳದಲ್ಲಿದ್ದರೂ, ಯುವಕರು ರೌಡಿಸಂ ತೋರಿದರೆಂಬ ಆರೋಪ ಕೇಳಿಬಂದಿದ್ದು, ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಯಾತ್ರೆಗೆ ತೆರಳಿದ್ದ ಅಯ್ಯಪ್ಪ ಮಾಲಾಧಾರಿಗಳು ಈ ರೀತಿಯ ಘಟನೆಗಳನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ